ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ನೋಟು ಸ್ವೀಕರಿಸದ 'ಇಂಡಿಗೋ' ವಿರುದ್ಧ ದೂರು

|
Google Oneindia Kannada News

ಬೆಂಗಳೂರು, ನವೆಂಬರ್ 22: ಬೆಂಗಳೂರು- ದುಬೈ ಮಧ್ಯದ ಇಂಡಿಗೋ ವಿಮಾನ 6E95ನ ಪ್ರಯಾಣಿಕರೊಬ್ಬರು ವಿಮಾನ ಯಾನ ಸಂಸ್ಥೆ ವಿರುದ್ಧ ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಆಹಾರ ಖರೀದಿಗೆ ಭಾರತೀಯ ನೋಟುಗಳನ್ನು ತೆಗೆದುಕೊಳ್ಳಲಿಲ್ಲ ಎಂಬುದು ಅವರ ಆರೋಪ.

ಪ್ರಮೋದ್ ಜೈನ್ ಅವರು ಅಕ್ಟೋಬರ್ ಹತ್ತರಂದು ಬೆಳಗ್ಗೆ ವಿಮಾನ ಏರಿದ್ದರು. ಇಂಡಿಗೋ ನಿಯಮದ ಪ್ರಕಾರ ಭಾರತೀಯ ನೋಟುಗಳನ್ನು ತೆಗೆದುಕೊಳ್ಳುವುದಿಲ್ಲ, ಅಮೆರಿಕ ಡಾಲರ್ ಮಾತ್ರ ತೆಗೆದುಕೊಳ್ಳುವುದು ಎಂದು ತಿಳಿದಾಗ ಅಚ್ಚರಿಗೆ ಈಡಾಗಿದ್ದಾರೆ. ಹಲವು ಬಾರಿ ಮನವಿ ಮಾಡಿದ ನಂತರವೂ ಮಾನವೀಯತೆ ನೆಲೆಯಲ್ಲೂ ಸ್ಪಂದಿಸಿಲ್ಲ.

ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ್ದ ಇಂಡಿಗೋ ಉದ್ಯೋಗಿಗಳ ವಜಾಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ್ದ ಇಂಡಿಗೋ ಉದ್ಯೋಗಿಗಳ ವಜಾ

ನಾನು ಸ್ಯಾಂಡ್ ವಿಚ್ ಆರ್ಡರ್ ಮಾಡಿದೆ. ಅದಕ್ಕೆ ಮುನ್ನೂರು ರುಪಾಯಿ ಬೆಲೆ. ಭಾರತೀಯ ಕರೆನ್ಸಿ ಕೊಡ್ತೀನಿ ಅಂದಿದ್ದಕ್ಕೆ ಅವರು ಒಪ್ಪಲಿಲ್ಲ. ಅಮೆರಿಕ ಡಾಲರ್ ಕೊಟ್ಟರಷ್ಟೇ ತೆಗೆದುಕೊಳ್ತೀನಿ ಅಂದರು. ಬೆಳಗ್ಗೆಯಿಂದ ನಾನು ಹಸಿವಿನಿಂದ ಇದೀನಿ ಎಂದು ಕೆಳಿಕೊಂಡ ನಂತರವೂ ನನಗೆ ಆಹಾರ ಕೊಡಲು ನಿರಾಕರಿಸಿದರು ಎಂದು ಪ್ರಮೋದ್ ಹೇಳಿದ್ದಾರೆ.

indigo

ತಮ್ಮ ಪ್ರವಾಸ ಮುಗಿಸಿ ಬಂದ ನಂತರ ವಿಮಾನ ಯಾನ ಸಂಸ್ಥೆಯವರಿಗೆ ಈ ಬಗ್ಗೆ ಗಮನಕ್ಕೆ ತಂದಿದ್ದಾರೆ. ಆದರೆ ಅದಕ್ಕೆ ನೀಡಿದ ಉತ್ತರ ಸಮಾಧಾನಕರವಾಗಿಲ್ಲ ಎಂಬ ಕಾರಣಕ್ಕೆ ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ.

"ಭಾರತದ ನೋಟುಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಹೇಳುವ ಮೂಲಕ ದೇಶದ ಸಂವಿಧಾನದಿಂದ ಮಾನ್ಯತೆ ಪಡೆದ ಕರೆನ್ಸಿಗೆ ವಿದೇಶೀಯರ ಮುಂದೆ ಭಾರತದ ಸಂಸ್ಥೆಯೊಂದು ಅವಮಾನ ಮಾಡಿದೆ" ಎಂದು ಪ್ರಮೋದ್ ಹೇಳಿದ್ದಾರೆ.

English summary
A passenger on IndiGo flight 6E95 Bangalore-Dubai has filed a complaint against the airline with Delhi Police alleging that IndiGo refused to accept the Indian currency while purchasing food on board.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X