ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ : ಇಂದೋರ್ ಕಟ್ಟಡ ಕುಸಿತ, 10 ಮಂದಿ ದುರ್ಮರಣ

By Mahesh
|
Google Oneindia Kannada News

ಇಂದೋರ್, ಏಪ್ರಿಲ್ 01: ನಾಲ್ಕು ಅಂತಸ್ತಿನ ಕಟ್ಟಡ ಕುಸಿದು, ಸುಮಾರು 10 ಮಂದಿ ದುರಂತ ಸಾವಿಗೀಡಾಗಿರುವ ಘಟನೆ ಶನಿವಾರ ರಾತ್ರಿ ಸಂಭವಿಸಿದೆ. ಈ ದುರ್ಘಟನೆಯು ಸಿಸಿಟಿವಿ ಕೆಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸದ್ಯ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ.

ಕಟ್ಟಡ ಕುಸಿತದಿಂದ ಆರು ಜನ ಗಾಯಗೊಂಡಿದ್ದು, ಇನ್ನೂ ಅನೇಕ ಮಂದಿ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಸಾಧ್ಯತೆಗಳಿವೆ. ರಕ್ಷಣಾ ಕಾರ್ಯ ಭರದಿಂದ ಸಾಗಿದೆ. 10 ಮಂದಿ ಮೃತರ ಪೈಕಿ ಇಬ್ಬರು ಮಹಿಳೆಯರು ಇದ್ದಾರೆ. ಗಾಯಗೊಂಡವರನ್ನು ಸರ್ಕಾರಿ ಎಂವೈ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Indore building collapse: 10 dead, rescue operations on

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಕಟ್ಟಡ ಕುಸಿತದಲ್ಲಿ ಮೃತಪಟ್ಟಿರುವವರ ಕುಟುಂಬಕ್ಕೆ 2 ಲಕ್ಷ ರುಪಾಯಿ ಹಾಗೂ ಗಾಯಗೊಂಡ ಅವರ ಕುಟುಂಬಕ್ಕೆ 50 ಸಾವಿರ ರು ಪರಿಹಾರ ಮೊತ್ತ ಘೋಷಿಸಿದ್ದಾರೆ.

ಇಂದೋರ್ ನ ಬಸ್‌ ನಿಲ್ದಾಣದ ಸಮೀಪವಿದ್ದ ಸುಮಾರು 60 ವರ್ಷ ಹಳೆಯದಾದ ಎಂಎಸ್‌ ಹೋಟೆಲ್‌ ಕಟ್ಟಡವು ಶನಿವಾರ ರಾತ್ರಿ 9.30ರ ಸುಮಾರುಗೆ ಕುಸಿದಿದೆ. ಈ ಕಟ್ಟಡದಲ್ಲಿ ಹೋಟೆಲ್‌, ಲಾಡ್ಜ್‌ ಹಾಗೂ ಕೆಲವು ಅಂಗಡಿಗಳಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಕಾರೊಂದು ಕಟ್ಟಡದ ಕಂಬವೊಂದಕ್ಕೆ ಗುದ್ದಿದೆ. ಇದಾಗಿ ಕೆಲವೇ ಸೆಕೆಂಡ್‌ಗಳಲ್ಲಿ ಇಡೀ ಕಟ್ಟಡವೇ ಕುಸಿದು ಬಿದ್ದಿದೆ.

English summary
Atleast 10 people were killed and two others injured after a building collapsed in Madhya Pradesh's Indore on Saturday night. Over two-dozen people were feared trapped in the debris of a four-storey hotel that collapsed near Sarwate Bus Stand in Indore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X