ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಭೀತಿ: ಭಾರತದಲ್ಲಿ ಜೂಮ್ ವಿಡಿಯೋ ಕಾಲ್ ಮೂಲಕ ಮದುವೆ

|
Google Oneindia Kannada News

ಸಾಮಾನ್ಯವಾಗಿ ತಮ್ಮ ಮದುವೆಯ ಬಗ್ಗೆ ಎಲ್ಲರೂ ಕನಸುಗಳನ್ನು ಕಂಡಿರುತ್ತಾರೆ. ಮದುವೆಯನ್ನು ಎಂದೂ ಮರೆಯಲಾಗಂತೆ ಎಂದುಕೊಂಡಿರುತ್ತಾರೆ ಆದರೆ ವಿಧಿಬರಹವೇ ಬೇರೆ.

ಮನೆಯಲ್ಲಿ ನೆಂಟರಿಷ್ಟರಿಲ್ಲ, ಹಲವು ಬಗೆಯ ಭಕ್ಷ್ಯ ಭೋಜನಗಳಿಲ್ಲ, ವರ ಕುದುರೆ ಏರಿ ಬರುವುದಿಲ್ಲ, ವಧು ನಾಚಿಕೊಂಡು ಹಸೆ ಮಣೆಯ ಮೇಲೆ ಬಂದು ನಿಲ್ಲುವುದಿಲ್ಲ, ಜೂಮ್ ಅಪ್ಲಿಕೇಷನ್ ವಿಡಿಯೋ ಕಾನ್ಫರೆನ್ಸ್ ಮೂಲಕ ವಧು-ವರರಿಬ್ಬರು ಹಸೆಮಣೆ ಏರಿದ್ದಾರೆ.

ಕೊರೊನಾ ವೈರಸ್ ಜಗತ್ತಿನಾದ್ಯಂತ ತನ್ನ ಕಬಂಧಬಾಹುವನ್ನು ಚಾಚಿದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬ ಕಾರಣಕ್ಕೆ ಜಗತ್ತಿನಾದ್ಯಂತ ಲಕ್ಷಾಂತರ ಮದುವೆ ಸಮಾರಂಭಗಳು ಸಹ ಸ್ಥಗಿತಗೊಂಡಿವೆ.

Indian Wedding Takes Place Using Zoom Video App

ಆದಾಗ್ಯೂ, ಅನೇಕ ಜೋಡಿಗಳು ಕೊರೊನಾ ವೈರಸ್ ಹರಡುವುದನ್ನು ತಡೆಯಲು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಸಲುವಾಗಿ ವಿಡಿಯೋ ಕರೆಗಳ ಮೂಲಕವೇ ತಮ್ಮ ವಿವಾಹವನ್ನು ನೆರವೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಭಾರತದಲ್ಲಿ ಸಾಧ್ಯವಿಲ್ಲದೆ ಇರಬಹುದು. ಆದರೆ, ಯುರೋಪ್ ದೇಶಗಳಲ್ಲಿ ಇಂತಹ ವಿಡಿಯೋ ಕಾಲ್ ಮದುವೆಗಳು ಇತ್ತೀಚೆಗೆ ಭಾರೀ ಸಂಖ್ಯೆಯಲ್ಲಿ ಏರುತ್ತಿದೆ.

ವಿಶ್ವದಾದ್ಯಂತ ಇಂತಹ ಸಾಂಕ್ರಾಮಿಕ ರೋಗ ಹರಡುತ್ತಿರುವ ಇಂತಹ ಸಂದಿಗ್ಧ ಸಂದರ್ಭದಲ್ಲಿ ಮದುವೆ ಮತ್ತು ಸಮಾಜಿಕ ಅಂತರ ಎರಡರ ಬಗ್ಗೆಯೂ ಸಮತೋಲನ ಕಾಪಾಡಲು ಮುಂದಾಗಿರುವ ನ್ಯೂಯಾರ್ಕ್ ಆಡಳಿತ ಇದಕ್ಕೊಂದು ಪರಿಹಾರ ಹುಡುಕಿದೆ.

ಸುಶೇನ್ ದಂಗ್, ಕೀರ್ತಿ ನಾರಂಗ್ ಮದುವೆ ವಿಡಿಯೋ ಕಾಲ್ ಮೂಲಕ ನಡೆದಿದೆ. ದಂಗ್ ಅವರು ಮುಂಬೈನಲ್ಲಿರುವ ತಮ್ಮ ಮನೆಯಲ್ಲಿ ಮೊಬೈಲ್ ಸ್ಕ್ರೀನ್ ಮುಂದೆ ಬಂದು ನಿಂತಿದ್ದರು.

ವಧು ಬರೇಲಿಯಲ್ಲಿದ್ದಾಳೆ, ತನ್ನ ತಾಯಿ ಮದುವೆಗೆ ಧರಿಸಿದ್ದ ಕೆಂಪು ಬಣ್ಣದ ಲೆಹಂಗಾ ಧರಿಸಿದದ್ದಳು. ಮದುವೆ ಮಾಡಿಸುವ ಪೂಜಾರಿ ರಾಯ್‌ಪುರದಲ್ಲಿದ್ದರು. ಆದರೂ ಮದುವೆ ನೆರವೇರಿದೆ. ಎಂದೂ ನಮ್ಮ ಮದುವೆ ಈ ರೀತಿ ವಿಭಿನ್ನವಾಗಿ ನಡೆಯುತ್ತದೆ ಎಂದುಕೊಂಡಿರಲಿಲ್ಲ ಎಂದು ನಾರಂಗ್ ತಿಳಿಸಿದ್ದಾರೆ.

English summary
A man and woman from India got married using the Zoom video app.India’s nationwide lockdown has led to a growing trend in unique weddings taking place. Ceremonies are being conducted with extra precautions so that they do not breach the curfew or social distancing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X