ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ಟಾಪ್-10 ವಿಮಾನಯಾನ ಸಂಸ್ಥೆಗಳಲ್ಲಿ ಗುರುತಿಸಿಕೊಂಡ IndiGo

|
Google Oneindia Kannada News

ನವದೆಹಲಿ, ಸಪ್ಟೆಂಬರ್.10: ವಿಶ್ವದಲ್ಲೇ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುವ ವಿಮಾನಯಾನಗಳ ಷೇರುಗಳಲ್ಲಿ ಭಾರತದ ಇಂಡಿಗೋ ಸ್ಥಾನ ಪಡೆದುಕೊಂಡಿದೆ. ಜಗತ್ತಿನ ಟಾಪ್-10 ವಿಮಾನಯಾನ ಷೇರುಗಳಲ್ಲಿ ಚೀನಾದ 9 ವಿಮಾನಯಾನ ಕಂಪನಿಗಲಿದ್ದರೆ, ಭಾರತದ ಒಂದು ಕಂಪನಿಯಿದೆ.
ಕಳೆದ ಮೂರು ತಿಂಗಳಿನಲ್ಲಿ ನಡೆದ ಷೇರು ವಹಿವಾಟಿನಲ್ಲಿ ಚೀನಾಗೆ ಸೇರಿದ 9 ಕಂಪನಿಗಳು ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿವೆ. ಭಾರತದಲ್ಲಿ ಅತ್ಯುತ್ತಮ ಸೇವೆ ನೀಡುತ್ತಿರುವ ಇಂಡಿಗೋ ಸಂಸ್ಥೆಯ ಷೇರುಗಳು 6ನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ.

ಇಂಡಿಗೋ ಸಂಸ್ಥೆ ಷೇರುಗಳಲ್ಲಿ ಶೇ.13ರಷ್ಟು ಏರಿಕೆ ಕಂಡು ಬಂದಿದ್ದು, ಅಗ್ರಸ್ಥಾನದಲ್ಲಿರುವ ಚೀನಾದ ಸ್ಪ್ರಿಂಗ್ ಏರ್ ಲೈನ್ಸ್ ಸಂಸ್ಥೆ ಷೇರುಗಳಲ್ಲಿ ಶೇ.22ರಷ್ಟು ಏರಿಕೆ ಕಂಡುಬಂದಿದೆ. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ಜಾಗತಿಕ ವಿಮಾನಯಾನಕ್ಕೆ ಆರ್ಥಿಕ ಹೊಡೆತ ಬಿದ್ದಿದೆ.

IndiGo Airline Secures Only Place In Worlds Top 10, Rest All Chinese

2024ರವರೆಗೂ ವಾಯು ಸಾರಿಗೆಗೆ ಸಂಕಷ್ಟ:

"ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಪ್ರಭಾವ 2024ಕ್ಕಿಂತ ಮೊದಲ ಕಡಿಮೆಯಾಗುವ ನಿರೀಕ್ಷೆಗಳೇ ಸುಳ್ಳು ಎಂದು 290 ವಿಮಾನಗಳನ್ನು ಪ್ರತಿನಿಧಿಸಿರುವ ಅಂತಾರಾಷ್ಟ್ರೀಯ ವಾಯು ಸಾರಿಗೆ ಸಂಸ್ಥೆಯೊಂದು ತಿಳಿಸಿದೆ. ಕೊರೊನಾವೈರಸ್ ಸೋಂಕಿನ ಪೂರ್ವದಲ್ಲಿದ್ದಂತೆ ಪ್ರಯಾಣಿಕರ ಸಂಖ್ಯೆಯು ಹೆಚ್ಚಾಗಬೇಕಿದ್ದಲ್ಲಿ ಇನ್ನೂ ನಾಲ್ಕು ವರ್ಷಗಳ ಕಾಯಬೇಕಾಗಬಹುದು" ಎಂದು ಸಂಸ್ಥೆಯು ತಿಳಿಸಿದೆ.

ಬೆಂಗಳೂರಿನಿಂದ ಹಾರಲಿವೆ 14 ಅಂತರಾಷ್ಟ್ರೀಯ ವಿಮಾನಗಳುಬೆಂಗಳೂರಿನಿಂದ ಹಾರಲಿವೆ 14 ಅಂತರಾಷ್ಟ್ರೀಯ ವಿಮಾನಗಳು

ಚೀನಾದಲ್ಲಿ ಕೊವಿಡ್-19 ಪರಿಸ್ಥಿತಿ ನಿಯಂತ್ರಣ:

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಚೀನಾದಲ್ಲಿ ವೇಗವಾಗಿ ನಿಯಂತ್ರಣಕ್ಕೆ ಬಂದಿತು. ಇದರಿಂದ ಆಂತರಿಕ ವಿಮಾನಯಾನ ಸಂಚಾರ, ಸರಕು-ಸೇವೆಗಳ ಸರಬರಾಜುಗೆ ವಿಮಾನಗಳ ಬಳಕೆಯನ್ನು ಆರಂಭಿಸಲಾಗಿದ್ದು, ಚೀನಾದ ವಿಮಾನಯಾನ ಸಂಸ್ಥೆಯ ನಿರ್ವಹಣೆಗೆ ಹೆಚ್ಚು ಅನುಕೂಲವಾಯಿತು ಎಂದು ತಿಳಿದು ಬಂದಿದೆ.

ಇಂಡಿಗೊ ವಿಮಾನಯಾನ ಸಂಸ್ಥೆಯನ್ನು ಖಾಸಗಿ ಕಂಪನಿಯಾಗಿ ಇಂಟರ್ ಗ್ಲೋಬ್ ಎಂಟರ್‌ಪ್ರೈಸಸ್‌ನ ರಾಹುಲ್ ಭಾಟಿಯಾ ಮತ್ತು ರಾಕೇಶ್ ಗಂಗ್ವಾಲ್ ಅವರು 2006ರಲ್ಲಿ ಸ್ಥಾಪಿಸಿದರು. ಹರಿಯಾಣದ ಗುರುಗ್ರಾಮ್ ‌ನಲ್ಲಿ ಇಂಡಿಗೋ ಪ್ರಧಾನ ಕಚೇರಿಯಿದೆ.

English summary
IndiGo Airline Secures Only Place In World's Top 10, Rest All Chinese.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X