ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶೇಷ ವರ್ತನೆಯ ಬಾಲಕನಿಗೆ ವಿಮಾನ ಪ್ರಯಾಣ ನಿರಾಕರಣೆ: ಇಂಡಿಗೋ ಏರ್‌ಲೈನ್ಸ್‌ಗೆ 5 ಲಕ್ಷ ದಂಡ

|
Google Oneindia Kannada News

ನವದೆಹಲಿ, ಮೇ 28: ಕೆಲ ವಾರಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದ ಇಂಡಿಗೋ ಏರ್ಲೈನ್ಸ್ (IndiGo Airlines) ಸಿಬ್ಬಂದಿಯ ಅನುಚಿತ ವರ್ತನೆಯ ಪ್ರಕರಣದಲ್ಲಿ ಆ ಸಂಸ್ಥೆಗೆ 5 ಲಕ್ಷ ರೂ ದಂಡ ವಿಧಿಸಲಾಗಿದೆ.

ಇಂಡಿಗೋ ಏರ್‌ಲೈನ್ಸ್‌ನ ಸಿಬ್ಬಂದಿ ವಿಶೇಷ ವರ್ತನೆಯ ಬಾಲಕನೊಬ್ಬನಿಗೆ ವಿಮಾನ ಪ್ರಯಾಣದ ಅವಕಾಶ ನಿರಾಕರಿಸಿದ್ದರೆಂಬ ಆರೋಪ ಇರುವ ಪ್ರಕರಣ ಇದಾಗಿದೆ. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA- Directorate General of Civial Aviation) ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಇಂಡಿಗೋ ಏರ್‌ಲೈನ್ಸ್‌ನ ಸಿಬ್ಬಂದಿ ಅತಿರೇಕದ ನಿರ್ಧಾರ ತೆಗೆದುಕೊಳ್ಳುವ ಬದಲು ತಾಳ್ಮೆ ವಹಿಸಬಹುದಿತ್ತು ಎಂದು ಹೇಳಿ 5 ಲಕ್ಷ ರೂ ದಂಡ ವಿಧಿಸುವ ನಿರ್ಧಾರ ಪ್ರಕಟಿಸಿದೆ.

ಜೆಟ್ ಇಂಧನ ಬೆಲೆ ಗಗನಕ್ಕೆ; ವಿಮಾನ ಪಯಣವಾಗಲಿದೆ ಇನ್ನೂ ದುಬಾರಿಜೆಟ್ ಇಂಧನ ಬೆಲೆ ಗಗನಕ್ಕೆ; ವಿಮಾನ ಪಯಣವಾಗಲಿದೆ ಇನ್ನೂ ದುಬಾರಿ

ಈ ಘಟನೆಯ ತನಿಖೆ ನಡೆದಿದ್ದು, ಅದರಲ್ಲಿ ಇಂಡಿಗೋ ಏರ್‌ಲೈನ್ಸ್ ಸಂಸ್ಥೆಯ ಗ್ರೌಂಡ್ ಸ್ಟಾಫ್‌ನವರು ಅನುಚಿತ ಮತ್ತು ಅನವಶ್ಯಕ ವರ್ತನೆ ತೋರಿದ ಸಂಗತಿ ಋಜುವಾತಾಗಿತ್ತು.

IndiGo Airlines Fined 5 Lakh For Not Allowing Special Boy to Board Flight

"ಇಂಡಿಗೋದ ಗ್ರೌಂಡ್ ಸ್ಟಾ್‌ನವರು ವಿಶೇಷ ಮಗುವಿನ ಜೊತೆ ಹೇಗೆ ವರ್ತಿಸಬೇಕೆಂದು ಗೊತ್ತಿಲ್ಲದೆ ಅತಿರೇಕವಾಗಿ ನಡೆದುಕೊಂಡರು. ಹೆಚ್ಚು ತಾಳ್ಮೆಯಿಂದ ಪರಿಸ್ಥಿತಿ ನಿರ್ವಹಿಸಿದ್ದರೆ ಬಾಲಕನನ್ನು ಸಮಾಧಾನಗೊಳಿಸಬಹುದಿತ್ತು" ಎಂದು ಡಿಜಿಸಿಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

