ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎವರೆಸ್ಟ್ ಹತ್ತಿದ್ದ ಚಂದಾ, ಕಾಂಚನಜುಂಗಾದಲ್ಲಿ ನಾಪತ್ತೆ

By Mahesh
|
Google Oneindia Kannada News

ಡಾರ್ಜಲಿಂಗ್, ಮೇ.22: ವಿಶ್ವದ ಅತಿ ಎತ್ತರದ ಪರ್ವತ ಎವರೆಸ್ಟ್ ಆರೋಹಣ ಮಾಡಿದ್ದ ಪಶ್ಚಿಮ ಬಂಗಾಳ ಮೂಲದ ಚಂದಾ ಗಯೇನ್ ಅವರು ಕಾಂಚನಜುಂಗಾ ಪರ್ವತಾರೋಹಣ ವೇಳೆ ನಾಪತ್ತೆಯಾಗಿರುವ ಘಟನೆ ಸಂಭವಿಸಿದೆ.

ಮೌಂಟ್ ಎವರೆಸ್ಟ್ ಏರಿದ ಎರಡನೇ ಮಹಿಳೆ ಎಂಬ ಸಾಹಸಕ್ಕೆ ಪಾತ್ರವಾಗಿದ್ದ ಚಂದಾ ಅವರು ಕಾಂಚನಜುಂಗಾ ಪರ್ವತಾರೋಹಣ ವೇಳೆಯಲ್ಲಿ ಸಂಭವಿಸಿದ ಹಿಮಪಾತದಲ್ಲಿ ಸಿಲುಕಿ ನಾಪತ್ತೆಯಾಗಿದ್ದಾರೆ ಎಂದು ಪಶ್ಚಿಮ ಬಂಗಾಳ ಸರ್ಕಾರ ಪ್ರಕಟಿಸಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನೇಪಾಳ ಸರ್ಕಾರಕ್ಕೂ ಕರೆ ಮಾಡಿ ಪರಿಸ್ಥಿತಿಯನ್ನು ವಿವರಿಸಿ ನೆರವು ಕೋರಿದ್ದಾರೆ.

Indian woman Everest climber goes missing in Kanchenjunga

ಚಂದಾ ಅವರ ಹುಡುಕಾಟಕ್ಕೆ ವಿಶೇಷ ಪಡೆ ಬಳಸಿಕೊಳ್ಳಲಾಗುತ್ತಿದ್ದು, ರಕ್ಷಣಾ ಕಾರ್ಯ ತ್ವರಿತಗತಿಯಲ್ಲಿ ಸಾಗಿದೆ ಎಂದು ವಸತಿ ಸಚಿವ ಅರುಪ್ ಬಿಸ್ವಾಸ್ ಅವರು ಕೋಲ್ಕತ್ತಾದಲ್ಲಿ ಹೇಳಿದ್ದಾರೆ. ಗಯೇನ್ ಅವರು ಇಬ್ಬರು ಶೆರ್ಪಾಗಳ ಜತೆ ಕಾಂಚನಜುಂಗಾ ಪರ್ವತ ಹತ್ತಲು ಆರಂಭಿಸಿದ್ದರು. ಸಮುದ್ರಮಟ್ಟದಿಂದ ಸುಮಾರು 28,169 ಅಡಿ ಎತ್ತರದಲ್ಲಿರುವ ಕಾಂಚನಜುಂಗಾದಲ್ಲಿ ಐದು ಶ್ರೇಣಿಗಳಿದ್ದು ಭಾರತದ ಸಿಕ್ಕಿಂ ಹಾಗೂ ನೇಪಾಳದ ಟಾಪಲ್ ಜುಂಗ್ ಜಿಲ್ಲೆಗಳಿಗೆ ಸೇರುತ್ತದೆ. ಮೌಂಟ್ ಎವೆರೆಸ್ಟ್ ಎತ್ತರವನ್ನು ಅಳೆಯುವುದಕ್ಕೂ ಮೊದಲು ಕಾಂಚನಜುಂಗಾವನ್ನೇ ವಿಶ್ವದ ಅತಿ ಎತ್ತರ ಪರ್ವತ ಎಂದು ಪರಿಗಣಿಸಲಾಗುತ್ತಿತ್ತ್ತು.

2013ರ ಮೇ ತಿಂಗಳಲ್ಲಿ ಪಶ್ಚಿಮ ಬಂಗಾಳದಿಂದ ಮೌಂಟ್ ಎವರೆಸ್ಟ್ ಏರಿದ ಎರಡನೇ ಮಹಿಳೆ ಎಂಬ ಗೌರವಕ್ಕೆ ಚಂದಾ ಗಯೇನ್ ಅವರು ಪಾತ್ರವಾಗಿದ್ದರು. ಇದಕ್ಕೂ ಮುನ್ನ 1993 ಮೇ 22 ರಂದು ದಾರ್ಜಲಿಂಗ್ ಮೂಲದ ಕುಂಗಾ ಭೂತಿಯಾ ಅವರು ಮೊದಲ ಬಾರಿಗೆ ವಿಶ್ವದ ಅತಿ ಎತ್ತರದ ಪರ್ವತ ಶ್ರೇಣಿಯ ಮೇಲೆ ಕಾಲೂರಿ ದಾಖಲೆ ಬರೆದಿದ್ದರು.

ಕಾಂಚನಜುಂಗಾ ಪರ್ವತಾರೋಹಣ ವಿಷಯಕ್ಕೆ ಬಂದರೆ , 1955ರಲ್ಲಿ, ಜೋ ಬ್ರೌನ್‌ ಮತ್ತು ಜಾರ್ಜ್‌ ಬ್ಯಾಂಡ್‌ರು ಮೇ 25ರಂದು ಮೊಟ್ಟಮೊದಲ ಬಾರಿಗೆ ಪಾದಾರ್ಪಣೆ ಮಾಡಿದರು. 1998ರಲ್ಲಿ ಜಿನೆಟ್ಟೆ ಹ್ಯಾರಿಸನ್ ಶಿಖರವನ್ನು ತಲುಪಿದ ಪ್ರಥಮ ಮಹಿಳೆಯಾಗಿದ್ದಾರೆ. ನಂತರ ಸ್ಪೇನ್, ನಾರ್ವೆ, ಪೊಲೆಂಡ್ ನ ಮಹಿಳೆಯರು ಪರ್ವತದ ಸಮೀಟ್ ಪೂರ್ಣಗೊಳಿಸಿದ್ದಾರೆ.

English summary
Mountaineer Chhanda Gayen, the second civilian woman from West Bengal to scale Mount Everest, has gone missing after she was caught in an avalanche on the Kanchenjunga peak, a state minister said on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X