ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡಿಗೋ: ಕಡಿಮೆ ಖರ್ಚಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಯೋಜನೆ

|
Google Oneindia Kannada News

ನವದೆಹಲಿ, ಜುಲೈ 17: ವಿಮಾನದಲ್ಲಿ ಕಡಿಮೆ ಖರ್ಚಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಇಂಡಿಗೋ ಹೊಸ ಯೋಜನೆಯನ್ನು ಆರಂಭಿಸಿದೆ.ಓರ್ವ ಪ್ರಯಾಣಿಕ ಒಬ್ಬರಿಗಾಗಿಯೇ ಎರಡು ವಿಮಾನ ಟಿಕೆಟ್ ಬುಕ್ ಮಾಡುವ ಸೌಲಭ್ಯವನ್ನು ಇಂಡಿಗೋ ಸಂಸ್ಥೆ ಕಲ್ಪಿಸಿದೆ.

ಕೊರೊನಾ ಸೋಂಕು ವಿಶ್ವದಾದ್ಯಂತ ಹರಡಿರುವ ಹಿನ್ನೆಲೆಯಲ್ಲಿ ಇಂಡಿಗೋ ವಿಮಾನವು ಓರ್ವ ಪ್ರಯಾಣಿಕ ಎರಡು ಸೀಟುಗಳನ್ನು ಬುಕ್ ಮಾಡುವ ವ್ಯವಸ್ಥೆ ಆರಂಭಿಸಿದೆ.

ಏರ್ ಇಂಡಿಯಾ ಸಿಬ್ಬಂದಿಗೆ 5 ವರ್ಷದವರೆಗೆ ವೇತನ ರಹಿತ ರಜೆಏರ್ ಇಂಡಿಯಾ ಸಿಬ್ಬಂದಿಗೆ 5 ವರ್ಷದವರೆಗೆ ವೇತನ ರಹಿತ ರಜೆ

ಸಾಮಾನ್ಯ ವಿಮಾನ ಟಿಕೆಟ್ ದರದ ಶೇ.25ರಷ್ಟು ದರ ಆ ಆಸನಕ್ಕೆ ಇರಲಿದೆ. ಈ ಸೌಲಭ್ಯವು ಜುಲೈ 24ರಿಂದ ಆರಂಭವಾಗಲಿದೆ. 6E Double seat ಯೋಜನೆಯು ಟ್ರಾವೆಲ್ ಪೋರ್ಟಲ್‌ಗಳು, ಇಂಡಿಗೋ ಕಾಲ್‌ ಸೆಂಟರ್, ಏರ್‌ಪೋರ್ಟ್‌ ಕೌಂಟರ್‌ಗಳಲ್ಲಿ ಲಭ್ಯವಿರುವುದಿಲ್ಲ.

IndiGo Launches Scheme To Maintain Social Distance In Flights

6E Double seat ಯೋಜನೆಯು ಜಿಎಸ್‌ಟಿ, ಪಿಎಸ್‌ಎಫ್, ಯುಡಿಎಫ್‌ಗಳನ್ನು ಒಳಗೊಂಡಿರುವುದಿಲ್ಲ. ಕಡಿಮೆ ದರದಲ್ಲಿ ಟಿಕೆಟ್ ನೀಡಲಾಗುತ್ತದೆ. ಸೀಟು ಬುಕಿಂಗ್ ಮಾಡುವ ವೇಳೆ ಈ ಆಯ್ಕೆಯೂ ಇರಲಿದೆ, ಇದು ಕಡ್ಡಾಯವಾಗಿರಲಿದೆ.

ಮತ್ತೊಂದು ಆಸನವಿದೆ ಎಂದು ಲಗೇಜ್‌ಗಳನ್ನು ಹೆಚ್ಚಾಗಿ ತರುವಂತಿಲ್ಲ. ಕೊರೊನಾ ಸೋಂಕು ಹೆಚ್ಚಳವಾಗಿರುವುದರಿಂದ ವಿಮಾನದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕೂಡ ಅಷ್ಟೇ ಮುಖ್ಯವಾಗಿದೆ.

ಹೀಗಾಗಿ ಅನೇಕ ಪ್ರಯಾಣಿಕರ ಒತ್ತಾಯದ ಮೇರೆಗೆ ಈ ಯೋಜನೆಯನ್ನು ಆರಂಭಿಸಿದ್ದೇವೆ ಎಂದು ಇಂಡಿಗೋ ರೆವಿನ್ಯೂ ಅಧಿಕಾರಿ ತಿಳಿಸಿದ್ದಾರೆ.

English summary
Keeping in mind additional safety of passengers amid the coronavirus pandemic, domestic airline IndiGo on Friday launched a scheme that allows them to book two seats for a single person.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X