ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ವಾಯು ಸೇನೆಗೆ ಇನ್ನು 'ನಿರ್ಭಯ'

|
Google Oneindia Kannada News

ಒರಿಸ್ಸಾ ಅ. 17: ಒರಿಸ್ಸಾದ ಚಂಡಿಪುರದ ಕೇಂದ್ರದಿಂದ ನಿರ್ಭಯ್ ಕ್ಷಿಪಣಿ ಯಶಸ್ವಿ ಪರೀಕ್ಷಾರ್ಥ ಹಾರಾಟ ನಡೆಸಿದೆ. ಶುಕ್ರವಾರ ಬೆಳಗ್ಗೆ 10ಗಂಟೆ ಮೂರು ನಿಮಿಷಕ್ಕೆ ಸರಿಯಾಗಿ ಕ್ಷಿಪಣಿ ಹಾರಾಟಕ್ಕೆ ಚಾಲನೆ ನೀಡಲಾಯಿತು.

ಮೊಬೈಲ್‌ ಲಾಂಚ್ ವೊಂದರ ಮೂಲಕ ಹಾರಾಟಕ್ಕೆ ಚಾಲನೆ ನೀಡಲಾಯಿತು. ಕ್ಷಿಪಣಿ ನಿಗದಿತ ದೂರ ಕ್ರಮಿಸಿ ಹಿಂದಿರುಗಿತು. ಯಾವುದೇ ಸಮಸ್ಯೆ ಉಂಟಾಗಲಿಲ್ಲ ಎಂದು ಮೇಲ್ವಿಚಾರಣೆ ಹೊತ್ತ ಅಧಿಕಾರಿಯೊಬ್ಬರು ತಿಳಿಸಿದರು.[ಸೈನ್ಯಕ್ಕೆ ಮತ್ತಷ್ಟು ಶಕ್ತಿ ತುಂಬಲಿರುವ ಬೆಂಗಳೂರ ಕ್ಷಿಪಣಿ]

nirbhay

ಪರಮಾಣು ಸಾಮರ್ಥ್ಯದ ಕ್ಷಿಪಣಿ ಕ್ರಮಿಸಿದ ಅಧಿಕೃತ ದೂರ, ವೇಗ ಮುಂತಾದ ಮಾಹಿತಿಗಳು ರಾಡಾರ್ ನಿಂದ ಲಭ್ಯವಾಗಬೇಕಿದೆ. ಹುಡ್ ಹುಡ್ ಆರ್ಭಟ ಮುಗಿದಿದ್ದು ವಾತಾವರಣ ಸಹ ಕ್ಷಿಪಣಿ ಹಾರಾಟಕ್ಕೆ ಪೂರಕವಾಗಿತ್ತು ಎಂದು ಅವರು ತಿಳಿಸಿದ್ದಾರೆ.[ಚಿತ್ರಗಳಲ್ಲಿː ಕಣ್ಮನ ಸೆಳೆದ ಸೈನಿಕರ ತಾಲೀಮು]

ಬೆಂಗಳೂರಿನ ಸಿ.ವಿ.ರಾಮನ್ ನಗರದ ರಕ್ಷಣಾ ಇಲಾಖೆ ಘಟಕದಲ್ಲಿ ತಯಾರಾದ ನಿರ್ಭಯ್ ಯಶಸ್ವಿಯಾಗಿರುವುದು ಸೈನ್ಯಕ್ಕೆ ಮತ್ತಷ್ಟು ಬಲ ತುಂಬಿದೆ. ಉಳಿದ ಕ್ಷಿಪಣಿಗಳಿಗೆ ಹೋಲಿಸಿದರೆ ಇದು ಅತ್ಯಂತ ಹಗುರವಾಗಿದ್ದು ಅಷ್ಟೇ ಶಕ್ತಿಶಾಲಿಯಾಗಿದೆ ಎಂದು ಪರೀಕ್ಷಾರ್ಥ ಹಾರಾಟದ ನಂತರ ಹೇಳಲಾಗಿದೆ. ಈ ಮೂಲಕ ರಕ್ಷಣಾ ಇಲಾಖೆಯ ಸಂಶೋಧನಾ ವಿಭಾಗ ಮೈಲಿಗಲ್ಲೊಂದನ್ನು ಸಾಧಿಸಿದೆ.

English summary
India's potent nuclear-capable cruise missile 'Nirbhay' was test fired today from the Integrated Missile Test Range in Chandipur, Odisha. Nirbhay, which means 'fearless', is a state-of-the-art missile developed by the Defence Research and Development Organisation (DRDO).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X