ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಪ್ಟೆಂಬರ್ ಮಧ್ಯದಲ್ಲಿ ತಗ್ಗಿದೆ ಕೊರೊನಾ ಸೋಂಕಿನ 'ಆರ್' ಮೌಲ್ಯ

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 21: ಕೊರೊನಾ ಸೋಂಕಿನ ಹರಡುವಿಕೆ ವೇಗವನ್ನು ಸಾಂಕೇತಿಸುವ 'ಆರ್' ಮೌಲ್ಯ (R value- ಸೋಂಕಿನ ಪುನರುತ್ಪತ್ತಿ ದರ) ಸೆಪ್ಟೆಂಬರ್ ಮಧ್ಯದ ವೇಳೆಗೆ ತಗ್ಗಿರುವುದಾಗಿ ಸಂಶೋಧಕರು ತಿಳಿಸಿದ್ದಾರೆ.

ಆಗಸ್ಟ್‌ ಅಂತ್ಯದ ವೇಳೆಗೆ 'ಆರ್' ಮೌಲ್ಯ 1ರ ಸಂಖ್ಯೆಯಲ್ಲಿದ್ದು, ಆ ಸಂಖ್ಯೆಯು ಸೆಪ್ಟೆಂಬರ್ ಮಧ್ಯದ ವೇಳೆಗೆ 0.92ಗೆ ಇಳಿದಿದೆ ಎಂದು ಚೆನ್ನೈನ ಇನ್‌ಸ್ಟಿಟ್ಯೂಟ್ ಆಫ್ ಮ್ಯಾಥಮೆಟಿಕಲ್ ಸೈನ್ಸಸ್ ಸಂಶೋಧಕರು ತಿಳಿಸಿದ್ದಾರೆ. ಆದರೆ ಮುಂಬೈ, ಕೋಲ್ಕತ್ತಾ, ಚೆನ್ನೈ, ಬೆಂಗಳೂರಿನಲ್ಲಿ ಈ ಸಂಖ್ಯೆ 1ಕ್ಕೆ ಇಳಿದಿದೆ. 'ಆರ್' ಮೌಲ್ಯ ದೆಹಲಿ ಹಾಗೂ ಪುಣೆಯಲ್ಲಿ 1ಕ್ಕಿಂತ ತಗ್ಗಿದೆ.

ಅತಿ ಹೆಚ್ಚು ಕೊರೊನಾ ಪ್ರಕರಣಗಳನ್ನು ದಾಖಲಿಸುತ್ತಿದ್ದ ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಕೂಡ 1ಕ್ಕಿಂತ ಕಡಿಮೆ ಆರ್ ಮೌಲ್ಯವಿದೆ ಎಂದು ತಿಳಿಸಿದ್ದಾರೆ. ಆಗಸ್ಟ್‌ ಕೊನೆಗೆ ಆರ್ ಮೌಲ್ಯ 1.17 ಆಗಿದ್ದು, ಸೆಪ್ಟೆಂಬರ್ 4-7 ವೇಳೆಗೆ ಇದರ ಸಂಖ್ಯೆ 1.11 ಆಗಿದೆ ಎಂದು ಮಾಹಿತಿ ನೀಡಿದ್ದಾರೆ.

Indias Covid R Value Drops Below 1 In September

ಇದೇ ರೀತಿ ಇಳಿಕೆಯಾಗುತ್ತಾ ಸಾಗಿದರೆ ಮೂರನೇ ಅಲೆ ಸಾಧ್ಯತೆ ತಗ್ಗಲಿದೆ ಎಂದಿದ್ದಾರೆ. ಮುಂಬೈನಲ್ಲಿ 1.09, ಚೆನ್ನೈನಲ್ಲಿ 1.11, ಕೋಲ್ಕತ್ತಾದಲ್ಲಿ 1.04 ಹಾಗೂ ಬೆಂಗಳೂರಿನಲ್ಲಿ 1.06 ಆರ್ ಮೌಲ್ಯವಿದೆ ಎಂದು ವರದಿ ತಿಳಿಸಿದೆ.

ಮೇ- ಏಪ್ರಿಲ್ ತಿಂಗಳಿನಲ್ಲಿ ದೇಶದಲ್ಲಿ ಕೊರೊನಾ ಎರಡನೇ ಅಲೆ ಕಾಣಿಸಿಕೊಂಡಿದ್ದು, ಆಸ್ಪತ್ರೆಗಳಿಗೆ ಹಾಸಿಗೆ ಲಭ್ಯವಿಲ್ಲದೇ ಪರದಾಡುವ ಪರಿಸ್ಥಿತಿ ಎದುರಾಗಿತ್ತು. ಆನಂತರ ಆರ್ ಮೌಲ್ಯ ಕುಸಿಯಲು ಆರಂಭಿಸಿತ್ತು.

