ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಸ್ಪುಟ್ನಿಕ್ ಲೈಟ್" ಲಸಿಕೆ ಪ್ರಯೋಗಕ್ಕೆ ಭಾರತದಲ್ಲಿ ಸಿಗಲಿಲ್ಲ ಗ್ರೀನ್ ಸಿಗ್ನಲ್

|
Google Oneindia Kannada News

ನವದೆಹಲಿ, ಜುಲೈ 01: ಹೈದರಾಬಾದ್ ಮೂಲದ ಡಾ. ರೆಡ್ಡೀಸ್ ಲ್ಯಾಬೊರೇಟರಿಗೆ "ಸ್ಪುಟ್ನಿಕ್ ಲೈಟ್‌" ಲಸಿಕೆಯ ಮೂರನೇ ಹಂತದ ಪ್ರಯೋಗ ನಡೆಸಲು ಭಾರತದ ಔಷಧ ನಿಯಂತ್ರಕ ಸಂಸ್ಥೆ ಅನುಮತಿ ನಿರಾಕರಿಸಿದೆ.

ಔಷಧ ನಿಯಂತ್ರಕ ಸಂಸ್ಥೆಯ ತಜ್ಞರ ಸಮಿತಿ, ಈ ಲಸಿಕೆಯ ಪ್ರಯೋಗ ನಡೆಸಲು ಯಾವುದೇ ವೈಜ್ಞಾನಿಕ ತರ್ಕ ಕಂಡುಬಂದಿಲ್ಲ ಎಂದು ಉಲ್ಲೇಖಿಸಿದೆ. ಭಾರತದಲ್ಲಿ ಪ್ರಯೋಗ ನಡೆಸಲು ಡಾ. ರೆಡ್ಡೀಸ್ ಅರ್ಜಿಯನ್ನು ಪರಿಗಣಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ದೆಹಲಿಯಲ್ಲಿ ಸಾರ್ವಜನಿಕರಿಗೆ ಸ್ಪುಟ್ನಿಕ್ ವಿ ಲಸಿಕೆ ಆರಂಭದೆಹಲಿಯಲ್ಲಿ ಸಾರ್ವಜನಿಕರಿಗೆ ಸ್ಪುಟ್ನಿಕ್ ವಿ ಲಸಿಕೆ ಆರಂಭ

ಸ್ಪುಟ್ನಿಕ್ ಲೈಟ್ ಏಕ ಡೋಸ್ ಲಸಿಕೆಯಾಗಿದ್ದು, ಇದರ ಪ್ರಯೋಗಕ್ಕೆ ಡಾ. ರೆಡ್ಡೀಸ್ ಲ್ಯಾಬೊರೇಟರಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಬುಧವಾರ ಚರ್ಚೆಗೆ ತೆಗೆದುಕೊಳ್ಳಲಾಗಿತ್ತು.

 Indias Drug Regulator Denied Permission To Conduct Phase 3 Trials On Sputnik Light In India

ಸ್ಪುಟ್ನಿಕ್ ವಿ ನಂತರ ರಷ್ಯಾ, ಸ್ಪುಟ್ನಿಕ್ ಲೈಟ್ ಎಂಬ ಏಕ ಡೋಸ್ ಲಸಿಕೆಯನ್ನು ಮೇ ತಿಂಗಳಿನಲ್ಲಿ ಪರಿಚಯಿಸಿತ್ತು. ರಷ್ಯಾದ ಆರೋಗ್ಯ ಸಚಿವಾಲಯ, ಎಪಿಡೆಮಿಯಾಲಜಿ, ಮೈಕ್ರೋಬಯಾಲಜಿಯ ಗಮಾಲಯ ರಾಷ್ಟ್ರೀಯ ಸಂಶೋಧನಾ ಕೇಂದ್ರ ಹಾಗೂ ಆರ್‌ಡಿಐಎಫ್ ಸೇರಿ ಸ್ಪುಟ್ನಿಕ್ ಲೈಟ್ ಲಸಿಕೆ ಅಭಿವೃದ್ಧಿಪಡಿಸಿದ್ದವು.

