• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಳ್ಳೆ ಸುದ್ದಿ; ವಿಶ್ವದಲ್ಲೇ ಅತಿ ಕಡಿಮೆ ಸೋಂಕಿನ ಪ್ರಮಾಣ ದಾಖಲಿಸಿದ ಭಾರತ

|

ನವದೆಹಲಿ, ಜನವರಿ 15: ಭಾರತದಲ್ಲಿ ಕಳೆದ ಏಳು ದಿನಗಳಿಂದಲೂ ಅತಿ ಕಡಿಮೆ ಸಂಖ್ಯೆಯಲ್ಲಿ ಹೊಸ ಕೊರೊನಾ ಸೋಂಕಿನ ಪ್ರಕರಣಗಳು ಪತ್ತೆಯಾಗುತ್ತಿದ್ದು, ಒಂದು ದಶಲಕ್ಷಕ್ಕೆ 87 ಹೊಸ ಪ್ರಕರಣಗಳು ಕಂಡುಬರುತ್ತಿವೆ.

ಇದು ವಿಶ್ವದಲ್ಲೇ ದಾಖಲಾಗುತ್ತಿರುವ ಅತಿ ಕಡಿಮೆ ಪ್ರಮಾಣ ಎನ್ನಲಾಗಿದೆ. ಅಮೆರಿಕ, ಬ್ರಿಟನ್, ರಷ್ಯಾ, ಜರ್ಮನಿ, ಬ್ರೆಝಿಲ್, ಫ್ರಾನ್ಸ್, ಇಟಲಿಗೆ ಹೋಲಿಸಿದರೆ ಭಾರತ ಅತಿ ಕಡಿಮೆ ಪ್ರಕರಣ ದಾಖಲಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಮುಂದೆ ಓದಿ...

ಭಾರತದಲ್ಲಿ 15,590 ಕೊರೊನಾ ಸೋಂಕಿತರು ಪತ್ತೆ

 ಮರಣ ಪ್ರಮಾಣದಲ್ಲಿಯೂ ಇಳಿಕೆ

ಮರಣ ಪ್ರಮಾಣದಲ್ಲಿಯೂ ಇಳಿಕೆ

ಏಳು ದಿನಗಳಿಂದ ಹೊಸ ಕೊರೊನಾ ಪ್ರಕರಣಗಳಲ್ಲಿ ಇಳಿಕೆ ಮಾತ್ರವಲ್ಲ, ಒಂದು ದಶಲಕ್ಷಕ್ಕೆ ಒಂದು ಮರಣ ಸಂಭವಿಸಿದೆ ಎಂದು ತಿಳಿದುಬಂದಿದೆ. ಶೇ 1.44ರಷ್ಟು ಮರಣ ಪ್ರಮಾಣ ದಾಖಲಾಗಿದ್ದು, ಭಾರತದಲ್ಲಿ ದಾಖಲಾಗಿರುವ ಈ ಮರಣ ಪ್ರಮಾಣ ವಿಶ್ವದಲ್ಲೇ ಕಡಿಮೆ ಎಂದು ಆರೋಗ್ಯ ಸಚಿವಾಲಯ ಒತ್ತಿ ಹೇಳಿದೆ.

 ತಗ್ಗಿದ ದಿನನಿತ್ಯದ ಸೋಂಕಿನ ಪ್ರಮಾಣ

ತಗ್ಗಿದ ದಿನನಿತ್ಯದ ಸೋಂಕಿನ ಪ್ರಮಾಣ

ಕೊರೊನಾ ದಿನನಿತ್ಯದ ಪ್ರಕರಣಗಳು ತಗ್ಗುತ್ತಿದ್ದು, 2.13 ಲಕ್ಷಕ್ಕೆ ಇಳಿದಿದೆ. ದೇಶದ ಒಟ್ಟಾರೆ ಸೋಂಕಿತ ಪ್ರಕರಣಗಳಲ್ಲಿ ಶೇ 2.03 ಆಗಿದೆ. ಈಚೆಗೆ ಕೊರೊನಾ ದಿನನಿತ್ಯದ ಪ್ರಕರಣಗಳು ಇಪ್ಪತ್ತು ಸಾವಿರಕ್ಕಿಂತ ಕಡಿಮೆ ಇದ್ದು, ಕಳೆದ 24 ಗಂಟೆಗಳಲ್ಲಿ 15,590 ಹೊಸ ಪ್ರಕರಣಗಳು ದಾಖಲಾಗಿದೆ. 15,975 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ ಎಂದು ತಿಳಿದುಬಂದಿದೆ.

 ಹತ್ತು ರಾಜ್ಯಗಳಲ್ಲಿ ಹೆಚ್ಚಿದ ಚೇತರಿಕೆ ಪ್ರಮಾಣ

ಹತ್ತು ರಾಜ್ಯಗಳಲ್ಲಿ ಹೆಚ್ಚಿದ ಚೇತರಿಕೆ ಪ್ರಮಾಣ

ಚೇತರಿಕೆ ಪ್ರಮಾಣ ಹಾಗೂ ಸಕ್ರಿಯ ಪ್ರಕರಣಗಳ ನಡುವಿನ ಅಂತರವೂ ಹೆಚ್ಚುತ್ತಿದ್ದು, ಹತ್ತು ರಾಜ್ಯಗಳಲ್ಲಿ 81.15% ಚೇತರಿಕೆ ಪ್ರಕರಣಗಳು ದಾಖಲಾಗಿರುವುದಾಗಿ ತಿಳಿಸಿದೆ. ಕೇರಳವು ದಿನನಿತ್ಯದ ಪ್ರಕರಣಗಳಲ್ಲಿ ಗರಿಷ್ಠ ಚೇತರಿಕೆ ಪ್ರಮಾಣ ದಾಖಲಿಸಿದ್ದು, ಮಹಾರಾಷ್ಟ್ರ, ಛತ್ತೀಸ್ ಗಡ ನಂತರದ ಸ್ಥಾನದಲ್ಲಿವೆ. ದೇಶದ ಏಳು ರಾಜ್ಯಗಳಿಂದ 77.56% ಹೊಸ ಪ್ರಕರಣಗಳು ದಾಖಲಾಗುತ್ತಿದ್ದು, ಕೇರಳ, ಮಹಾರಾಷ್ಟ್ರ ಅತಿ ಹೆಚ್ಚು ಹೊಸ ಸೋಂಕಿನ ಪ್ರಕರಣಗಳು ಪತ್ತೆಯಾಆಗಿವೆ.

 ಭಾರತದ ಪ್ರಸ್ತುತ ಪ್ರಕರಣ

ಭಾರತದ ಪ್ರಸ್ತುತ ಪ್ರಕರಣ

ಕಳೆದ 24 ಗಂಟೆಗಳಲ್ಲಿ 15,590 ಹೊಸ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,05,27,683ಕ್ಕೆ ಏರಿಕೆಯಾಗಿದೆ. ಇನ್ನು ಒಂದೇ ದಿನ 191 ಮಂದಿ ಸಾವನ್ನಪ್ಪುವುದರೊಂದಿಗೆ ಒಟ್ಟು ಸಾವಿನ ಸಂಖ್ಯೆ 1,51,918ಕ್ಕೆ ತಲುಪಿದೆ.

English summary
India's new coronavirus cases per million population in last 7 days among lowest in the world,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X