ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಹೆಮ್ಮೆ ಐಎನ್ ಎಸ್ ಕಲ್ವಾರಿ: ತಿಳಿಯಬೇಕಾದ 7 ಸಂಗತಿ

|
Google Oneindia Kannada News

ಭಾರತೀಯ ರಕ್ಷಣಾ ಕ್ಷೇತ್ರದ ಮೈಲಿಗಲ್ಲು ಎಂದೇ ಕರೆಯಿಸಿಕೊಂಡ ಐಎನ್ ಎಸ್ ಕಲ್ವಾರಿಯನ್ನು ಇಂದು(ಡಿ.14) ಪ್ರಧಾನಿ ನರೇಂದ್ರ ಮೋದಿಯವರು ಮುಂಬೈಯ ನೌಕಾನೆಲೆಯಲ್ಲಿ ಲೋಕಾರ್ಪಣೆಗೊಳಿಸಿದರು.

ಮೊಟ್ಟ ಮೊದಲ ಮೇಡ್ ಇನ್ ಇಂಡಿಯಾ ಸಬ್ ಮೆರಿನ್ ಲೋಕಾರ್ಪಣೆಮೊಟ್ಟ ಮೊದಲ ಮೇಡ್ ಇನ್ ಇಂಡಿಯಾ ಸಬ್ ಮೆರಿನ್ ಲೋಕಾರ್ಪಣೆ

ನಮ್ಮದೇ ನೆಲದಲ್ಲಿ ಸೃಷ್ಟಿಯಾದ ಕೂಸು ಎಂಬ ಕಾರಣಕ್ಕೆ ಕಲ್ವಾರಿ ಮೇಲೆ ತುಸು ಹೆಚ್ಚೇ ಪ್ರೀತಿ ಭಾರತೀಯರಿಗೆ! ಹೌದು, ಐಎನ್ ಎಸ್ ಕಲ್ವಾರಿ ಮೊಟ್ಟ ಮೊದಲ ಮೇಡ್ ಇನ್ ಇಂಡಿಯಾ ಸ್ಕಾರ್ಪಿನ್ ಕ್ಲಾಸ್ ಸಬ್ ಮೆರಿನ್. ಭಾರತದಲ್ಲಿರುವ ಇದುವರೆಗಿನ 15 ಸಬ್ ಮೆರಿನ್ ಗಳಿಗಿಂತ ಹೆಚ್ಚು ತಾಂತ್ರಿಕವಾಗಿ ಮುಂದಿರುವ ಈ ಜಲಾಂತರ್ಗಾಮಿ ನೌಕೆಯನ್ನು ನೀರೊಳಗೆ ಎಲ್ಲಿದೆ ಎಂದು ಪತ್ತೆ ಮಾಡುವುದು ಸುಲಭದ ಕೆಲಸವಲ್ಲ..

ಭಾರತೀಯ ನೌಕಾದಿನ: ನೌಕಾಪಡೆ ಕುರಿತು ಹೆಮ್ಮೆಪಡುವ 10 ಸಂಗತಿಭಾರತೀಯ ನೌಕಾದಿನ: ನೌಕಾಪಡೆ ಕುರಿತು ಹೆಮ್ಮೆಪಡುವ 10 ಸಂಗತಿ

ಮೂರುಕಡೆ ಕಡಲಿನಿಂದಲೇ ಸುತ್ತುವರಿಸಿಕೊಂಡಿರುವ ಭಾರತಕ್ಕೆ ಭಯೋತ್ಪಾದಕರು, ಕಡಲ್ಗಳ್ಳರು, ಶತ್ರುರಾಷ್ಟ್ರದ ಸೈನಿಕರಿಂದ ರಕ್ಷಣೆ ಪಡೆಯುವುದಕ್ಕೆ ಜಲಾಂತರ್ಗಾಮಿ ನೌಕೆಗಳು ಅತ್ಯಗತ್ಯ. ಆದ್ದರಿಂದಲೇ ಇಂದು ಪ್ರಧಾನಿ ಮೋದಿ ಐಎನ್ ಎಸ್ ಕ್ಲವಾರಿಯನ್ನು ಅಧಿಕೃತವಾಗಿ ಲೋಕಾರ್ಪಣೆಗೊಳಿಸುತ್ತಿದ್ದಂತೆಯೇ ಒಂದು ಥರದ ಭದ್ರತಾ ಭಾವ ಮನಸ್ಸಿನಲ್ಲಿ ಮೊಳೆತುಕೊಂಡಿತ್ತು. ಸರ್ಕಾರದ ಪ್ರಾಜೆಕ್ಟ್ 75 ಅಡಿಯಲ್ಲಿ ಮುಂಬೈಯ ಮಜಾಗಾನ್ ಡಾಕ್ ಲಿಮಿಟೆಡ್ ತಯಾರಿಸಿದಈ ಜಲಾಂತರ್ಗಾಮಿ ನೌಕೆ ಇದೀಗ ಭಾರತೀಯ ನೌಕಾಪಡೆಯ ಅತ್ಯಂತ ಬಲಾಡ್ಯ ಸದಸ್ಯ! (ಚಿತ್ರಕೃಪೆ: ಎಎನ್ ಐ ಟ್ವಿಟ್ಟರ್ ಮತ್ತು ಪಿಟಿಐ)

