ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಸರಕಾರ ಸೂಕ್ಷ್ಮತೆ ಕಳೆದುಕೊಂಡಿದೆ : ರಾಹುಲ್

By Prasad
|
Google Oneindia Kannada News

ನವದೆಹಲಿ, ಜುಲೈ 03 : "ವಿಕಲಚೇತನರ ಗಾಲಿಕುರ್ಚಿ, ಬ್ರೈಲ್ ಟೈಪ್ ರೈಟರ್ ಮುಂತಾದ ವಸ್ತುಗಳ ಮೇಲೆ ಸರಕು ಮತ್ತು ಸೇವಾ ತೆರಿಗೆಯನ್ನು ಹೇರಿರುವುದು ಇಂಥ ದುರ್ಬಲ ವರ್ಗದ ಬಗೆಗೆ ನರೇಂದ್ರ ಮೋದಿ ಸರಕಾರ ಸೂಕ್ಷ್ಮತೆ ಕಳೆದುಕೊಂಡಿರುವುದು ಗೊತ್ತಾಗುತ್ತದೆ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ವಿಕಲಚೇತನರಿಗೆ ಬೇಕಾಗುವ ಈ ಪರಿಕರಗಳ ಮೇಲೆ ಹೇರಲಾಗಿರುವ 'ವಿಕಲಚೇತನ ತೆರಿಗೆ'ಯನ್ನು ಕೂಡಲೆ ಹಿಂಪಡೆಯಬೇಕು. ಇಲ್ಲದಿದ್ದರೆ, ಲಕ್ಷಾಂತರ ವಿಕಲಚೇತನರು ಮತ್ತಷ್ಟು ಸಂಕಷ್ಟಕ್ಕೀಡಾಗುತ್ತಾರೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ಟ್ವೀಟ್ ಮಾಡಿದ್ದಾರೆ.

ಅಸಮರ್ಥ ಸರಕಾರದಿಂದ ಜಿಎಸ್ ಟಿ ಜಾರಿ: ರಾಹುಲ್ ಟೀಕೆಅಸಮರ್ಥ ಸರಕಾರದಿಂದ ಜಿಎಸ್ ಟಿ ಜಾರಿ: ರಾಹುಲ್ ಟೀಕೆ

Insensitive Centre must roll back disability tax under GST: Rahul Gandhi

ಜಿಎಸ್ಟಿಯನ್ನು ಜಾರಿಗೆ ತಂದು ಇಂಥ ಅವಲಂಬಿತ ವ್ಯಕ್ತಿಗಳ ಕೈಹಿಡಿಯುವ ಬದಲು ನರೇಂದ್ರ ಮೋದಿ ಸರಕಾರ ಕೈಬಿಟ್ಟಿದೆ. ಗಾಲಿ ಕುರ್ಚಿ, ಬ್ರೈಲ್ ಟೈಪ್ ರೈಟರ್, ಬ್ರೈಲ್ ಪೇಪರ್ ಮುಂತಾದ ವಸ್ತುಗಳ ಮೇಲೆ ಶೇ.5, ಶೇ.12 ಮತ್ತು ಶೇ.18ರಷ್ಟು ತೆರಿಗೆಯನ್ನು ವಿಧಿಸಲಾಗಿದೆ.

ಬ್ರೈಲ್ ಟೈಪ್ ರೈಟರ್ ಮೇಲೆ ಶೇ.18ರಷ್ಟು, ಬ್ರೈಲ್ ಪೇಪರ್ ಮೇಲೆ ಶೇ.12ರಷ್ಟು, ಗಾಲಿ ಕುರ್ಚಿ ಮತ್ತು ತತ್ ಸಂಬಂಧಿ ವಸ್ತುಗಳ ಮೇಲೆ ಶೇ.5ರಷ್ಟು, ಶ್ರವಣ ಸಾಧನಗಳ ಮೇಲೆ ಶೇ.12ರಷ್ಟು ತೆರಿಗೆಯನ್ನು ಹೇರಲಾಗಿದೆ. ಜಿಎಸ್ಟಿ ಜಾರಿಯಾಗುವ ಮುನ್ನ ಈ ವಸ್ತುಗಳನ್ನು ತೆರಿಗೆಯಿಂದ ಮುಕ್ತಗೊಳಿಸಲಾಗಿತ್ತು.

English summary
GST on disability aids like wheelchairs & Braille typewriters, once again shows this Govt's complete insensitivity twds our most vulnerable. Congress Party demands a full roll back of this 'disability tax', Rahul Gandhi vents his ire on Narendra Modi govt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X