ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಸಿಕೆ ಹಾಕಿಸಿಕೊಂಡ ಪ್ರಯಾಣಿಕರಿಗೆ ಇಂಡಿಗೋದಲ್ಲಿ ರಿಯಾಯಿತಿ

|
Google Oneindia Kannada News

ನವದೆಹಲಿ, ಜೂನ್ 23: ಲಸಿಕೆಹಾಕಿಸಿಕೊಂಡಿರುವ ಪ್ರಯಾಣಿಕರಿಗೆ ಇಂಡಿಗೋ ವಿಮಾನದಲ್ಲಿ ರಿಯಾಯಿತಿಯನ್ನು ಘೋಷಿಸಲಾಗಿದೆ. ಜೂ.23 ರಿಂದ ಇಂಡಿಗೋ ವಿಮಾನ ಸಂಸ್ಥೆ ಲಸಿಕೆ ಹಾಕಿಸಿಕೊಂಡ ಪ್ರಯಾಣಿಕರಿಗೆ ಶೇ.10 ರಷ್ಟು ರಿಯಾಯಿತಿ ನೀಡುವುದಾಗಿ ತಿಳಿಸಿದೆ.

ಮಂಗಳವಾರ ಲಸಿಕೆ ಲಭ್ಯತೆ ಬಗ್ಗೆ ಮಾಹಿತಿ ನೀಡಿದ್ದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ರಾಜ್ಯಗಳ ಪೈಕಿ 2.14 ಕೋಟಿ ಲಸಿಕೆ ಡೋಸ್ ಗಳು ಲಭ್ಯವಿದೆ ಎಂದು ಹೇಳಿತ್ತು.

 ಸಂಪೂರ್ಣ ಲಸಿಕೆ ಪಡೆದಿದ್ದರೆ, ದೇಶೀಯ ವಿಮಾನ ಪ್ರಯಾಣ ಸುಲಭ ಹೇಗೆ? ಸಂಪೂರ್ಣ ಲಸಿಕೆ ಪಡೆದಿದ್ದರೆ, ದೇಶೀಯ ವಿಮಾನ ಪ್ರಯಾಣ ಸುಲಭ ಹೇಗೆ?

ಮೂಲ ಬೆಲೆಯ ಆಧಾರದಲ್ಲಿ ರಿಯಾಯಿತಿ ದೊರೆಯಲಿದ್ದು, ಲಿಮಿಟೆಡ್ ಇನ್ವೆಂಟರಿ ಲಭ್ಯವಿದೆ ಎಂದು ಏರ್ ಲೈನ್ಸ್‌ನ ಹೇಳಿಕೆ ಮೂಲಕ ತಿಳಿದುಬಂದಿದೆ.

IndiGo Offers Discount For Vaccinated Passengers

ಭಾರತದಲ್ಲಿನ 18 ವರ್ಷದ ಮೇಲ್ಪಟ್ಟ ಲಸಿಕೆ ಹಾಕಿಸಿಕೊಂಡ ಪ್ರಯಾಣಿಕರಿಗೆ ಈ ಆಫರ್ ಅನ್ವಯವಾಗಲಿದ್ದು, ಭಾರತದಿಂದ ಬುಕ್ ಮಾಡುವವರು ಕನಿಷ್ಟ ಒಂದು ಡೋಸ್ ಲಸಿಕೆ ಪಡೆದಿರಬೇಕು ಎಂದು ಇಂಡಿಗೋ ಸಂಸ್ಥೆ ತಿಳಿಸಿದೆ.

ಬುಕ್ಕಿಂಗ್ ವೇಳೆ ಈ ಸೌಲಭ್ಯವನ್ನು ಪಡೆಯುವ ಪ್ರಯಾಣಿಕರು ಏರ್ ಪೋರ್ಟ್ ಚೆಕ್-ಇನ್ ವೇಳೆ ಕೋವಿಡ್-19 ಪ್ರಮಾಣಪತ್ರವನ್ನು ಸಲ್ಲಿಸಬೇಕು ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅಥವಾ ಆರೋಗ್ಯ ಸೇತು ಆಪ್ ನಲ್ಲಿ ತಮ್ಮ ಲಸಿಕೆ ಸ್ಥಿತಿ ಏನಿದೆ ಎಂಬುದನ್ನು ತೋರಿಸಬಹುದಾಗಿದೆ. ಇಂಡಿಗೋದ ಮುಖ್ಯ ಕಾರ್ಯತಂತ್ರ ಹಾಗೂ ಆದಾಯ ವಿಭಾಗದ ಅಧಿಕಾರಿ ಸಂಜಯ್ ಕುಮಾರ್ ಈ ಬಗ್ಗೆ ಮಾತನಾಡಿ, ''ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾಗಿ ರಾಷ್ಟ್ರೀಯ ಲಸಿಕೆ ಅಭಿಯಾನಕ್ಕೆ ಕೊಡುಗೆ ನೀಡಬೇಕೆಂದೆನಿಸಿತು, ಇದಕ್ಕಾಗಿ ಲಸಿಕೆ ಪಡೆಯುವುದನ್ನು ಉತ್ತೇಜಿಸುವುದಕ್ಕಾಗಿ ಈ ರಿಯಾಯಿತಿ ಆಫರ್ ನ್ನು ಘೋಷಿಸಲಾಗಿದೆ' ಎಂದು ಹೇಳಿದ್ದಾರೆ.

English summary
IndiGo will give 10 per cent discount from Wednesday onwards to all passengers who have taken at least one dose of COVID-19 vaccine, a statement said. The discount would be given on base fare and only "limited inventory" is available under this offer, the airline's statement noted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X