ಐಎನ್ ಎಸ್ ಕಲ್ವಾರಿಯ ಕುರಿತು ತಿಳಿಯಬೇಕಾದ 7 ಸಂಗತಿ ಇಲ್ಲಿದೆ.

2020ರೊಳಗೆ ಆರು ಸಬ್ ಮೆರಿನ್!

2020ರೊಳಗೆ ಆರು ಸಬ್ ಮೆರಿನ್!

2006 ರಲ್ಲೇ 6 ಸ್ಕಾರ್ಪಿನ್ ಕ್ಲಾಸ್ ಸಬ್ ಮೆರಿನ್ ಗಳನ್ನು 3 ಶತಕೋಟಿ ಡಾಲರ್ ವೆಚ್ಚದಲ್ಲಿ ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿತ್ತು. ಆ ಆರರಲ್ಲಿ ಐಎನ್ ಎಸ್ ಕಲ್ವಾರಿ ಹೆಸರಿನಲ್ಲಿ ಇಂದು ಲೋಕಾರ್ಪಣೆಗೊಂಡಿದ್ದು, ಉಳಿದ ಐದನ್ನು 2020ರೊಳಗೆ ನೌಕಾಪಡೆಗೆ ಒಪ್ಪಿಸುವ ಯೋಚನೆ ಸರ್ಕಾರದ್ದು.

ಅತ್ಯಂತ ಆಧುನಿಕ ತಂತ್ರಜ್ಞಾನ

ಅತ್ಯಂತ ಆಧುನಿಕ ತಂತ್ರಜ್ಞಾನ

ಕಲ್ವಾರಿಯು ಅತ್ಯಂತ ಆಧುನಿಕ ತತ್ರಜ್ಞಾನವನ್ನು ಹೊಂದಿದ್ದು, ಇದರಲ್ಲಿರುವ ಡಿಸೆಲ್-ಇಲೆಕ್ಟ್ರಿಕ್ ಮೋಟಾರ್ ಯಾವುದೇ ಶಬ್ದ ಮಾಡದಿರುವುದರಿಂದ ಇದು ಎಲ್ಲಿದೆ ಎಂದು ಎದುರಾಳಿಗಳಿಗೆ ಪತ್ತೆ ಮಾಡುವುದೇ ಕಷ್ಟವಾಗುತ್ತದೆ.

ಭಾರದ ಸ್ಫೋಟಕಗಳನ್ನೂ ಹೊತ್ತೊಯ್ಯುವ ಸಾಮರ್ಥ್ಯ

ಭಾರದ ಸ್ಫೋಟಕಗಳನ್ನೂ ಹೊತ್ತೊಯ್ಯುವ ಸಾಮರ್ಥ್ಯ

ಇದು ಅತ್ಯಂತ ಭಾರದ ಸ್ಫೋಟಕಗಳನ್ನೂ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದು, ಇದು ನೀರಿನೊಳಗಿಮದ ಮತ್ತು ಹೊರಗಿನಿಂದಲೂ ಸ್ಫೋಟಕಗಳನ್ನು ಎಸೆಯುವ ಸಾಮರ್ಥ್ಯ ಹೊಂದಿದೆ.

ಜಲಾಂತರ್ಗಾಮಿಯ ಸ್ವರೂಪ

ಜಲಾಂತರ್ಗಾಮಿಯ ಸ್ವರೂಪ

ಕಲ್ವಾರಿ ಜಲಾಂತರ್ಗಾಮಿಯು 67.5 ಮೀ ಉದ್ದ ಮತ್ತು 12.3 ಮೀ. ಎತ್ತರವಾಗಿದೆ. ಭಾರತದಲ್ಲಿ ಈಗ ಕೇವಲ 15 ಜಲಾಂತರ್ಗಾಮಿಗಳಿದ್ದು ಅವೆಲ್ಲವೂ ರಷ್ಯಾ, ಜರ್ಮನಿಯ ತಂತ್ರಜ್ಞಾನದಲ್ಲಿ ನಿರ್ಮಾಣವಾದವು. ಚೀನಾದಲ್ಲಿ ಭಾರತಕ್ಕಿಂತ ನಾಲ್ಕು ಪಟ್ಟು ಹೆಚ್ಚು ಜಲಾಂತರ್ಗಾಮಿ ನೌಕೆಗಳಿವೆ ಎಂಬುದು ಭಾರತ ಸದಾ ಆತಂಕದಲ್ಲಿರಬೇಕಾದ ಸೂಚನೆಯಾಗಿದೆ.

