ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಟಾಪ್ 10 ಗಲೀಜು ಹಾಗೂ ತುಂಬ ಸ್ವಚ್ಛ ರೈಲು ನಿಲ್ದಾಣಗಳ ಪಟ್ಟಿ

|
Google Oneindia Kannada News

Recommended Video

ಹೇಗಿದೆ ನಮ್ಮ ದೇಶದ ರೈಲು ನಿಲ್ದಾಣಗಳ ಸ್ಥಿತಿ..! | Oneindia Kannada

ಭಾರತೀಯ ರೈಲ್ವೆಯಲ್ಲಿ ಬದಲಾವಣೆ ತರುವುದಕ್ಕೆ ಕೇಂದ್ರ ಸರಕಾರ ಪ್ರಯತ್ನಿಸುತ್ತಲೇ ಇದೆ. ಅಂಥದ್ದರಲ್ಲೂ ರೈಲು ನಿಲ್ದಾಣದಲ್ಲಿ ರಾಶಿರಾಶಿ ಕಸ, ಗಲೀಜಾದ ಗೋಡೆಗಳು, ಮೂಗು ಮುಚ್ಚಿದರೂ ಸಹಿಸಲು ಸಾಧ್ಯವೇ ಇಲ್ಲದಂತೆ ದುರ್ನಾತ ಬೀರುವ ಶೌಚಾಲಯ ಇವೆಲ್ಲದರಿಂದ ಇನ್ನೂ ಪ್ರಯಾಣಿಕರಿಗೆ ಮುಕ್ತಿ ಸಿಕ್ಕಿಲ್ಲ ಅನ್ನೋದು ಸಮೀಕ್ಷೆಯೊಂದರಿಂದ ಬಯಲಾಗಿದೆ.

ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ (ಕ್ಯೂಸಿಐ) ಸಮೀಕ್ಷೆಯಿಂದ ತಿಳಿದುಬಂದಿರುವುದು ಏನಪ್ಪಾ ಅಂದರೆ, ಸ್ವಚ್ಛತೆ ವಿಚಾರದಲ್ಲಿ ಒಂದಿಷ್ಟು ಬದಲಾವಣೆಯೇನೋ ಆಗಿದೆ. ಆದರೂ ಕೆಲವು ರೈಲು ನಿಲ್ದಾಣಗಳ ದುರವಸ್ಥೆಯಲ್ಲಿ ಅಂಥ ಮಾರ್ಪಾಟಾಗಿಲ್ಲ. ದೇಶದಲ್ಲೇ ಅತಿ ಹೆಚ್ಚು ಆದಾಯ ತರುವ 407 ರೈಲು ನಿಲ್ದಾಣಗಳ ಪೈಕಿ ಅತಿ ಗಲೀಜಾದ ನಿಲ್ದಾಣದ ಪಟ್ಟಿಯಲ್ಲಿ ಮೊದಲ ಸ್ಥಾನ ಉತ್ತರಪ್ರದೇಶದ ಮಥುರಾ ಹಾಗೂ ಷಾಗಂಜ್ ಇದೆ.

ಸೆ.1 ಪ್ರಯಾಣಿಕರಿಗೆ ಉಚಿತ ಪ್ರಯಾಣ ವಿಮೆ ಸೌಲಭ್ಯ ಇನ್ನಿಲ್ಲಸೆ.1 ಪ್ರಯಾಣಿಕರಿಗೆ ಉಚಿತ ಪ್ರಯಾಣ ವಿಮೆ ಸೌಲಭ್ಯ ಇನ್ನಿಲ್ಲ

ಕ್ಯೂಸಿಐನವರು ಸ್ವಚ್ಛತೆ ಬಗ್ಗೆ ವಿವಿಧ ಮಾನದಂಡ ಇಟ್ಟುಕೊಂಡು ಪರಿಶೀಲನೆ ನಡೆಸಿದ್ದಾರೆ. ಇದರ ಹೊರತಾಗಿ ಲಕ್ಷಕ್ಕೂ ಹೆಚ್ಚು ಮಂದಿ ಪ್ರಯಾಣಿಕರನ್ನು ಮಾತನಾಡಿಸಿ, ಅಭಿಪ್ರಾಯ ಸಂಗ್ರಹಿಸಿದ್ದಾರೆ. ಆ ನಂತರ ಭಾರತದ ಸ್ವಚ್ಛ ಹಾಗೂ ಅತಿ ಗಲೀಜಾದ ರೈಲು ನಿಲ್ದಾಣಗಳು ಎಂಬ ಪಟ್ಟಿಯನ್ನೇ ಸಿದ್ಧಪಡಿಸಿದ್ದಾರೆ.

ಕರ್ನಾಟಕದ ಐದು ಎಸಿ ಟ್ರೈನ್ ಗಳ ಪ್ರಯಾಣ ದರ ಇಳಿಕೆಕರ್ನಾಟಕದ ಐದು ಎಸಿ ಟ್ರೈನ್ ಗಳ ಪ್ರಯಾಣ ದರ ಇಳಿಕೆ

A1 ಕ್ಯಾಟಗರಿಗೆ ಸೇರುವ, ಅಂದರೆ 75 ರೈಲು ನಿಲ್ದಾಣಗಳು ಆ ವರ್ಗಕ್ಕೆ ಸೇರಿದ್ದು, ಅವುಗಳಿಗೆ ಪ್ರಯಾಣಿಕರಿಂದ ಇರುವ ವಾರ್ಷಿಕ ವರಮಾನ 75 ಕೋಟಿ ರುಪಾಯಿ ಇದೆ.

