ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರನ್‌ವೇಯಲ್ಲಿ ಚಲಿಸುವಾಗ ಮಣ್ಣಿನಲ್ಲಿ ಸಿಲುಕಿದ ಇಂಡಿಗೋ ವಿಮಾನದ ಚಕ್ರ

|
Google Oneindia Kannada News

ಗುವಾಹಟಿ, ಜುಲೈ 29: ಸ್ಪೈಸ್ ಜೆಟ್‌ ವಿಮಾನಗಳಲ್ಲಿ ಪದೇ ಪದೇ ತಾಂತ್ರಿಕ ದೋಷ ವರದಿಯಾದ ನಂತರ, ಇಂಡಿಗೋ ವಿಮಾನ ಕೂಡ ತಾಂತ್ರಿಕ ದೋಷದಿಂದ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಅಸ್ಸಾಂನ ಜೋರ್ಹತ್ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನ ದಾರಿ ತಪ್ಪಿದ ಘಟನೆ ನಡೆದಿದೆ.

ಅಸ್ಸಾಂನ ಜೋರ್ಹತ್‌ನಿಂದ ಕೋಲ್ಕತ್ತಾಗೆ ಇಂಡಿಗೋ ವಿಮಾನವು ಟೇಕ್-ಆಫ್ ಸಮಯದಲ್ಲಿ ರನ್‌ವೇಯಿಂದ ಸ್ಕಿಡ್ ಆಗಿದ್ದು, ಅದರ ಜೋಡಿ ಚಕ್ರಗಳು ಕೆಸರಿನಲ್ಲಿ ಸಿಲುಕಿಕೊಂಡಿದ್ದರಿಂದ ವಿಮಾನ ಸೇವೆಯನ್ನು ರದ್ದುಗೊಳಿಸಲಾಗಿದೆ.

ರನ್‌ವೇಯಲ್ಲಿ ಟೇಕ್‌ಆಫ್‌ಗಾಗಿ ವಿಮಾನ ನಡೆಸುತ್ತಿದ್ದಾಗ, ವಿಮಾನವು ರಸ್ತೆ ಬಿಟ್ಟು ಪಕ್ಕಕ್ಕೆ ಚಲಿಸಿದೆ. ರನ್‌ವೇ ಪಕ್ಕದ ಮೈದಾನದಲ್ಲಿ ಮೃದುವಾದ ಮಣ್ಣಿನಲ್ಲಿ ವಿಮಾನದ ಚಕ್ರಗಳು ಸಿಲುಕಿಕೊಂಡಿದೆ ಎಂದು ಏರ್‌ಲೈನ್ಸ್ ತಿಳಿಸಿದೆ.

Breaking; ತಾಂತ್ರಿಕ ತೊಂದರೆ ಕರಾಚಿಯಲ್ಲಿ ಇಂಡಿಗೋ ವಿಮಾನ ಲ್ಯಾಂಡ್Breaking; ತಾಂತ್ರಿಕ ತೊಂದರೆ ಕರಾಚಿಯಲ್ಲಿ ಇಂಡಿಗೋ ವಿಮಾನ ಲ್ಯಾಂಡ್

"ಇಂಡಿಗೋ ಫ್ಲೈಟ್ 6ಇ-757 ಜೋರ್ಹತ್‌ನಿಂದ ಕೋಲ್ಕತ್ತಾಗೆ ಹಿಂತಿರುಗಿತು. ಟ್ಯಾಕ್ಸಿ ಹೊರಡುವಾಗ, ಪೈಲಟ್‌ಗೆ ಮುಖ್ಯ ಚಕ್ರವೊಂದು ಟ್ಯಾಕ್ಸಿವೇ ಪಕ್ಕದಲ್ಲಿರುವ ಹುಲ್ಲಿನ ಮೇಲೆ ಚಲಿಸಿದೆ ಎಂದು ಸಲಹೆ ನೀಡಲಾಯಿತು" ಎಂದು ಇಂಡಿಗೋ ಹೇಳಿದೆ.

ಸ್ಥಳೀಯ ಪತ್ರಕರ್ತರೊಬ್ಬರು ಟ್ವಿಟ್ಟರ್‌ನಲ್ಲಿ ವಿಮಾನವನ್ನು ತೋರಿಸುವ ಚಿತ್ರವನ್ನು ಅಪ್‌ಲೋಡ್ ಮಾಡಿದ್ದಾರೆ, ಅದು ರನ್‌ವೇಯಿಂದ ಆಚೆಬಂದಿತ್ತು ಮತ್ತು ಒಂದು ಜೋಡಿ ಚಕ್ರಗಳು ಮಣ್ಣಿನಲ್ಲಿ ಸಿಲುಕಿಕೊಂಡಿದ್ದವು.

