ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಬಹು ತರಂಗಾಂತರ ಉಪಗ್ರಹ 'AstroSat'ನಿಂದ ಅಪರೂಪದ ಆವಿಷ್ಕಾರ

|
Google Oneindia Kannada News

ನವದೆಹಲಿ,ಆಗಸ್ಟ್ 25: ಭಾರತದ ಬಹುತರಂಗಾಂತರ ಉಪಗ್ರಹ ಆಸ್ಟ್ರೋಸ್ಯಾಟ್ 'AstroSat' ಅಪರೂಪದ ಆವಿಷ್ಕಾರವನ್ನು ಮಾಡಿದೆ.

ಇದು ಭೂಮಿಯಿಂದ 9.3 ಶತಕೋಟಿ ದೂರದಲ್ಲಿರುವ ನಕ್ಷತ್ರಪುಂಜದಿಂದ ನೇರಳಾತೀತ ಬೆಳಕನ್ನು ಪತ್ತೆ ಮಾಡಿದೆ.

ಐಯುಸಿಎಎ ಸಹಾಯಕ ಪ್ರಾಧ್ಯಾಪಕ ಡಾ.ಕನಕ್ ಸಹಾ ಮಾತನಾಡಿ, ಬೆಳಕು ಒಂದು ವರ್ಷದಲ್ಲಿ ಕ್ರಮಿಸುವ ದೂರವನ್ನು ಪ್ರಕಾಶ್ ವರ್ಷ ಎಂದು ಕರೆಯಲಾಗುತ್ತದೆ.

ಇಸ್ರೋದಿಂದ ಮಾರ್ಚ್ 5ರಂದು ಜಿಐಸ್ಯಾಟ್-1 ಉಪಗ್ರಹ ಉಡಾವಣೆಇಸ್ರೋದಿಂದ ಮಾರ್ಚ್ 5ರಂದು ಜಿಐಸ್ಯಾಟ್-1 ಉಪಗ್ರಹ ಉಡಾವಣೆ

ಇದು ಸುಮಾರು 95 ಟ್ರಿಲಿಯನ್ ಕಿಲೋಮೀಟರ್‌ಗೆ ಸಮಾನವಾಗಿರುತ್ತದೆ ಎಂದಿದ್ದಾರೆ. ತೀವ್ರವಾದ ನೇರಳಾತೀತ ಕಿರಣಗಳನ್ನು ಹುಡುಕುವ ಜಾಗತಿಕ ತಂಡದ ನೇತೃತ್ವ ಡಾ. ಕನಕ್ ಸಹಾ ವಹಿಸಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ. ಅವರ ತಂಡ ನಡೆಸಿರುವ ಈ ಸಂಶೋಧನೆಯನ್ನು ಆಗಸ್ಟ್ 24 ರ 'ನೇಚರ್ ಆಸ್ಟ್ರೋನಮಿ' ಎಂಬ ನಿಯತಕಾಲಿಕದಲ್ಲಿ ಪ್ರಕಟಿಸಲಾಗಿದೆ.

ಈ ತಂಡದಲ್ಲಿ ಯಾವ್ಯಾವ ದೇಶಗಳಿವೆ?

ಈ ತಂಡದಲ್ಲಿ ಯಾವ್ಯಾವ ದೇಶಗಳಿವೆ?

ಈ ತಂಡದಲ್ಲಿ ಭಾರತ, ಫ್ರಾನ್ಸ್,ಸ್ವಿಡ್ಜರ್‌ಲೆಂಡ್, ಅಮೆರಿಕ, ಜಪಾನ್ ಮತ್ತು ನೆದರ್‌ಲೆಂಡ್ ವಿಜ್ಞಾನಿಗಳು ಶಾಮೀಲಾಗಿದ್ದಾರೆ. ಈ ನೇರಳಾತೀತ ಕಿರಣಗಳು 2016 ರ ಅಕ್ಟೋಬರ್ ತಿಂಗಳಲ್ಲಿ ಸತತ 28 ದಿನಗಳವರೆಗೆ ಗೋಚರಿಸಿದ್ದವು. ಆದರೆ ಅವುಗಳನ್ನು ವಿಶ್ಲೇಷಿಸಲು ವಿಜ್ಞಾನಿಗಳಿಗೆ ಎರಡು ವರ್ಷಗಳಿಗಿಂತ ಹೆಚ್ಚು ಸಮಯ ಕಾಲಾವಕಾಶ ಬೇಕಾಯಿತು.