"ಕೆಲ ವಿಶೇಷ ಪರಿಸ್ಥಿತಿಯಲ್ಲಿ ಅಸಾಧಾರಣ ರೀತಿಯ ಸ್ಪಂದನೆಯ ಅಗತ್ಯತೆ ಇರುತ್ತದೆ. ಆದರೆ, ಇಂಡಿಗೋ ಸಂಸ್ಥೆಯ ನೌಕರರು ಪರಿಸ್ಥಿತಿ ನಿಭಾಯಿಸಲು ವಿಫಲರಾದರು. ವಿಮಾನಯಾನ ನಿಯಮಗಳ ಆಶಯಕ್ಕೆ ತಕ್ಕಂತೆ ಅವರು ನಡೆದುಕೊಳ್ಳಲಿಲ್ಲ" ಎಂದು ಈ ಪ್ರಾಧಿಕಾರವು ಅಭಿಪ್ರಾಯಪಟ್ಟಿದೆ.

ಏನಿದು ಪ್ರಕರಣ?
ಮೇ 7ರಂದು ಮನೀಶಾ ಗುಪ್ತ ಎಂಬ ವ್ಯಕ್ತಿಯೊಬ್ಬರು ರಾಂಚಿ-ಹೈದರಾಬಾದ್ ವಿಮಾನದಲ್ಲಿ ನಡೆದಿದ್ದ ಪ್ರಸಂಗವನ್ನು ವಿವರಿಸುತ್ತಾ ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಾಕಿದ್ದರು. ವಿಮಾನ ನಿಲ್ದಾಣಕ್ಕೆ ಬಂದಿದ್ದ ಒಂದು ಮಗುವಿನ ವಿಚಾರದ ಬಗ್ಗೆ ಇಂಡಿಗೋ ಸಂಸ್ಥೆಯ ಮ್ಯಾನೇಜರ್ ತಾಳ್ಮೆ ಕಳೆದುಕೊಂಡವರಂತೆ ಕಿರಿಚುತ್ತಿದ್ದರೆಂದು ಈಕೆ ತನ್ನ ಪೋಸ್ಟ್‌ನಲ್ಲಿ ವಿವರಿಸಿದ್ದರು.

ವಿಶ್ವದ ಅತಿದೂರದ ತಡೆರಹಿತ ವಿಮಾನ, ವಿಶೇಷತೆಗಳುವಿಶ್ವದ ಅತಿದೂರದ ತಡೆರಹಿತ ವಿಮಾನ, ವಿಶೇಷತೆಗಳು

ಹುಡುಗ ಬಹಳ ರಚ್ಚೆ ಹಿಡಿದಿದ್ದಾನೆ. ನಿಯಂತ್ರಿಸಲು ಆಗುತ್ತಿಲ್ಲ ಎಂದು ಹೇಳಿ ಆ ಬಾಲಕ ಹಾಗೂ ಆತನ ಕುಟುಂಬಕ್ಕೆ ವಿಮಾನ ಹತ್ತಲೂ ಸಿಬ್ಬಂದಿ ಅವಕಾಶ ಕೊಡಲಿಲ್ಲ. ಅದೇ ವಿಮಾನದ ಬೇರೆ ಪ್ರಯಾಣಿಕರು ಮನವಿ ಮಾಡಿಕೊಂಡರೂ ಸಿಬ್ಬಂದಿ ಕಿವಿಗೊಡಲಿಲ್ಲ ಎಂದು ಮನೀಶಾ ಗುಪ್ತ ಬೇಸರ ವ್ಯಕ್ತಪಡಿಸಿದ್ದರು.

