ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡಿಯಾ ಸ್ಕಿಲ್ಸ್ 2021 ಸ್ಪರ್ಧೆ: ಕರ್ನಾಟಕದ ವಿದ್ಯಾರ್ಥಿಗಳಿಗೆ 19 ಪದಕ

|
Google Oneindia Kannada News

ಬೆಂಗಳೂರು, ಜನವರಿ 12: ಇಂಡಿಯಾ ಸ್ಕಿಲ್ಸ್ 2021 ರ ರಾಷ್ಟ್ರೀಯ ಸ್ಪರ್ಧೆಯಲ್ಲಿ ಕರ್ನಾಟಕವು ಅತ್ಯುತ್ತಮ ಪ್ರದರ್ಶನ ನೀಡಿದ ರಾಜ್ಯಗಳಲ್ಲಿ ಒಂದಾಗಿದೆ, 19 ವಿದ್ಯಾರ್ಥಿಗಳಿಗೆ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ನೀಡಿ ಗೌರವಿಸಲಾಯಿತು. 7 ಚಿನ್ನ, 8 ಬೆಳ್ಳಿ ಮತ್ತು 4 ಕಂಚಿನ ಪದಕಗಳನ್ನು ಗೆದ್ದ ನಂತರ ಕರ್ನಾಟಕವು ಇಂಡಿಯಾ ಸ್ಕಿಲ್ಸ್ 2021 ನ್ಯಾಷನಲ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ರಾಜ್ಯಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಒಟ್ಟಾರೆಯಾಗಿ, ಸ್ಪರ್ಧೆಯಲ್ಲಿ 185 ಅಭ್ಯರ್ಥಿಗಳನ್ನು ವಿಜೇತರೆಂದು ಘೋಷಿಸಲಾಯಿತು ಮತ್ತು ನವದೆಹಲಿಯ ಟಾಲ್ಕಟೋರಾ ಕ್ರೀಡಾಂಗಣದಲ್ಲಿ ವಿಜೇತರನ್ನು ಭಾರತ ಸರ್ಕಾರದ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ (MSDE) ಕಾರ್ಯದರ್ಶಿಗಳಾದ ರಾಜೇಶ್ ಅಗರ್ವಾಲ್‍ರವರು ಸನ್ಮಾನಿಸಿದರು. ವಿಜೇತರಿಗೆ ರೂ.1,00,000 ನಗದು ಬಹುಮಾನ ನೀಡಲಾಯಿತು, ಮೊದಲ ರನ್ನರ್ಸ್ ಅಪ್ ಮತ್ತು ಎರಡನೇ ರನ್ನರ್ಸ್ ಅಪ್‍ಗಳಿಗೆ ಕ್ರಮವಾಗಿ ರೂ.75,000 ಮತ್ತು ರೂ.50,000 ಗಳನ್ನು ನೀಡಲಾಯಿತು.

MSDE ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮವು ಆಯೋಜಿಸಿದ ಒಳಾಂಗಣ ಸ್ಪರ್ಧೆಯು ಕಾಂಕ್ರೀಟ್ ನಿರ್ಮಾಣ ಕೆಲಸ, ಸೌಂದರ್ಯ ಚಿಕಿತ್ಸೆ, ಕಾರ್ ಪೇಂಟಿಂಗ್, ಆರೋಗ್ಯ ಮತ್ತು ಸಾಮಾಜಿಕ ಕಾಳಜಿ, ದೃಶ್ಯ ವ್ಯಾಪಾರೀಕರಣ, ಗ್ರಾಫಿಕ್ ವಿನ್ಯಾಸ ತಂತ್ರಜ್ಞಾನ, ಗೋಡೆ ಮತ್ತು ನೆಲದ ಟೈಲಿಂಗ್, ವೆಲ್ಡಿಂಗ್ ಮುಂತಾದ 54 ಕೌಶಲ್ಯಗಳಲ್ಲಿನ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು.