 ಪ್ರಯಾಣಿಕರ ಟ್ವೀಟ್‌ಗೆ ಇಂಡಿಗೋ ಉತ್ತರ

ಪ್ರಯಾಣಿಕರ ಟ್ವೀಟ್‌ಗೆ ಇಂಡಿಗೋ ಉತ್ತರ

ಇಂಡಿಗೋ ಟ್ವಿಟರ್ ಖಾತೆಯನ್ನು ಟ್ಯಾಗ್ ಮಾಡಿರುವ ಲೇಖಕರು, "ಗುವಾಹಟಿ ಕೋಲ್ಕತ್ತಾ ಇಂಡಿಗೋ ವಿಮಾಣ ರನ್‌ವೇ ಯಿಂದ ಪಕ್ಕಕ್ಕೆ ಜಾರಿತು. ಅಸ್ಸಾಂನ ಜೋರ್ಹತ್ ವಿಮಾನ ನಿಲ್ದಾಣದ ಕೆಸರು ಗದ್ದೆಯಲ್ಲಿ ಸಿಲುಕಿಕೊಂಡಿತು. ವಿಮಾನವು ಮಧ್ಯಾಹ್ನ 2.20 ಕ್ಕೆ ಹೊರಡಬೇಕಾಗಿತ್ತು ಆದರೆ ಘಟನೆಯ ನಂತರ ವಿಮಾನ ವಿಳಂಬವಾಯಿತು." ಎಂದು ಟ್ವೀಟ್ ಮಾಡಿದ್ದಾರೆ.

ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಇಂಡಿಗೋ, "ಸಂಬಂಧಪಟ್ಟ ತಂಡದೊಂದಿಗೆ ಈಗಿನಿಂದಲೇ ಇದನ್ನು ಸಂಗ್ರಹಿಸಲು ಚಿಂತಿಸುತ್ತಿದ್ದೇವೆ. ದಯವಿಟ್ಟು ಪಿಎನ್‌ಆರ್ ಮತ್ತು ಡಿಎಂ ಮೂಲಕ ಮಾಹಿತಿ ಹಂಚಿಕೊಳ್ಳಿ. ನೀವು ಆರಾಮಾಗಿ ನಿಮ್ಮ ಗಮ್ಯಸ್ಥಾನಕ್ಕೆ ಪ್ರಯಾಣಿಸಿರುವಿರಿ ಎಂದು ನಾವು ಭಾವಿಸುತ್ತೇವೆ." ಎಂದು ಟ್ವೀಟ್ ಮಾಡಿದೆ.

 ಇಂಡಿಗೋ ವಿಮಾನಗಳ ಸೇವೆಯಲ್ಲಿ ಏರುಪೇರು: ಕಾರಣ ಇಲ್ಲಿದೆ ಇಂಡಿಗೋ ವಿಮಾನಗಳ ಸೇವೆಯಲ್ಲಿ ಏರುಪೇರು: ಕಾರಣ ಇಲ್ಲಿದೆ

 ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ

ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ

ವಿಮಾನವು ಇದ್ದಕ್ಕಿದ್ದಂತೆ ಸ್ಥಗಿತಗೊಂಡಿದ್ದರಿಂದ ವಿಮಾನದಲ್ಲಿದ್ದ ಪ್ರಯಾಣಿಕರು ಭಯಭೀತರಾದರು. ಸಿಬ್ಬಂದಿ ತ್ವರಿತವಾಗಿ ಪ್ರಯಾಣಿಕರನ್ನು ಸಮಾಧಾನಪಡಿಸಿ, ಘಟನೆಯಲ್ಲಿ ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ.

ವಿಮಾನದಲ್ಲಿ 98 ಪ್ರಯಾಣಿಕರಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಂದು ಗಂಟೆಯೊಳಗೆ, ಇಂಡಿಗೋ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಡಿಬೋರ್ಡಿಂಗ್ ಮಾಡಲು ವ್ಯವಸ್ಥೆ ಮಾಡಿತು, ನಂತರ ಅವರನ್ನು ವಿಮಾನ ನಿಲ್ದಾಣದಲ್ಲಿ ಕಾಯುವ ಕೋಣೆಗೆ ಕರೆದೊಯ್ಯಲಾಯಿತು. ಅವರಿಗೆ ಆಹಾರ ಮತ್ತು ಪಾನೀಯಗಳನ್ನು ನೀಡಲಾಯಿತು.

