ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಕ್ಷಣಗಳಿದ್ದರೂ ಕೊರೊನಾ ಪರೀಕ್ಷೆ ಮಾಡಿಸಲು ಜನರು ಹಿಂಜರಿಯುತ್ತಿರುವುದೇಕೆ?

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 26: ಕೊರೊನಾ ಹೆಸರು ಕೇಳಿದಾಕ್ಷವೇ ಜನರು ಭಯ ಪಡುತ್ತಾರೆ. ಶೀತ, ಕೆಮ್ಮು, ಜ್ವರ ಏನೇ ಇರಲಿ ಮನೆಯಲ್ಲಿಯೇ ಏನೋ ಔಷಧಿ ಮಾಡಿಕೊಂಡು ಗುಣಮಾಡಿಕೊಳ್ಳುತ್ತಿದ್ದಾರೆ.

ಆದರೆ ಸಾಮಾನ್ಯ ಜ್ವರ,ನೆಗಡಿಯಾದರೆ ತೊಂದರೆಯಿಲ್ಲ ನಿಜವಾಗಿಯೂ ಅವರಿಗೆ ಕೊರೊನಾ ಸೋಂಕು ತಗುಲಿದ್ದರೆ ಅವರ ಜೀವಕ್ಕೆ ಅಪಾಯವಾಗು ಸಾಧ್ಯತೆ ಹೆಚ್ಚಿದೆ.

ಕೊರೊನಾ ವೈರಸ್ ವಿರುದ್ಧ ಹೋರಾಡುವ ಪರಿಣಾಮಕಾರಿ ಪ್ರತಿಕಾಯ ಪತ್ತೆ ಕೊರೊನಾ ವೈರಸ್ ವಿರುದ್ಧ ಹೋರಾಡುವ ಪರಿಣಾಮಕಾರಿ ಪ್ರತಿಕಾಯ ಪತ್ತೆ

ಕೊರೊನಾ ಪಾಸಿಟಿವ್ ಎನ್ನುವ ಶಬ್ದ ಕೇಳಿದರೆ ಸಾಕು ಅಕ್ಕಪಕ್ಕದ ಮನೆಯವರೆಲ್ಲ ಇವರನ್ನು ನೋಡುವ ದೃಷ್ಟಕೋನವೇ ಬದಲಾಗುತ್ತದೆ. ಅಸ್ಪೃಶ್ಯರಂತೆ ನಡೆದುಕೊಳ್ಳುತ್ತಾರೆ.

ಇದೆಲ್ಲವನ್ನು ನೋಡಿ ಜನರು ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಲು ಭಯಪಡುತ್ತಿದ್ದಾರೆ.ಹಾಗಾದರೆ ಜನರ ಮನಸ್ಸಿನಲ್ಲಿ ಓಡುತ್ತಿರುವುದೇನು, ಏಕೆ ಹೀಗೆ ನಡೆದುಕೊಳ್ಳುತ್ತಿರಬಹುದು ಎಂಬುದಕ್ಕೆ ಉತ್ತರ ಇಲ್ಲಿದೆ.

ಸಾಂಕ್ರಾಮಿಕ ರೋಗದ ಸಂಪರ್ಕ ಪತ್ತೆ ಅಗತ್ಯ

ಸಾಂಕ್ರಾಮಿಕ ರೋಗದ ಸಂಪರ್ಕ ಪತ್ತೆ ಅಗತ್ಯ

ಕೊವಿಡ್ 19ನಂತರ ಸಾಂಕ್ರಾಮಿಕ ರೋಗಕ್ಕೆ, ಸಂಪರ್ಕವನ್ನು ಪತ್ತೆಹಚ್ಚುವುದು ಅತ್ಯಗತ್ಯ. ರೋಗದ ಲಕ್ಷಣಗಳನ್ನು ಮರೆಮಾಚುವುದು, ಅಥವಾ ಪರೀಕ್ಷೆಯನ್ನು ನಿರಾಕರಿಸುವುದು, ಸಂಪರ್ಕ ಪತ್ತೆ ಹಚ್ಚುವಿಕೆಯನ್ನು ತಡೆಯುವುದು. ನಿಮ್ಮ ಮನಸ್ಸಿನ ಮೇಲೆ ಮತ್ತಷ್ಟು ಪರಿಣಾಮವನ್ನುಂಟುಮಾಡಬಹುದು. ಕೊವಿಡ್ 19 ಬೇರೆ ಸೋಂಕುಗಳಿಗಿಂತ ಚೇತರಿಸಿಕೊಳ್ಳಲು ಬೆಂಬಲ ಬೇಕಾಗುತ್ತದೆ.