ಯುವಜನತೆಯ ಪ್ರೊಫೈಲ್ ಮತ್ತು ಮನ್ನಣೆಯನ್ನು ಹೆಚ್ಚಿಸುವ ಇಂಡಿಯಾ ಸ್ಕಿಲ್ಸ್ ಸ್ಪರ್ಧೆಯು ಈ ವರ್ಷ 26 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ 500 ಕ್ಕೂ ಹೆಚ್ಚು ಸ್ಪರ್ಧಿಗಳನ್ನು ಒಟ್ಟಿಗೆ ಸೇರಿಸಿತು. ಸ್ಥಳೀಯ ಅಧಿಕಾರಿಗಳು ಮತ್ತು ದೆಹಲಿ ಸರ್ಕಾರವು ಕಡ್ಡಾಯಗೊಳಿಸಿದ ಕೋವಿಡ್-19 ಮಾರ್ಗಸೂಚಿಗಳ ಅಡಿಯಲ್ಲಿ ರಾಷ್ಟ್ರೀಯ ರಾಜಧಾನಿಯಲ್ಲಿನ ಪ್ರಗತಿ ಮೈದಾನ ಮತ್ತು ಇತರ ದೂರದ ಸ್ಥಳಗಳು ಸೇರಿದಂತೆ ಅನೇಕ ಸ್ಥಳಗಳಲ್ಲಿ ಕೌಶಲ್ಯ ಸ್ಪರ್ಧೆಗಳನ್ನು ಜನವರಿ 7 ರಿಂದ 9 ರವರೆಗೆ ನಡೆಸಲಾಯಿತು.

IndiaSkills 2021 National Competition, Karnataka 19 students felicitated with medals

ಆದಾಗ್ಯೂ, ಸಂದರ್ಶಕರು/ವೀಕ್ಷಕರಿಗೆ ಪ್ರವೇಶ ನಿರ್ಬಂಧ, ಸಾಕಷ್ಟು ಸಾಮಾಜಿಕ ಅಂತರ ಮತ್ತು ಸ್ಪರ್ಧೆಯ ಆವರಣದ ಆಗಾಗ್ಗೆ ನೈರ್ಮಲ್ಯೀಕರಣ ಸೇರಿದಂತೆ ಎಲ್ಲಾ ಸುರಕ್ಷತಾ ಪ್ರೋಟೋಕಾಲ್‍ಗಳನ್ನು ಅನುಸರಿಸಲಾಗಿತ್ತು. ಸ್ಪರ್ಧಿಗಳನ್ನು ಮತ್ತಷ್ಟು ಚದುರಿಸಲು, ಎಂಟು ಕೌಶಲ್ಯಗಳ ಸ್ಪರ್ಧೆಗಳನ್ನು ಜನವರಿ 3 ರಿಂದ 5 ರವರೆಗೆ ಬೆಂಗಳೂರು ಮತ್ತು ಮುಂಬೈನಲ್ಲಿ ನಡೆಸಲಾಯಿತು.

ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೇದ್ ಮಣಿ ತಿವಾರಿ, ವಲ್ರ್ಡ್ ಸ್ಕಿಲ್ಸ್ ಇಂಡಿಯಾದ ನಿರ್ದೇಶಕರಾದ ಪ್ರಕಾಶ್ ಶರ್ಮಾ ಮತ್ತು ವರ್ಲ್ಡ್‌ ಸ್ಕಿಲ್ಸ್ ಇಂಡಿಯಾದ ಹಿರಿಯ ಮುಖ್ಯಸ್ಥ ಕರ್ನಲ್ ಅರುಣ್ ಚಾಂಡೆಲ್ ಅವರು ಇಂದು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

IndiaSkills 2021 National Competition, Karnataka 19 students felicitated with medals

ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ (MSDE) ಕಾರ್ಯದರ್ಶಿ ರಾಜೇಶ್ ಅಗರ್ವಾಲ್, "ಇಂಡಿಯಾ ಸ್ಕಿಲ್ಸ್ ರಾಷ್ಟ್ರೀಯ ಸ್ಪರ್ಧೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಪ್ರತಿಭೆ, ಉತ್ಸಾಹ ಮತ್ತು ಪರಿಶ್ರಮದ ಗುಣಮಟ್ಟವನ್ನು ನೋಡಲು ಅತೀವ ಸಂತೋಷವಾಗಿದೆ. ಎಲ್ಲಾ ವಿಜೇತರು ಮತ್ತು ಸ್ಪರ್ಧಿಗಳಿಗೆ ಅಭಿನಂದನೆಗಳು. ನಾನು ಎಲ್ಲಾ ಚಾಂಪಿಯನ್‍ಗಳನ್ನು ವೈಯಕ್ತಿಕವಾಗಿ ಭೇಟಿ ಮಾಡಿದ್ದೇನೆ ಮತ್ತು ಅಂತಹ ಸಮರ್ಥ ಕಾರ್ಯಪಡೆಯೊಂದಿಗೆ ಕೌಶಲ್ಯಗಳ ಭವಿಷ್ಯವು ಸುರಕ್ಷಿತ ಕೈಗಳಲ್ಲಿದೆ ಎಂದು ನನಗೆ ವಿಶ್ವಾಸವಿದೆ. ಸ್ಪರ್ಧೆಯು ಹೊಸ ವಿಕಸನ ಕೌಶಲ್ಯ ಗಳ ಶ್ರೇಣಿಯೊಂದಿಗೆ ಗುರುತರವಾದ ವೇಗವನ್ನು ಪಡೆದಿದೆ ಮತ್ತು ಇತ್ತೀಚಿನ ತಂತ್ರಜ್ಞಾನ ಮತ್ತು ತಂತ್ರಗಳನ್ನು ಒಳಗೊಂಡಿದೆ ಎಂದು ನಾನು ಒಪ್ಪಿಕೊಳ್ಳಲೇಬೇಕು.