ಬಾಹ್ಯಾಕಾಶದ ಕತ್ತಲೆಯ ಆಳದಲ್ಲಿ ಬೆಳಕಿನ ಕಿರಣಗಳು

ಬಾಹ್ಯಾಕಾಶದ ಕತ್ತಲೆಯ ಆಳದಲ್ಲಿ ಬೆಳಕಿನ ಕಿರಣಗಳು

ಈ ಕುರಿತು ಹೇಳಿಕೆ ನೀಡಿರುವ IUCAA ನಿರ್ದೇಶಕ ಡಾ. ಸೋಮಕ್ ರಾಯ್ ಚೌಧರಿ, ದೂರದ ಬಾಹ್ಯಾಕಾಶದ ಕತ್ತಲೆಯ ಆಳದಲ್ಲಿ ಇಂದಿಗೂ ಕೂಡ ಬೆಳಕಿನ ಕಿರಣಗಳು ತೆಲಾಡುತ್ತಿವೆ. ಅವುಗಳ ಹುಡುಕಾಟಕ್ಕೆ ನಮಗೆ ಕಾಲಾವಕಾಶ ಬೇಕು. ಆದರೆ, ಈ ಎಲ್ಲ ಮಾಹಿತಿಗಳ ಆಧಾರದ ಮೇಲೆ ಭೊಮಿ ಹಾಗೂ ಬಾಹ್ಯಾಕಾಶದ ಉಗಮದ ಆರಂಭ, ಅವುಗಳ ವಯಸ್ಸು ಹಾಗೂ ಅವುಗಳ ಸಂಭವನೀಯ ಅಂತ್ಯದ ದಿನಾಂಕಗಳನ್ನು ಪತ್ತೆಹಚ್ಚಬಹುದು ಎಂದು ಹೇಳಿದ್ದಾರೆ.

ಭೂಮಿ ಗಾತ್ರದ ಮತ್ತೊಂದು ಜಗತ್ತು ಕಂಡುಹಿಡಿದ ನಾಸಾಭೂಮಿ ಗಾತ್ರದ ಮತ್ತೊಂದು ಜಗತ್ತು ಕಂಡುಹಿಡಿದ ನಾಸಾ

ಹೊಸ ನಕ್ಷತ್ರಗಳ ಸೃಷ್ಟಿ

ಹೊಸ ನಕ್ಷತ್ರಗಳ ಸೃಷ್ಟಿ

ಕೆಲವು ಸಣ್ಣ-ಪುಟ್ಟ ಗ್ಯಾಲಕ್ಸಿಗಳು ಕ್ಷೀರಪಥದ ನಕ್ಷತ್ರಪುಂಜಕ್ಕಿಂತ 10-100 ಪಟ್ಟು ವೇಗದಲ್ಲಿ ಹೊಸ ನಕ್ಷತ್ರಗಳನ್ನು ಸೃಷ್ಟಿಸುತ್ತವೆ ಎಂದು ವಿಜ್ಞಾನಿಗಳು ಊಹಿಸಿದ್ದಾರೆ. ಬ್ರಹ್ಮಾಂಡದ ಶತಕೋಟಿ ಗ್ಯಾಲಕ್ಸಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚಿಕ್ಕ-ಚಿಕ್ಕ ಗೆಲಕ್ಸಿಗಳಿವೆ ಎಂದು ಎಂದು ಅವರು ವಿವರಿಸಿದ್ದಾರೆ, ಇದರ ದ್ರವ್ಯರಾಶಿ ಕ್ಷೀರಪಥದ ಗೆಲಕ್ಸಿಗಳಿಗಿಂತ 100 ಪಟ್ಟು ಕಡಿಮೆಯಾಗಿದೆ ಎಂದು ವಿಜ್ಞಾನಿಗಳು ನಂಬಿದ್ದಾರೆ.

10 ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ-ಸಿ 48 ಉಡಾವಣೆ ಯಶಸ್ವಿ10 ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ-ಸಿ 48 ಉಡಾವಣೆ ಯಶಸ್ವಿ

ಗ್ಯಾಲೆಕ್ಸಿಗಳ ವಿಚಿತ್ರ ವರ್ತನೆ

ಗ್ಯಾಲೆಕ್ಸಿಗಳ ವಿಚಿತ್ರ ವರ್ತನೆ

ಎರಡು ಭಾರತೀಯ ದೂರದರ್ಶಕಗಳ ಮೂಲಕ ನಡೆಸಲಾಗಿರುವ ಈ ಅಧ್ಯಯನದಲ್ಲಿ ವಿಜ್ಞಾನಿಗಳು ಈ ಗ್ಯಾಲಕ್ಸಿಗಳ ವಿಚಿತ್ರ ವರ್ತನೆಯು ಅವುಗಳಲ್ಲಿ ಅಸ್ತವ್ಯಸ್ತಗೊಂಡ ಹೈಡ್ರೋಜನ್ ವಿತರಣೆ ಮತ್ತು ಗ್ಯಾಲಕ್ಸಿಗಳ ನಡುವಿನ ಘರ್ಷಣೆಯಿಂದಾಗಿ ಕಂಡುಬಂದಿದೆ ಎಂಬುದನ್ನು ಪತ್ತೆಹಚ್ಚಿದ್ದಾರೆ. ಯಾವುದೇ ನಕ್ಷತ್ರದ ರಚನೆಗೆ ಹೈಡ್ರೋಜನ್ ಅತ್ಯಗತ್ಯ ಅಂಶವಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಗ್ಯಾಲಕ್ಸಿಗಳಿಗೆ ಹೆಚ್ಚಿನ ಸಂಖ್ಯೆಯ ನಕ್ಷತ್ರಗಳನ್ನು ರೂಪಿಸಲು ಹೆಚ್ಚಿನ ಸಾಂಧ್ರತೆಯ ಹೈಡ್ರೋಜನ್ ಆವಶ್ಯಕವಾಗಿರುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

English summary
wavelength satellite, has detected an extreme ultraviolet (UV) light from a galaxy which is 9.3 billion light-years away from Earth, the Inter-University Centre for Astronomy and Astrophysics (IUCAA) said on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X