ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್ ಸಂಸ್ಥಾಪಕರ ಅಳಿಯನಿಗೆ ಬ್ರಿಟನ್ ಸರ್ಕಾರದಲ್ಲಿ ಪ್ರಭಾವಿ ಹುದ್ದೆ

|
Google Oneindia Kannada News

ಬೆಂಗಳೂರು, ಜುಲೈ 25: ಬ್ರಿಟನ್ನಿನ ನೂತನ ಪ್ರಧಾನಿ ಬೋರಿಸ್ ಜಾನ್ಸನ್ ಸರ್ಕಾರದಲ್ಲಿ ಇನ್ಫೋಸಿಸ್ ಅಧ್ಯಕ್ಷ ನಾರಾಯಣಮೂರ್ತಿ ಅಳಿಯ ಸೇರಿದಂತೆ ಮೂರು ಭಾರತೀಯ ಮೂಲದವರಿಗೆ ಅವಕಾಶ ನೀಡಲಾಗಿದೆ.

ಇನ್ಫೋಸಿಸ್ ಅಧ್ಯಕ್ಷ ನಾರಾಯಣ ಮೂರ್ತಿ ಅಳಿಯ ರಿಶಿ ಸುನಕ್ ಅವರನ್ನು ಟ್ರೆಜರರಿಯ ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಹಣಕಾಸು ಸಚಿವರಾಗಿ ನೇಮಕವಾಗಿರುವ ಸಾಜಿದ್ ಜಾವಿದ್ ಅವರ ಕೈಕೆಳಗೆ ಕೆಲಸ ಮಾಡಲಿದ್ದಾರೆ.

ಬ್ರಿಟನ್ನಿನ ಪ್ರಭಾವಿ ಹುದ್ದೆಗೆ ಭಾರತೀಯ ಸಂಜಾತೆ ಬ್ರಿಟನ್ನಿನ ಪ್ರಭಾವಿ ಹುದ್ದೆಗೆ ಭಾರತೀಯ ಸಂಜಾತೆ

ಪ್ರೀತಿ ಪಟೇಲ್ ಗೃಹ ಕಾರ್ಯದರ್ಶಿಯಾಗಿ ಏಮಕವಾಗಿದ್ದರೆ, ಕಿರಿಯ ಸಚಿವರಾಗಿದ್ದ ಅಲೋಕ್ ಶರ್ಮಾ ಅವರನ್ನು ಅಂತಾರಾಷ್ಟ್ರೀಯ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಸಂಪುಟ ದರ್ಜೆ ಸಚಿವರಾಗಿ ನೇಮಿಸಲಾಗಿದೆ.

Infosys founders don-in-law in team Boris

ಬ್ರಿಟನ್‌ಗೆ ನೂತನ ಪ್ರಧಾನಿಯಾಗಿ ಬೋರಿಸ್ ಜಾನ್ಸನ್ ನೇಮಕವಾದ ಬೆನ್ನಲ್ಲೇ, ಅಲ್ಲಿಯ ಸರ್ಕಾರದ ಪ್ರಮುಖ ಎರಡು ಹುದ್ದೆಗಳನ್ನು ಪಾಕಿಸ್ತಾನ ಹಾಗೂ ಭಾರತ ಮೂಲದ ಇಬ್ಬರು ಅಲಂಕರಿಸಿದ್ದಾರೆ.

ಭಾರತೀಯ ಮೂಲದ ಪ್ರೀತಿ ಪಟೇಲ್ ನೂತನ ಸರ್ಕಾರದ ಗೃಹ ಕಾರ್ಯದರ್ಶಿಯಾಗಿ ನೇಮಕವಾಗಿದ್ದರೆ, ಪಾಕಿಸ್ತಾನದ ಸವೀದ್ ಜಾವೇದ್ ಹಣಕಾಸು ಸಚಿವರಾಗಿ ನೇಮಕವಾಗಿದ್ದಾರೆ. ಭಾರತ, ಪಾಕಿಸ್ತಾನ ಹಾಗೂ ಬ್ರಿಟನ್ ನಡುವಿನ ಆಂತರಿಕ ಸಂಬಂಧಗಳ ದೃಷ್ಟಿಯಲ್ಲಿ ನೇಮಕಾತಿಗಳು ಪ್ರಮುಖವಾಗುವ ಸಾಧ್ಯತೆಗಳಿವೆ.

ಪ್ರೀತಿ ಪಟೇಲ್ ಬ್ರಿಟನ್ನಿನ ಗೃಹ ಕಾರ್ಯದರ್ಶಿಯಾಗಿ ನೇಮಕವಾಗಿರುವುದು ಭಾರತಕ್ಕೆ ನೆರವಾಗುವ ಸಾಧ್ಯತೆಯೂ ಇದೆ. ವಿಜಯ್ ಮಲ್ಯ, ನೀರವ್ ಮೋದಿ ಸೇರಿದಂತೆ ಕೆಲ ಆರ್ಥಿಕ ಅಪರಾಧಿಗಳು ಬ್ರಿಟನ್‌ನಲ್ಲಿ ತಲೆಮರೆಸಿಕೊಂಡಿದ್ದಾರೆ.

ಈ ಕುರಿತ ರಾಜತಾಂತ್ರಿಕ ಸಂಬಂಧಗಳಿಗೆ ಹಾಗೂ ಕಾನೂನು ಹೋರಾಟಗಳಿಗೆ ಬ್ರಿಟನ್ ಗೃಹ ಕಾರ್ಯದರ್ಶಿ ಜೊತೆಗೆ ಭಾರತ ಸರ್ಕಾರ ನೇರವಾಗಿ ಸಂಬಂಧ ಹೊಂದಿರಬೇಕಾಗುತ್ತಿದೆ. ಈ ದೃಷ್ಟಿಯಲ್ಲಿ ಪ್ರೀತಿ ಪಟೇಲ್ ಭಾರತಕ್ಕೆ ಲಾಭವಾಗುವ ನಿರೀಕ್ಷೆ ಇದೆ.

English summary
Infosys founder's son-in-law Rishi Sunak in team Boris, promoted Rishi Sunak, son-in-law of Infosys founder N R Narayana Murthy to the role of chief secretary to the Treasury under new chancellor Sajid Javid.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X