ಈ ವರ್ಷಾಂತ್ಯದಲ್ಲಿ ಚೀನಾದ ಶಾಂಘೈನಲ್ಲಿ ನಡೆಯಲಿರುವ ವಲ್ರ್ಡ್ ಸ್ಕಿಲ್ಸ್ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ಟೀಮ್ ಇಂಡಿಯಾ ಅಪೇಕ್ಷಿತ ತರಬೇತಿ ಮತ್ತು ಸಾಧನಗಳೊಂದಿಗೆ ಉತ್ತಮವಾಗಿ ಸಜ್ಜುಗೊಂಡಿದೆ ಎಂದು ಖಚಿತಪಡಿಸಿಕೊಳ್ಳಲು ಸರ್ಕಾರ, ಉದ್ಯಮ ಮತ್ತು ತಜ್ಞರು ಒಟ್ಟಾಗಿ ಕೆಲಸ ಮಾಡುತ್ತಾರೆ. ಜಾಗತಿಕ ವೇದಿಕೆಯಲ್ಲಿ ಈ ವರ್ಷ ನಾವು ಹೆಚ್ಚು ಪದಕಗಳನ್ನು ಗಳಿಸುತ್ತೇವೆ ಎಂದು ನನಗೆ ಖಾತರಿಯಿದೆ. "

IndiaSkills 2021 National Competition, Karnataka 19 students felicitated with medals

Recommended Video

ಭಾರತಕ್ಕಿಂತ ಉತ್ತಮವಾಗಿದೆ ಪಾಕಿಸ್ತಾನದ ಆರ್ಥಿಕತೆ!! ನಿಜಾನಾ?? | Oneindia Kannada

ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಅಧಿಕೃತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೇದ್ ಮಣಿ ತಿವಾರಿ, "ಕೌಶಲ್ಯಗಳು ಅವಕಾಶಗಳನ್ನು ಸೃಷ್ಟಿಸುತ್ತವೆ, ಸಮಾಜಗಳನ್ನು ನಿರ್ಮಿಸುತ್ತವೆ ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತವೆ. ಕೌಶಲ್ಯದ ಮಹತ್ವದ ಬಗ್ಗೆ ಅರಿವು ಮೂಡಿಸುವಲ್ಲಿ ಮತ್ತು ಭವಿಷ್ಯದ ಉದ್ಯೋಗಗಳು ಮತ್ತು ಸವಾಲುಗಳಿಗೆ ತಯಾರಿ ಮಾಡುವಲ್ಲಿ ಕೌಶಲ್ಯ ಸ್ಪರ್ಧೆಗಳು ವ್ಯಕ್ತಿಯೊಬ್ಬರ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇಂಡಿಯಾ ಸ್ಕಿಲ್ಸ್ ಸ್ಪರ್ಧೆಯು ಭವಿಷ್ಯಕ್ಕೆ ಸಂಬಂದಿಸಿದ ವ್ಯಾಪಾರಗಳು ಮತ್ತು ಉದ್ಯೋಗದ ಪಾತ್ರಗಳಿಗೆ ಹೊಸ-ಯುಗದ ಕೌಶಲ್ಯಗಳ ಪರಿಚಯವು ಹೇಗೆ ನವೀಕರಿಸುತ್ತದೆ ಎಂಬುದನ್ನು ತೋರಿಸುತ್ತದೆ. ಇದು ಖಂಡಿತವಾಗಿಯೂ ನಮ್ಮನ್ನು ರೇಖೆಗಿಂತ ಮುಂಚೂಣಿಯಲ್ಲಿಡುತ್ತದೆ ಮತ್ತು ಈ ಕೌಶಲ್ಯಗಳಲ್ಲಿ ವೃತ್ತಿಜೀವನವನ್ನು ಪರಿಗಣಿಸಲು ಇತರ ಯುವಜನರನ್ನು ಪ್ರೇರೇಪಿಸುತ್ತದೆ. "

English summary
Karnataka has emerged as one of the top performing states at the IndiaSkills 2021 Nationals after winning 7 gold, 8 silver, and 4 bronze medals. Overall, 36 candidates participated from the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X