ಪರೀಕ್ಷೆ ಮಾಡಿಸುವುದರಿಂದ ಬೇಗ ಗುಣಮುಖರಾಗಬಹುದು

ಪರೀಕ್ಷೆ ಮಾಡಿಸುವುದರಿಂದ ಬೇಗ ಗುಣಮುಖರಾಗಬಹುದು

ಕೊವಿಡ್ 19 ಪರೀಕ್ಷೆ ಮಾಡಿಸುವುದರಿಂದ ಅಥವಾ ನಿಮಗೆ ಪಾಸಿಟಿವ್ ಬಂದರೂ ಕೂಡ ಬೇಗ ಗುಣಮುಖರಾಗಬಹುದು. ನಾನು ಹೆಚ್ಚು ಜಾಗ್ರತನಾಗಿರಲಿಲ್ಲವೇ, ಹೆಚ್ಚು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲವೇ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಕಾಡುವುದು ಸಹಜ, ಆದರೆ ನಿಮ್ಮ ಪ್ರತೀತಿ ಪಾತ್ರರನ್ನು ಅಪಾಯಕ್ಕೆ ಸಿಲುಕಿಸುವುದನ್ನು ಕಡಿಮೆ ಮಾಡುತ್ತದೆ. ಚೇತರಿಕೆ ವೇಗವನ್ನು ಕೂಡ ಹೆಚ್ಚಿಸುತ್ತದೆ.

ಕೊರೊನಾ ಒಂದು ಕಳಂ, ಅವಮಾನವೆಂಬ ಭಯ ಬೇಡ

ಕೊರೊನಾ ಒಂದು ಕಳಂ, ಅವಮಾನವೆಂಬ ಭಯ ಬೇಡ

ಕೊರೊನಾ ಕಳಂಕ, ಸೋಂಕು ತಗುಲಿದರೆ ಅನುಮಾನವೆಂಬ ಭಯ ನಿಮಗೆ ಬೇಡ, ಹೇಗೆ ಬೇಗ ಗುಣಮುಖರಾಗುವುದು ಎಂಬುದರ ಬಗ್ಗೆ ಯೋಚನೆ ಮಾಡಿ, ಇಷ್ಟು ವರ್ಷ ಬೇರೆ ಕಾಯಿಲೆಗಳು ನಿಮಗೆ ತಗುಲಿದ್ದರೆ ಆ ಸಂದರ್ಭದಲ್ಲಿಯೂ ಹೀಗೆ ನಡೆದುಕೊಳ್ಳುತ್ತಿದ್ದರಾ, ಹಾಗೆಯೇ ಇದೊಂದು ಸಾಮಾನ್ಯ ಕಾಯಿಲೆ ಅಂದುಕೊಂಡು ಚಿಕಿತ್ಸೆ ಪಡೆಯಿರಿ.

Recommended Video

ಇದೆ ಕಾರಣಕ್ಕೆ ವಿಶ್ವಸಂಸ್ಥೆಯಲ್ಲಿ ಇಮ್ರಾನ್ ಖಾನ್ ಗೆ ಮುಜುಗರ ಆಗಿದು | Oneindia Kannada
ಆರ್ಥಿಕತೆ ದೃಷ್ಟಿಯಿಂದಲೂ ನೋಡುತ್ತಾರೆ

ಆರ್ಥಿಕತೆ ದೃಷ್ಟಿಯಿಂದಲೂ ನೋಡುತ್ತಾರೆ

ಹೌದು ಕೇವಲ ರೋಗ ಮಾತ್ರವಲ್ಲ, ಜನರು ಹಣದ ಬಗ್ಗೆಯೂ ಚಿಂತೆ ಮಾಡುತ್ತಾರೆ, ನಾವು ಆರ್ಥಿಕವಾಗಿ ಅಷ್ಟು ಸಬಲರಾಗಿಲ್ಲ, ಒಂದೊಮ್ಮೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವಂತಾದರೆ ಲಕ್ಷಾಂತರ ಹಣ ಖರ್ಚಾಗುತ್ತದೆ ಎಂದು ಯೋಚನೆ ಮಾಡುವುದು ಕೂಡ ಸಹಜ, ಆದರೆ ಹಣವನ್ನು ಸಂಪಾದಿಸಬಹುದು, ನಿಮ್ಮ ಪ್ರಾಣ ನಿಮಗೆ ಮುಖ್ಯ ಎಂಬುದನ್ನು ಗಮನದಲ್ಲಿಡಬೇಕು.

English summary
As cases continue to surge, it has become increasingly common to hear of COVID-19 cases around us. However, there's still a certain stigma attached to the infection which makes people fear the consequence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X