ಸ್ಪುಟ್ನಿಕ್ ವಿ ಲಸಿಕೆ, ಎರಡು ಡೋಸ್‌ಗಳನ್ನು ರಿಕಾಂಬಿನಂಟ್ ಅಡೆನೊವೈರಸ್ ಅಥವಾ Ad26 ಮತ್ತು ಅಡೆನೊವೈರಸ್ 5 ಅಥವಾ Ad5 ಅನ್ನು ಒಳಗೊಂಡಿದೆ. ಮೊದಲ ಡೋಸ್ Ad26 ಮುಖ್ಯ ಲಸಿಕೆಯಾಗಿದ್ದು, Ad5 ಬೂಸ್ಟರ್ ಡೋಸ್ ಆಗಿದೆ. ಈ ಸ್ಪುಟ್ನಿಕ್ ಲೈಟ್, ಸ್ಪುಟ್ನಿಕ್ ವಿ ಲಸಿಕೆಯ ಮೊದಲ ಡೋಸ್‌ನ ಪರಿಷ್ಕೃತ ಲಸಿಕೆ ಆಗಿದೆ. ಇದನ್ನು 21 ದಿನಗಳ ಅಂತರದಲ್ಲಿ ನೀಡಲಾಗುತ್ತದೆ.

ಸುಮಾರು ಆರು ತಿಂಗಳುಗಳ ಹಿಂದೆ ಸ್ಪುಟ್ನಿಕ್ V ಲಸಿಕೆ ಹಾಕಿಸಿಕೊಂಡವರಿಗೆ ಸ್ಪುಟ್ನಿಕ್ ಲೈಟ್ ಲಸಿಕೆ ಬೂಸ್ಟರ್ ರೀತಿಯಲ್ಲಿ ಕೆಲಸ ಮಾಡಲಿದೆ ಎಂದು ಕಂಪನಿ ತಿಳಿಸಿದೆ.

ಭಾರತದ ಡಾ. ರೆಡ್ಡೀಸ್ ಲ್ಯಾಬೊರೇಟರಿ ಈ ಲಸಿಕೆಯನ್ನು ಪರೀಕ್ಷಿಸಲು ಮುಂದಾಗಿ, ಅನುಮತಿ ಕೋರಿ ಅರ್ಜಿ ಸಲ್ಲಿಸಿತ್ತು. ಸ್ಪುಟ್ನಿಕ್ ವಿ ಲಸಿಕೆಯ ಹಿಂದಿನ ಪ್ರಯೋಗಗಳಲ್ಲಿ, ಈ ಎರಡು ಡೋಸ್‌ಗಳ ಫಲಿತಾಂಶ ಕಂಡುಕೊಳ್ಳಲಾಗಿದೆ. ಹೀಗಾಗಿ ಮತ್ತೆ ಪ್ರಯೋಗ ನಡೆಸುವ ಯಾವುದೇ ವೈಜ್ಞಾನಿಕ ತರ್ಕ ಕಂಡುಬಂದಿಲ್ಲ ಎಂದು ತಜ್ಞರ ಸಮಿತಿ ಹೇಳಿದೆ.

ಭಾರತದಲ್ಲಿ ಮುಖ್ಯವಾಗಿ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳನ್ನು ನೀಡಲಾಗುತ್ತಿದೆ. ಮೇ ತಿಂಗಳಿನಲ್ಲಿ ಡಾ. ರೆಡ್ಡೀಸ್ ಲ್ಯಾಬೊರೇಟರಿ ರಷ್ಯಾ ಮೂಲದ ಸ್ಪುಟ್ನಿಕ್ ವಿ ಲಸಿಕೆಯನ್ನು ಬಿಡುಗಡೆಗೊಳಿಸಿದ್ದು, ಭಾರತದಲ್ಲಿ ಅನುಮೋದನೆ ಪಡೆದ ಮೂರನೇ ಲಸಿಕೆ ಇದಾಗಿದೆ.

English summary
India's drug regulator denied permission to Hyderabad-based Dr Reddy's to conduct phase-3 trials on the Russian vaccine Sputnik Light in India
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X