ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದಿರಾ ವಿಷಯದಲ್ಲಿ ಪವಾಡ ಮಾಡಿದ್ದ ಮಹಾಕಾಳೇಶ್ವರನ ನೆಲೆಗೆ ರಾಹುಲ್!

|
Google Oneindia Kannada News

Recommended Video

ಇಂದಿರಾ ಗಾಂಧಿ ಭೇಟಿ ಕೊಟ್ಟಿದ್ದ ಉಜ್ಜೈನಿ ಮಹಾಕಾಳೇಶ್ವರ ದೇವಸ್ಥಾನಕ್ಕೆ ರಾಹುಲ್ ಭೇಟಿ | Oneindia Kannada

ಉಜ್ಜೈನಿ, ಅಕ್ಟೋಬರ್ 29: ಮಧ್ಯಪ್ರದೇಶದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈಗಾಗಲೇ ಟೆಂಪಲ್ ರನ್ ಆರಂಭವಾಗಿದೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಧ್ಯಪ್ರದೇಶದ ಉಜ್ಜೈನಿಯ ಮಹಾಕಾಳೇಶ್ವರ ದೇವಾಲಯಕ್ಕೆ ಭೇಟಿ ಮಾಡುವ ಮೂಲಕ ಈ ಬಾರಿ ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಮತ್ತು ಲೋಕಸಭೆಯಲ್ಲಿ ಪವಾಡ ನಡೆಯುವ ಮುನ್ಸೂಚನೆ ನೀಡಿದ್ದಾರೆ.

ಮಹಾಕಾಳೇಶ್ವರ ಪೂಜೆಯ ನಂತರ ಮೋದಿ ಮೇಲೆ ರಾಹುಲ್ ವಾಗ್ದಾಳಿ ಮಹಾಕಾಳೇಶ್ವರ ಪೂಜೆಯ ನಂತರ ಮೋದಿ ಮೇಲೆ ರಾಹುಲ್ ವಾಗ್ದಾಳಿ

1979 ರಲ್ಲಿ ಈ ದೇವಾಲಯಕ್ಕೆ ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಅದಾದ ನಂತರ ಅವರು ಚುನಾವಣೆಯಲ್ಲಿ ನಿರಾಯಾಸ ಗೆಲುವು ಸಾಧಿಸಿದರು. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂತು.

ನಂತರ 2008 ರಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಈ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಆಗ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಗೆಲ್ಲದಿದ್ದರೂ, ಕೇಂದ್ರದಲ್ಲಿ ಎರಡನೇ ಬಾರಿಗೆ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂತು.

Indira, Sonia and Rahul visit makaleshwar temple for miracles!

ಈ ಎಲ್ಲವನ್ನೂ ತಾಳೆ ಹಾಕಿರುವ ರಾಹುಲ್ ಗಾಂಧಿ ಇದೀಗ ಮಧ್ಯಪ್ರದೇಶ ವಿಧಾನಸಭೆ ಮತ್ತು ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಉಜ್ಜೈನಿಯ ಮಹಾಕಾಳೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ.

'ರಾಹುಲ್ ಗಾಂಧಿ ಗೋತ್ರ ಯಾವುದು? ಅವರು ತೊಡುವ ಜನಿವಾರ ಯಾವುದು?' 'ರಾಹುಲ್ ಗಾಂಧಿ ಗೋತ್ರ ಯಾವುದು? ಅವರು ತೊಡುವ ಜನಿವಾರ ಯಾವುದು?'

ಸುಮಾರು ಅರ್ಧ ಗಂಟೆಗಳ ಕಾಲ ರಾಹುಲ್ ಗಾಂಧಿ ಪೂಜೆ ಸಲ್ಲಿಸಿದ್ದು, ಈ ಭಾರಿ ಪವಾಡ ಸಂಭವಿಸುತ್ತದೆಯೇ ಎಂಬುದನ್ನು ಕಾದುನೋಡಬೇಕು! ಅಂದಹಾಗೆ ಉಜ್ಜೈನಿಯ ಮಹಾಕಾಳೇಶ್ವರ ದೇವಾಲಯ ದ್ವಾದಶ ಜ್ಯೋತಿರ್ಲಿಂಗಗಳಲ್ಲೊಂದು.

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಸಹ ಈ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಅವರು ಮಹಾಕಾಳೇಶ್ವರ ದೇವರಿಗೆ ಬಹಿರಂಗ ಪತ್ರ ಬರೆದು, 'ಹಾಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ಗೆಲ್ಲುವಂತೆ ಆಶೀರ್ವದಿಸಬೇಡ' ಎಂದಿದ್ದಾರೆ!

ಶಿವಲಿಂಗದ ಮೇಲಿನ ಚೇಳು ಮೋದಿ; ತರೂರ್ ಹೇಳಿಕೆಗೆ ಭಾರೀ ವಿರೋಧ ಶಿವಲಿಂಗದ ಮೇಲಿನ ಚೇಳು ಮೋದಿ; ತರೂರ್ ಹೇಳಿಕೆಗೆ ಭಾರೀ ವಿರೋಧ

ಪ್ರತಿ ವರ್ಷವೂ ಪ್ರಮುಖ ರಾಜಕೀಯ ಪಕ್ಷದ ಮುಖಂಡರು ಯಾವುದೇ ಮುಖ್ಯ ಸಮಾರಂಭವನ್ನು ಈ ದೇವಾಲಯದಲ್ಲಿ ಪೂಜೆ ಮಾಡಿಸಿದ ನಂತರವೇ ಆರಂಭಿಸುವುದು ವಾಡಿಕೆ.

English summary
Indira Gandhi in 1979 won elections after visiting Mahakaleshwar temple in Ujjain in Madhya Pradesh. Now Rahul Gandhi is also expecting same for him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X