ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಣಮುಖರಾದವರು ಲಸಿಕೆ ಪಡೆದರೆ ಏನಾಗುತ್ತದೆ; AIG ವರದಿ ಹೀಗನ್ನುತ್ತಿದೆ...

|
Google Oneindia Kannada News

ನವದೆಹಲಿ, ಜೂನ್ 12: ಕೊರೊನಾ ಸೋಂಕಿನಿಂದ ಗುಣಮುಖರಾದವರಿಗೆ ಲಸಿಕೆ ನೀಡುವುದೇ ಬೇಡವೇ ಎಂಬ ಕುರಿತು ಚರ್ಚೆ ನಡೆಯುತ್ತಿದ್ದು, ಸೋಂಕಿನಿಂದ ಗುಣಮುಖರಾದವರಲ್ಲಿ ಸಹಜವಾಗಿಯೇ ರೋಗನಿರೋಧಕ ಶಕ್ತಿ ಹೆಚ್ಚಿರುವ ಕಾರಣ ಸದ್ಯಕ್ಕೆ ಲಸಿಕೆ ನೀಡುವ ಅಗತ್ಯವಿಲ್ಲ ಎಂದು ಕೆಲವು ತಜ್ಞರು ಸಲಹೆ ನೀಡಿದ್ದಾರೆ. ಆದರೆ ಕೊರೊನಾ ರೂಪಾಂತರ ಸೋಂಕು ಹೆಚ್ಚುತ್ತಿರುವ ಕಾರಣ ಎಲ್ಲರಿಗೂ ಲಸಿಕೆ ನೀಡುವ ಅಗತ್ಯವನ್ನು ಎತ್ತಿ ಹಿಡಿಯಲಾಗಿದೆ.

ಈ ನಡುವೆ ಏಷ್ಯನ್ ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೊಯೆಂಟೆರಾಲಜಿ (AIG) ಅಧ್ಯಯನ ನಡೆಸಿದ್ದು, ಕೊರೊನಾ ಸೋಂಕಿನಿಂದ ಗುಣಮುಖರಾದವರಿಗೆ ಕೊರೊನಾ ಲಸಿಕೆ ನೀಡಿದರೆ ರೋಗನಿರೋಧಕ ಶಕ್ತಿಯ ಪ್ರಮಾಣ ಎಷ್ಟಿರುತ್ತದೆ ಎಂಬುದರ ಕುರಿತು ವಿಶ್ಲೇಷಣೆ ನಡೆಸಿದೆ. ಈ ಕುರಿತ ಮಾಹಿತಿ ಮುಂದಿದೆ...

70 ದಿನಗಳ ನಂತರ ದೇಶದ ಕೊರೊನಾ ಪ್ರಕರಣಗಳಲ್ಲಿ ಇಳಿಕೆ70 ದಿನಗಳ ನಂತರ ದೇಶದ ಕೊರೊನಾ ಪ್ರಕರಣಗಳಲ್ಲಿ ಇಳಿಕೆ

 ಮೊದಲ ಡೋಸ್ ಲಸಿಕೆ ಪಡೆದ ನಂತರದ ವಿಶ್ಲೇಷಣೆ

ಮೊದಲ ಡೋಸ್ ಲಸಿಕೆ ಪಡೆದ ನಂತರದ ವಿಶ್ಲೇಷಣೆ

ಕೊರೊನಾ ಸೋಂಕಿನಿಂದ ಗುಣಮುಖರಾದವರನ್ನು ಹಾಗೂ ಸೋಂಕು ತಗುಲದಿರುವವರನ್ನು ಈ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ. ಕೊರೊನಾ ಸೋಂಕಿಗೆ ಒಳಗಾಗದೇ ಮೊದಲ ಡೋಸ್ ಲಸಿಕೆ ಪಡೆದವರಿಗೆ ಹೋಲಿಕೆ ಮಾಡಿದರೆ, ಕೊರೊನಾ ಸೋಂಕಿನಿಂದ ಗುಣಮುಖರಾಗಿ ಲಸಿಕೆ ಪಡೆದವರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿರುವುದು ಕಂಡುಬಂದಿದೆ ಎಂದು ಅಧ್ಯಯನ ತಿಳಿಸಿದೆ.