ಆಗಸ್ಟ್‌ 14-17ರವರೆಗೆ ಸೋಂಕಿನ ಪುನರುತ್ಪತ್ತಿ ದರ 0.89 ಇದ್ದದ್ದು ಕೊನೆಯ ವಾರದಲ್ಲಿ ಏಕಾಏಕಿ 1.17ಗೆ ಏರಿಕೆಯಾಗಿದೆ.

Indias Covid R Value Drops Below 1 In September

ಸೆಪ್ಟೆಂಬರ್ 4-7ರವರೆಗೆ ಈ ಆರ್ ಮೌಲ್ಯ 0.94, ಸೆಪ್ಟೆಂಬರ್ 11-15ರವರೆಗೆ 0.86 ಹಾಗೂ ಸೆಪ್ಟೆಂಬರ್ 11-19ರವರೆಗೆ 0.92 ಇರುವುದು ದಾಖಲಾಗಿದೆ.

ಏನಿದು 'ಆರ್' ದರ?
ದೇಶದಲ್ಲಿ ಕೊರೊನಾ ಸೋಂಕು ಯಾವ ವೇಗದಲ್ಲಿ ಹರಡುತ್ತಿದೆ ಎಂಬುದನ್ನು ಈ "ಪುನರುತ್ಪತ್ತಿ ದರ" ಸಾಂಕೇತಿಸುತ್ತದೆ. ಒಬ್ಬ ವ್ಯಕ್ತಿಯಿಂದ ಎಷ್ಟು ಮಂದಿಗೆ ಸೋಂಕು ಹರಡಬಹುದು ಎಂಬ ಸರಾಸರಿ ಅಂದಾಜನ್ನು ಇದು ಹೇಳುತ್ತದೆ. ಆರ್ ಮಟ್ಟ ತಗ್ಗುವುದು ಸೋಂಕಿನ ಹರಡುವಿಕೆಯೂ ಕ್ಷೀಣಿಸುತ್ತಿದೆ ಎಂಬುದನ್ನು ಸೂಚಿಸುತ್ತದೆ. ಆರ್ ದರ ಒಂದಕ್ಕಿಂತ ಹೆಚ್ಚಿದ್ದರೆ, ಸೋಂಕಿತರ ಸಂಖ್ಯೆ ಪ್ರತಿ ಸುತ್ತಿನಲ್ಲೂ ಹೆಚ್ಚುತ್ತಿದೆ ಮತ್ತು ತಾಂತ್ರಿಕವಾಗಿ, ಇದನ್ನು ಸಾಂಕ್ರಾಮಿತ ಹಂತ ಎಂದು ಕರೆಯಲಾಗುತ್ತದೆ. ಎಷ್ಟು ಪರಿಣಾಮಕಾರಿಯಾಗಿ ಸೋಂಕು ಹರಡುತ್ತಿದೆ ಎಂಬುದನ್ನು ಇದು ಸೂಚಿಸುತ್ತದೆ.

ಈಚೆಗೆ ಚೆನ್ನೈನ ಇದೇ ಸಂಶೋಧನಾ ಸಂಸ್ಥೆ, ಭಾರತದಲ್ಲಿ ಸೋಂಕಿನ "R" ದರ ಕೊರೊನಾ ಮೂರನೇ ಅಲೆ ಕುರಿತು ಎಚ್ಚರಿಕೆ ಗಂಟೆ ಬಾರಿಸುತ್ತಿರುವುದಾಗಿ ತಿಳಿಸಿತ್ತು. ಈ ಆರ್‌ ದರ 1ಕ್ಕಿಂತ ಕಡಿಮೆಯಿದ್ದರೆ ಅಪಾಯವಿಲ್ಲ ಎಂದು ಪರಿಗಣಿಸಬಹುದು. ಆದರೆ ಇದನ್ನು ಮೀರಿದರೆ ಪ್ರಕರಣಗಳ ಸಂಖ್ಯೆಯೂ ಏಕಾಏಕಿ ಏರಿಕೆಯಾಗುವುದು ಖಚಿತ. ರಾಜ್ಯದ ಈಶಾನ್ಯ ಭಾಗದಲ್ಲಿ ಅತಿ ಹೆಚ್ಚಿನ ಪ್ರಕರಣಗಳು ದಾಖಲಾಗುವ ಸಾಧ್ಯತೆಯಿದೆ ಎಂದು ಅಂದಾಜು ಮಾಡಿತ್ತು.

English summary
R-value, which reflects how rapidly coronavirus pandemic is spreading, dropped to 0.92 by mid-September after spiralling over 1 by August-end, according to researchers,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X