ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

20 ದಿನದಲ್ಲೇ ಗಡಿ 6 ಎತ್ತರದ ಪ್ರದೇಶಗಳ ಮೇಲೆ ಭಾರತದ ಹಿಡಿತ!

|
Google Oneindia Kannada News

ನವದೆಹಲಿ, ಸಪ್ಟೆಂಬರ್.20: ಭಾರತ-ಚೀನಾ ಗಡಿ ಸಂಘರ್ಷದಲ್ಲಿ ನೆರೆ ರಾಷ್ಟ್ರಕ್ಕೆ ಭಾರತೀಯ ಯೋಧರು ಮುಟ್ಟಿ ನೋಡಿಕೊಳ್ಳುವಂತೆ ಪೆಟ್ಟು ಕೊಟ್ಟಿದ್ದಾರೆ. ಕಳೆದ 20 ದಿನಗಳಲ್ಲಿ ಗಡಿಯಲ್ಲಿರುವ 6 ಪ್ರಮುಖ ಪರ್ವತಗಳ ಮೇಲೆ ಭಾರತೀಯ ಸೇನೆಯು ಹಿಡಿತ ಸಾಧಿಸಿದೆ.

ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ ಯೋಧರು ಅತಿಕ್ರಮಿಸಿಕೊಳ್ಳಲು ಯತ್ನಿಸಿದ ಆರು ಹೊಸ ಪರ್ವತಗಳ ಮೇಲೆ ಭಾರತೀಯ ಯೋಧರು ಹಿಡಿತ ಸಾಧಿಸಿಕೊಂಡಿದ್ದಾರೆ ಎಂದು ಸೇನಾ ಮೂಲಗಳಿಂದ ತಿಳಿದು ಬಂದಿದೆ.

ಚೀನಾದ ವಿರುದ್ಧ ಚೀನಾದ ವಿರುದ್ಧ "ವಾಣಿಜ್ಯ ಸಮರ" ಸಾರಿತಾ ಕೇಂದ್ರ ಸರ್ಕಾರ?

ಭಾರತ-ಚೀನಾದ ಪೂರ್ವ ಗಡಿಗೆ ಹೊಂದಿಕೊಂಡಂತಿರುವ ಪ್ರದೇಶಗಳಲ್ಲಿ ಭಾರತೀಯ ಸೇನೆಯು ಬಲಿಷ್ಠವಾಗಿದೆ. ಚೀನಾದ ಅತಿಕ್ರಮಣ ನೀತಿಯನ್ನು ಸಮರ್ಥವಾಗಿ ಎದುರಿಸಲು ನಮ್ಮ ಸೈನಿಕರು ಸದೀ ಸನ್ನದ್ಧರಾಗಿತ್ತಾರೆ ಎಂದು ಭಾರತೀಯ ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆ ಮೂಲಕ ಚೀನಾ ಸೇನೆಗೆ ಎಚ್ಚರಿಕೆ ಸಂದೇವಶವನ್ನು ರವಾನಿಸಿದ್ದಾರೆ.

ಭಾರತೀಯ ಸೇನೆ ಹಿಡಿತ ಸಾಧಿಸಿದ 6 ಪರ್ವತ

ಭಾರತೀಯ ಸೇನೆ ಹಿಡಿತ ಸಾಧಿಸಿದ 6 ಪರ್ವತ

ಕಳೆದ 20 ದಿನಗಳಲ್ಲೇ ಭಾರತೀಯ ಸೇನೆಯು ಗಡಿಯಲ್ಲಿರುವ 6 ಪರ್ವತಗಳ ಮೇಲೆ ಹಿಡಿತ ಸಾಧಿಸಿದೆ. ಮಗರ್ ಹಿಲ್, ಗುರುಂಗ್ ಹಿಲ್, ರೆಜಾಂಗ್ ಲಾ, ರಚನ್ ಲಾ, ಮೊಕ್ಪರಿ ಮತ್ತು ಫಿಂಗರ್ 4ನ ರಿಡ್ಜ್ ಲೈನ್ ಪರ್ವತದ ಮೇಲೆ ಭಾರತೀಯ ಯೋಧರು ಹಿಡಿತ ಸಾಧಿಸಿದ್ದಾರೆ ಎಂದು ಸರ್ಕಾರದ ಮೂಲಗಳಿಂದ ತಿಳಿದು ಬಂದಿದೆ.