A1 ಕ್ಯಾಟಗರಿಗೆ ಸೇರುವ ದೇಶದ ಗಲೀಜಾದ ಟಾಪ್ ಟೆನ್ ರೈಲು ನಿಲ್ದಾಣಗಳು

A1 ಕ್ಯಾಟಗರಿಗೆ ಸೇರುವ ದೇಶದ ಗಲೀಜಾದ ಟಾಪ್ ಟೆನ್ ರೈಲು ನಿಲ್ದಾಣಗಳು

1 ಮಥುರಾ (ಉತ್ತರಪ್ರದೇಶ)

2 ಕಲ್ಯಾಣ್ (ಮಹಾರಾಷ್ಟ್ರ)

3 ಗ್ವಾಲಿಯರ್ (ಮಧ್ಯಪ್ರದೇಶ)

4 ಗಯಾ (ಬಿಹಾರ)

5 ಹೌರಾ (ಪಶ್ಚಿಮ ಬಂಗಾಲ)

6 ಮುಜಾಫರ್ ಪುರ್ (ಬಿಹಾರ)

7 ವಾರಾಣಸಿ (ಉತ್ತರಪ್ರದೇಶ)

8 ಝಾನ್ಸಿ (ಉತ್ತರಪ್ರದೇಶ)

9 ಬರೇಲಿ (ಉತ್ತರಪ್ರದೇಶ)

10 ಭಾಗಲ್ಪುರ್ (ಬಿಹಾರ)

ವಾರ್ಷಿಕ 6ರಿಂದ 50 ಕೋಟಿ ರುಪಾಯಿ ಆದಾಯ ತರುವ A ಕ್ಯಾಟಗರಿಯ ಅತಿ ಗಲೀಜು ರೈಲು ನಿಲ್ದಾಣಗಳ ಪಟ್ಟಿ

ವಾರ್ಷಿಕ 6ರಿಂದ 50 ಕೋಟಿ ರುಪಾಯಿ ಆದಾಯ ತರುವ A ಕ್ಯಾಟಗರಿಯ ಅತಿ ಗಲೀಜು ರೈಲು ನಿಲ್ದಾಣಗಳ ಪಟ್ಟಿ

1 ಷಾಗಂಜ್ (ಉತ್ತರಪ್ರದೇಶ)

2 ಫಫುಂಡ್ (ಉತ್ತರಪ್ರದೇಶ)

3 ಸಸರಾಮ್ ಜಂಕ್ಷನ್ (ಬಿಹಾರ)

4 ನ್ಯೂ ಫರಕ್ಕಾ (ಪಶ್ಚಿಮ ಬಂಗಾಲ)

5 ಅಯೋಧ್ಯಾ (ಉತ್ತರಪ್ರದೇಶ)

6 ಜಗಾಧ್ರಿ (ಹರಿಯಾಣ)

7 ಆದರ್ಶ್ ನಗರ್ ದೆಹಲಿ

8 ಸಗೌಲಿ ಜಂಕ್ಷನ್ (ಬಿಹಾರ)

9 ನಾಗರ್ ಕೋವಿಲ್ (ತಮಿಳುನಾಡು)

10 ಫರೀದಾಬಾದ್ (ಹರಿಯಾಣ)

A1 ಕ್ಯಾಟಗರಿಗೆ ಸೇರುವ ದೇಶದ ಅತ್ಯಂತ ಸ್ವಚ್ಛ ಟಾಪ್ ಟೆನ್ ರೈಲು ನಿಲ್ದಾಣಗಳು

A1 ಕ್ಯಾಟಗರಿಗೆ ಸೇರುವ ದೇಶದ ಅತ್ಯಂತ ಸ್ವಚ್ಛ ಟಾಪ್ ಟೆನ್ ರೈಲು ನಿಲ್ದಾಣಗಳು

1 ಜೋಧ್ ಪುರ್

2 ಜೈಪುರ್

3 ತಿರುಪತಿ

4 ವಿಜಯವಾಡ

5 ಆನಂದ್ ವಿಹಾರ್ ಟರ್ಮಿನಲ್

6 ಸಿಕಂದರಾಬಾದ್ ಜಂಕ್ಷನ್

7 ಬಾಂದ್ರಾ

8 ಹೈದರಾಬಾದ್

9 ಭುವನೇಶ್ವರ್

10 ವಿಶಾಖಪಟ್ಟಣ

A ಕ್ಯಾಟಗರಿಯ ಅತ್ಯಂತ ಸ್ವಚ್ಛ ರೈಲು ನಿಲ್ದಾಣಗಳ ಪಟ್ಟಿ

A ಕ್ಯಾಟಗರಿಯ ಅತ್ಯಂತ ಸ್ವಚ್ಛ ರೈಲು ನಿಲ್ದಾಣಗಳ ಪಟ್ಟಿ

1 ಮಾರ್ ವಾರ್

2 ಫುಲೇರ

3 ವಾರಂಗಲ್

4 ಉದಯ್ ಪುರ್

5 ಜೈಸಲ್ಮೇರ್

6 ನಿಜಾಮ್ ಬಾದ್

7 ಬರ್ಮರ್

8 ಮಚಿರ್ಯಾಲ್

9 ಮೈಸೂರು

10 ಭಿಲ್ವಾರ

English summary
India's top 10 dirtiest and cleanest railway stations list according to Quality Council Of India (QCI). Uttar Pradesh's railway stations are more in top 10 dirty railway stations list. South Indian state United Andhra Pradesh railway stations are more in number of cleanest title.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X