 50 ಪ್ರತಿಶತ ಸ್ಪೈಸ್‌ಜೆಟ್‌ ವಿಮಾನ ಹಾರಾಟಕ್ಕೆ ಆದೇಶ

50 ಪ್ರತಿಶತ ಸ್ಪೈಸ್‌ಜೆಟ್‌ ವಿಮಾನ ಹಾರಾಟಕ್ಕೆ ಆದೇಶ

ಸ್ಪೈಸ್‌ಜೆಟ್‌ ವಿಮಾನಗಳಲ್ಲಿ ಪದೇ ಪದೇ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುಂದಿನ ಎಂಟು ವಾರಗಳವರೆಗೆ ಅದರ ಶೇಕಡಾ 50 ಕ್ಕಿಂತ ಹೆಚ್ಚು ಹಾರಾಟ ನಡೆಸದಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (ಡಿಜಿಸಿಎ) ಆದೇಶಿಸಿದೆ.

ಜೂನ್ 19 ಮತ್ತು ಜುಲೈ 5 ರ ನಡುವೆ ಸ್ಪೈಸ್‌ಜೆಟ್‌ನ ವಿಮಾನಗಳು ಎಂಟು ಬಾರಿ ತಾಂತ್ರಿಕ ದೋಷಗಳು ಕಾಣಿಸಿಕೊಂಡಿದ್ದವು. ತಾಂತ್ರಿಕ ದೋಷಗಳ ಕಾರಣದಿಂದ ಹಲವು ಬಾರಿ ತುರ್ತು ಭೂಸ್ಪರ್ಶ ಮಾಡಲಾಗಿತ್ತು. ತಾಂತ್ರಿಕ ದೋಷ ಪ್ರಕರಣ ಹೆಚ್ಚಾದ ನಂತರ ಡಿಜಿಸಿಎ ಜುಲೈ 6 ರಂದು ವಿಮಾನಯಾನ ಸಂಸ್ಥೆಗೆ ಶೋಕಾಸ್ ನೋಟಿಸ್ ನೀಡಿತ್ತು.

 ವಿಮಾನಯಾನ ಸೇವೆಯಲ್ಲಿ ವ್ಯತ್ಯಯ ಇಲ್ಲ ಎಂದ ಸ್ಪೈಸ್‌ಜೆಟ್

ವಿಮಾನಯಾನ ಸೇವೆಯಲ್ಲಿ ವ್ಯತ್ಯಯ ಇಲ್ಲ ಎಂದ ಸ್ಪೈಸ್‌ಜೆಟ್

ಡಿಜಿಸಿಎ ಆದೇಶದಿಂದಾಗಿ ವಿಮಾನಯಾನ ವೇಳಾಪಟ್ಟಿಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಸ್ಪೈಸ್ ಜೆಟ್ ಹೇಳಿಕೆಯಲ್ಲಿ ತಿಳಿಸಿದೆ. "ಎಲ್ಲಾ ಸ್ಪೈಸ್‌ಜೆಟ್ ವಿಮಾನಗಳು ವೇಳಾಪಟ್ಟಿಯ ಪ್ರಕಾರ ಸಮಯಕ್ಕೆ ಕಾರ್ಯನಿರ್ವಹಿಸುತ್ತವೆ" ಎಂದು ಅದು ಹೇಳಿದೆ.

"ಮುಂಬರುವ ದಿನಗಳು ಮತ್ತು ವಾರಗಳಲ್ಲಿ ನಮ್ಮ ವಿಮಾನಗಳು ವೇಳಾಪಟ್ಟಿಯ ಪ್ರಕಾರ ಕಾರ್ಯನಿರ್ವಹಿಸುತ್ತವೆ ಎಂದು ನಾವು ಮತ್ತೊಮ್ಮೆ ನಮ್ಮ ಪ್ರಯಾಣಿಕರಿಗೆ ಮತ್ತು ಪ್ರಯಾಣ ಪಾಲುದಾರರಿಗೆ ಭರವಸೆ ನೀಡಲು ಬಯಸುತ್ತೇವೆ" ಎಂದು ಸ್ಪಷ್ಟಪಡಿಸಿದೆ.

English summary
IndiGo flight slips from runway and stuck in muddy field in Jorhat airport in Assam.The flight was scheduled to depart at 2.20 pm but the flight delayed after the incident. There were 98 passengers on board. All passengers deboarded and are safely deboarded after incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X