IndiGo Airlines Fined 5 Lakh For Not Allowing Special Boy to Board Flight

ಇಂಡಿಗೋ ಸಂಸ್ಥೆ ಹೇಳುವುದೇನು?
"ಪರಿಸ್ಥಿತಿಯು ಕಠಿಣ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿತು. ಚೆಕ್-ಇನ್‌ನಿಂದ ಹಿಡಿದು ಬೋರ್ಡಿಂಗ್ ಪ್ರಕ್ರಿಯೆವರೆಗೂ ನಮಗೆ ಆ ಕುಟುಂಬವನ್ನು ವಿಮಾನ ಹತ್ತಿಸುವ ಉದ್ದೇಶವೇ ಇತ್ತು. ಆದರೆ, ಬೋರ್ಡಿಂಗ್ ಜಾಗದಲ್ಲಿ ಆ ಹುಡುಗ ಬಹಳ ಗಾಬರಿಗೊಂಡಿದ್ದ. ನಮ್ಮ ಪ್ರಯಾಣಿಕರೊಂದಿಗೆ ಬಹಳ ಸೌಜನ್ಯದಿಂದ ನಡೆದುಕೊಳ್ಳುವುದು ನಮಗೆ ಬಹಳ ಮುಖ್ಯವೇನೋ ಹೌದು. ಆದರೆ, ಆ ಪರಿಸ್ಥಿತಿಯಲ್ಲಿ ಸುರಕ್ಷತಾ ದೃಷ್ಟಿಯಿಂದ ಆ ಕುಟುಂಬಕ್ಕೆ ವಿಮಾನ ಹತ್ತಲು ಅವಕಾಶ ಕೊಡದೇ ಇರುವ ಕಠಿಣ ನಿರ್ಧಾರಕ್ಕೆ ಬರಬೇಕಾಯಿತು" ಎಂದು ಇಂಡಿಗೋ ಏರ್‌ಲೈನ್ಸ್ ಸಿಇಒ ರೊಣೊಜೊಯ್ ದತ್ತ (Ronojoy Dutta) ಸ್ಪಷ್ಟನೆ ನೀಡಿದ್ದಾರೆ.

ಒಂದು ವೇಳೆ ವಿಮಾನ ಹತ್ತಿದರೆ ಅಲ್ಲಿ ಆ ಹುಡುಗ ಇನ್ನಷ್ಟು ಗಾಬರಿಗೊಂಡು ಏನಾದರೂ ಹೆಚ್ಚೂಕಡಿಮೆ ಆಗಿಬಿಟ್ಟೀತೆಂಬ ಮುಂಜಾಗ್ರತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಯಿತು ಎಂದಿದ್ದಾರೆ. ಆ ಬಾಲಕ ಮತ್ತವನ ಕುಟುಂಬಕ್ಕೆ ಹೋಟೆಲ್‌ನಲ್ಲಿ ಉಳಿದುಕೊಳ್ಳಲು ಸಂಸ್ಥೆಯೇ ವ್ಯವಸ್ಥೆ ಮಾಡಿತ್ತು. ಮರುದಿನ ಬೆಳಗ್ಗೆ ಬೇರೆ ವಿಮಾನದಲ್ಲಿ ಆ ಕುಟುಂಬ ತಮ್ಮ ಸ್ಥಳಕ್ಕೆ ಹೋದರೆನ್ನಲಾಗಿದೆ.

ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಬೆಳಕಿಗೆ ಬಂದ ಬಳಿಕ ಡಿಜಿಸಿಎ ತನಿಖೆ ನಡೆಸಿದೆ. ಅದರಲ್ಲಿ ಇಂಡಿಗೋ ಏರ್‌ಲೈನ್ಸ್ ಸಿಬ್ಬಂದಿಯಿಂದ ಪ್ರಯಾಣಿಕರಿಗೆ ಕಿರಿಕಿರಿ ಆಗುತ್ತಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಈಗ ಆ ಸಂಸ್ಥೆಗೆ 5 ಲಕ್ಷ ರೂ ದಂಡ ವಿಧಿಸಿರುವುದು ಎಚ್ಚರಿಕೆಯ ಕರೆಗಂಟೆಯಾಗಿದೆ.

(ಒನ್ಇಂಡಿಯಾ ಸುದ್ದಿ)

English summary
IndiGo airlines has been fined ₹ 5 lakh for not allowing a boy with special needs to board a flight from Ranchi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X