ಕಲ್ವಾರಿಯ ಹೃದಯವಿರುವುದು ಇಲ್ಲಿ!

ಕಲ್ವಾರಿಯ ಹೃದಯವಿರುವುದು ಇಲ್ಲಿ!

ಕ್ಲವಾರಿ ಜಲಾಂತರ್ಗಾಮಿಯ ಹೃದಯವಿರುವುದು ಅದರ ಆಯುಧಾಗಾರದಲ್ಲಿ! ಕಲ್ವಾರಿಯಲ್ಲಿ ಉಪಯೋಗಿಸುವುದು ಸಬ್ಟಿಕ್ಸ್ (Submarine Tactical Integrated Combat System) ಪದ್ಧತಿಯು ಜಲಾಂತರ ಶಬ್ದಶೋಧಕ(ಸೋನಾರ್)ಗಳ ಮೂಲಕ ಮಾಹಿತಿ ಕಲೆಹಾಕಿ ಆಯುದ್ಧಗಳನ್ನು ಎಲ್ಲಿ ಗುರಿಯಾಗಿಸಬೇಕು ಎಂಬುದನ್ನು ಪತ್ತೆಮಾಡಬಲ್ಲದು.

ಪತ್ತೆಧಾರಿ ಕೆಲಸ ಮಾಡುವ ಕಲ್ವಾರಿ

ಪತ್ತೆಧಾರಿ ಕೆಲಸ ಮಾಡುವ ಕಲ್ವಾರಿ

ಈ ಜಲಾಂತರ್ಗಾಮಿಯು ತನ್ನಲ್ಲಿರುವ ಕಡಿಮೆ ಬೆಳಕಿನ ಕ್ಯಾಮೆರಾ ಮತ್ತು ಲೇಸರ್ ಬೆಳಕಿನ ಮೂಲಕ ಸಮುದ್ರದ ಮೇಲೆ ಏನು ನಡೆಯುತ್ತಿದೆ ಎಂಬುದನ್ನೂ ಪತ್ತೆ ಮಾಡಬಲ್ಲದು. ಮೇಡ್ ಇನ್ ಇಂಡಿಯಾದ ಎರಡನೇ ಸ್ಕಾರ್ಪಿನ್ ಜಲಾಂತರ್ಗಾಮಿ ಐಎಸ್ ಎಸ್ ಖಾಂಡೇರಿ ಈಗಾಗಲೇ ಟ್ರಯಲ್ ಹಂತದಲ್ಲಿದ್ದು, ಇನ್ನು ಕೆಲವೇ ದಿನದಲ್ಲಿ ಇದೂ ಲೋಕಾರ್ಪಣೆಗೊಳ್ಳಲಿದೆ.

ಕಲ್ವಾರಿ ಅಂದ್ರೆ...

ಕಲ್ವಾರಿ ಅಂದ್ರೆ...

ಮಲಯಾಳಂ ಭಾಷೆಯಲ್ಲಿ ಕಲ್ವಾರಿ ಎಂದರೆ ಟೈಗರ್ ಶಾರ್ಕ್ ಎಂದರ್ಥ. ಟೈಗರ್ ಶಾರ್ಕ್ ತನ್ನ ಪರಾಕ್ರಮ, ಚುರುಕುತನ ಮತ್ತು ಬಲಕ್ಕೆ ಹೆಸರಾಗಿರುವ ಕಾರಣ ಈ ಜಲಾಂತರ್ಗಾಮಿಗೆ ಈ ನಾಮಕರಣ ಮಾಡಲಾಗಿದೆ. 1967 ರಲ್ಲಿ ಭಾರತೀಯ ನೌಕಾಪಡೆಯನ್ನು ಸೇರಿದ ಮೊದಲ ಜಲಾಂತರ್ಗಾಮಿಯ ಹೆಸರೂ ಕಲ್ವಾರಿಯೆಂದೇ ಆಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

English summary
Prime Minister Narendra Modi dedicates INS Kalvari, the first Made-In-India scorpen class submarine in Mumbai. Here are 7 interesting facts about INS Kalvari
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X