 ಹತ್ತು ಪಟ್ಟು ರೋಗನಿರೋಧಕ ಶಕ್ತಿ ಹೆಚ್ಚಳ

ಹತ್ತು ಪಟ್ಟು ರೋಗನಿರೋಧಕ ಶಕ್ತಿ ಹೆಚ್ಚಳ

ಸೋಂಕಿನಿಂದ ಗುಣಮುಖರಾಗಿ ಮೊದಲ ಡೋಸ್ ಲಸಿಕೆ ಪಡೆದ ನಂತರ ಅಂಥವರಲ್ಲಿ ರೋಗ ನಿರೋಧಕ ಶಕ್ತಿಯು ಹತ್ತು ಪಟ್ಟು ಹೆಚ್ಚಳವಾಗುವುದು ಎಂದಿದೆ ಈ ಅಧ್ಯಯನ. ಈ ಶಕ್ತಿಯು ವ್ಯಕ್ತಿಯನ್ನು ಸುಮಾರು ಒಂದು ವರ್ಷಗಳ ಕಾಲ ಸೋಂಕಿನ ವಿರುದ್ಧ ರಕ್ಷಿಸಬಲ್ಲವು. ಸೋಂಕಿನ ವಿರುದ್ಧ ಪ್ರತಿಕಾಯಗಳು ವರ್ಷದವರೆಗೂ ಹೋರಾಡಬಲ್ಲವು ಎಂದು ಹೇಳಿದೆ.

"ಲಸಿಕೆ ಡೋಸ್‌ಗಳ ಅಂತರ ಹೆಚ್ಚಿಸಿದಷ್ಟು ಅಪಾಯವೂ ಹೆಚ್ಚು"

 ರೋಗನಿರೋಧಕ ಶಕ್ತಿ ಹೆಚ್ಚಳ ಗ್ಯಾರಂಟಿ ಎಂದ ಅಧ್ಯಯನ

ರೋಗನಿರೋಧಕ ಶಕ್ತಿ ಹೆಚ್ಚಳ ಗ್ಯಾರಂಟಿ ಎಂದ ಅಧ್ಯಯನ

ಐಸಿಎಂಆರ್ ಗುರುತಿಸಿರುವ ಕೊರೊನಾ ಆರೈಕೆ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಿದ 280 ಆರೋಗ್ಯ ಕಾರ್ಯಕರ್ತರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಅವರೆಲ್ಲರೂ ಜನವರಿಯಿಂದ ಫೆಬ್ರವರಿ ಒಳಗೆ ಕೊರೊನಾ ಲಸಿಕೆ ಪಡೆದಿದ್ದರು. ಅವರಲ್ಲಿ 131 ಕಾರ್ಯಕರ್ತರಿಗೆ ಲಸಿಕೆ ಪಡೆಯುವ ಮುನ್ನ ಕೊರೊನಾ ಸೋಂಕು ದೃಢಪಟ್ಟಿತ್ತು. ಇವರಲ್ಲಿನ ವಿಶ್ಲೇಷಣೆ ಮೂಲಕ ಈ ಫಲಿತಾಂಶವನ್ನು ಕಂಡುಕೊಳ್ಳಲಾಗಿದೆ.

 ಗುಣಮುಖರಾದವರಿಗೂ ಲಸಿಕೆ ಒಳಿತು

ಗುಣಮುಖರಾದವರಿಗೂ ಲಸಿಕೆ ಒಳಿತು

"ಈ ಕಾರ್ಯಕರ್ತರ ದೇಹದಲ್ಲಿ ಪ್ರತಿಕಾಯಗಳು ಹತ್ತು ಪಟ್ಟು ಹೆಚ್ಚಾಗಿರುವುದು ಕಂಡುಬಂದಿದೆ" ಎಂದು ಎಐಜಿ ಸಂಶೋಧಕರು ಹಾಗೂ ಆಸ್ಪತ್ರೆ ಅಧ್ಯಕ್ಷ ಡಾ. ನಾಗೇಶ್ವರ್ ರೆಡ್ಡಿ ತಿಳಿಸಿದ್ದಾರೆ. ಈ ಸಂಶೋಧನೆ ಇಂಟರ್ ನ್ಯಾಷನಲ್ ಜರ್ನಲ್ ಆಫ್ ಇನ್‌ಫೆಕ್ಷನ್ ಡಿಸೀಸ್ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ. ದೇಶದಲ್ಲಿ ಲಸಿಕೆಗಳು ಸಾಕಷ್ಟು ಮಟ್ಟದಲ್ಲಿ ಲಭ್ಯವಾದ ನಂತರ ಕೊರೊನಾ ಸೋಂಕಿನಿಂದ ಗುಣಮುಖರಾದವರಿಗೂ ಲಸಿಕೆ ನೀಡಿದರೆ ಒಳಿತು ಎಂದು ಸಲಹೆ ನೀಡಿದೆ.

Recommended Video

ಕೊರೊನಾದಿಂದ ಮೃತಪಟ್ಟ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ CM | Oneindia Kannada

English summary
Prior infected given first Covid-19 vaccine dose well protected says AIG researchers,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X