ಪ್ಯಾಂಗಾಂಗ್ ತ್ಸೋ ಸರೋವರ ಸುತ್ತಲೂ ಪರ್ವತ

ಪ್ಯಾಂಗಾಂಗ್ ತ್ಸೋ ಸರೋವರ ಸುತ್ತಲೂ ಪರ್ವತ

ಭಾರತ ಮತ್ತು ಚೀನಾ ಯೋಧರ ನಡುವೆ ಗಡಿ ಸಂಘರ್ಷಕ್ಕೆ ಪೂರ್ವ ಲಡಾಖ್ ಗಡಿಯಲ್ಲಿರುವ ಪ್ಯಾಂಗಾಂಗ್ ತ್ಸೋ ಸರೋವರದ ಸುತ್ತಮುತ್ತಲಿನ ಪ್ರದೇಶವೂ ಮುಖ್ಯ ಕಾರಣವಾಗಿದೆ. ದಕ್ಷಿಣ ಪ್ಯಾಂಗಾಂಗ್ ತ್ಸೋ ಸರೋವರ ಮತ್ತು ಉತ್ತರ ಪ್ಯಾಂಗಾಂಗ್ ತ್ಸೋ ಸರೋವರದ ಪ್ರದೇಶಕ್ಕಾಗಿ ಎರಡು ಸೇನೆಗಳ ನಡುವೆ ತಿಕ್ಕಾಟ ನಡೆಯುತ್ತಿದೆ ಎನ್ನಲಾಗುತ್ತಿದೆ.

ಗಡಿಯಲ್ಲಿ ನಿಯಮ ಉಲ್ಲಂಘಿಸುತ್ತಿರುವ ಚೀನಾ

ಗಡಿಯಲ್ಲಿ ನಿಯಮ ಉಲ್ಲಂಘಿಸುತ್ತಿರುವ ಚೀನಾ

ಆಗಸ್ಟ್.29ರಿಂದ ಸಪ್ಟೆಂಬರ್ ತಿಂಗಳ ಎರಡನೇ ವಾರದವರೆಗೂ ಪ್ಯಾಂಗಾಂಗ್ ತ್ಸೋ ಸರೋವರದ ಸುತ್ತಮುತ್ತಲಿನ ಪ್ರದೇಶವು ಬೂದಿ ಮುಚ್ಚಿದ ಕೆಂಡದಂತೆ ಆಗಿದೆ. ಪ್ಯಾಂಗಾಂಗ್ ತ್ಸೋ ಸರೋವರದ ಭಾಗದಲ್ಲಿ ನಿಂತಿರುವ ಚೀನಾ, ಗಡಿಯಲ್ಲಿರುವ ಎತ್ತರದ ಪರ್ವತನಗಳನ್ನು ಅತಿಕ್ರಮಿಸಿಕೊಳ್ಳಲು ಸಂಚು ರೂಪಿಸುತ್ತಿದೆ. ಕಳೆದ 20 ದಿನಗಳಲ್ಲೇ ಭಾರತೀಯ ಸೇನೆಯನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿರುವ ಬಗ್ಗೆಯೂ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದೆ.

ಗಡಿ ಪರ್ವತಗಳಲ್ಲಿ ಸೇನಾ ಪ್ರಮಾಣ ಹೆಚ್ಚಿಸಿದ ಚೀನಾ

ಗಡಿ ಪರ್ವತಗಳಲ್ಲಿ ಸೇನಾ ಪ್ರಮಾಣ ಹೆಚ್ಚಿಸಿದ ಚೀನಾ

ಜಾಗತಿಕ ಗಡಿ ನಿಯಂತ್ರಣ ರೇಖೆಗೆ ಹೊಂದಿಕೊಂಡಂತೆ ಇರುವ ಚೀನಾದ ಪ್ರಾದೇಶಿಕ ವ್ಯಾಪ್ತಿಗೆ ಸೇರಿರುವ ಬ್ಲಾಕ್ ಟಾಪ್ ಮತ್ತು ಹೆಲ್ಮೆಟ್ ಟಾಪ್ ಪರ್ವತಗಳ ಮೇಲೆ ಚೀನಾ ಹೆಚ್ಚು ನಿಗಾ ವಹಿಸಿದೆ. ಚೀನಾ ಗಡಿಯಲ್ಲಿ ಇರುವ ಪರ್ವತಗಳಲ್ಲಿ ಸೇನಾ ಪ್ರಮಾಣವನ್ನು ಹೆಚ್ಚಿಸಲಾಗುತ್ತಿದೆ. ಭಾರತೀಯ ಸೇನೆಯನ್ನು ಎದುರಿಸುವುದಕ್ಕಾಗಿ ಗಡಿ ಪರ್ವತ ಪ್ರದೇಶಗಳಲ್ಲಿ 3000 ಹೆಚ್ಚುವರಿ ಸೈನಿಕರನ್ನು ನಿಯೋಜಿಸಲಾಗಿದೆ ಎಂದು ತಿಳಿದು ಬಂದಿದೆ.

English summary
Indian Troops Takes Control Of 6 New Major Heights On LAC In 20 Days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X