ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಸಿಕೆ ಡೋಸ್‌ಗಳ ನಡುವಿನ ಅಂತರ: ವಿಜ್ಞಾನಿಗಳ ಶಿಫಾರಸು ಏನಾಗಿತ್ತು?

|
Google Oneindia Kannada News

ನವದೆಹಲಿ, ಜೂನ್ 16: ಕೊರೊನಾ ಲಸಿಕೆಯ ಡೋಸ್‌ಗಳ ನಡುವಿನ ಅಂತರ ಹೆಚ್ಚಳಕ್ಕೆ ವಿಜ್ಞಾನಿಗಳ ಒಪ್ಪಿಗೆ ಇರಲಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ಕುರಿತು ರಾಯ್ಟರ್ಸ್ ವರದಿ ಮಾಡಿದ್ದು, ಲಸಿಕೆ ಡೋಸ್ ಗಳ ನಡುವಿನ ಅಂತರವನ್ನು 6-8 ವಾರಗಳಿಂದ 12-16 ವಾರಗಳಿಗೆ ಮೇ.13 ರಂದು ಏರಿಕೆ ಮಾಡಿರುವುದನ್ನು ಆರೋಗ್ಯ ಸಚಿವಾಲಯ ಘೋಷಿಸಿತ್ತು.

ಆದರೆ ಈ ನಿರ್ಧಾರವನ್ನು ವೈಜ್ಞಾನಿಕ ಗುಂಪಿನ ಸಂಪೂರ್ಣ ಒಪ್ಪಿಗೇ ಇಲ್ಲದೇ ಕೈಗೊಳ್ಳಲಾಗಿರುವುದನ್ನು ಸಲಹಾ ಸಮಿತಿಯ ಮೂವರು ಸದಸ್ಯರು ಹೇಳಿರುವುದನ್ನು ಉಲ್ಲೇಖಿಸಲಾಗಿದೆ.

Corona vaccine

ಸರ್ಕಾರಿ ಸ್ವಾಮ್ಯದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿಯ ಮಾಜಿ ನಿರ್ದೇಶಕ ಎಂಡಿ ಗುಪ್ತೆ ಮಾತನಾಡಿ, '' ಎನ್‌ಟಿಎಜಿಐ ಡೋಸ್‌ಗಳ ನಡುವಿನ ಅಂತರವನ್ನು ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿದ್ದ 8-12ಕ್ಕೆ ನಿಗದಿಪಡಿಸಲು ಒಪ್ಪಿಗೆ ನೀಡಿತ್ತು. ಆದರೆ ಈ ಗುಂಪಿಗೆ, 12 ವಾರಗಳ ಬಳಿಕವೂ ಎರಡನೇ ಡೋಸ್ ಲಸಿಕೆ ಅಂತರದ ಪರಿಣಾಮಗಳ ಬಗ್ಗೆ ಡಾಟಾ ಇರಲಿಲ್ಲ'' ಎಂದು ಹೇಳಿದ್ದಾರೆ.

ಲಸಿಕೆ ಪಡೆದ ನಂತರದ ಮರಣಕ್ಕೆ ಲಸಿಕೆಯನ್ನು ಹೊಣೆ ಮಾಡಬೇಡಿ; ಕೇಂದ್ರಲಸಿಕೆ ಪಡೆದ ನಂತರದ ಮರಣಕ್ಕೆ ಲಸಿಕೆಯನ್ನು ಹೊಣೆ ಮಾಡಬೇಡಿ; ಕೇಂದ್ರ

ಆದರೂ ಎನ್ ಟಿಎಜಿಐ ವಿಜ್ಞಾನಿಗಳು, ಸರ್ಕಾರದಿಂದ ವರ್ಗೀಕರಿಸಲಾದ 14 ಕೋರ್ ಸದಸ್ಯರ ಪೈಕಿ ಮೂವರು ಈ ರೀತಿಯ ಶಿಫಾರಸು ಮಾಡುವುದಕ್ಕೆ ಸಾಕಷ್ಟು ಅಂಕಿ-ಅಂಶ, ಡಾಟಾ, ಮಾಹಿತಿಗಳಿಲ್ಲ ಎಂದು ಹೇಳಿದ್ದರು.

ಎನ್‌ಟಿಜಿಐನಲ್ಲಿನ ಅವರ ಸಹೋದ್ಯೋಗಿ ಮ್ಯಾಥ್ಯೂ ವರ್ಗೀಸ್ , ''ಗುಂಪಿನ ಶಿಫಾರಸ್ಸು ಇದ್ದದ್ದು 8-12 ವಾರಗಳಿಗೆ ಅಷ್ಟೇ'' ಎಂದು ಹೇಳಿದ್ದಾರೆ.

ಲಸಿಕೆ ಹಾಕುವ ವಿಷಯದ ಬಗ್ಗೆ ರಾಷ್ಟ್ರೀಯ ಲಸಿಕಾ ತಾಂತ್ರಿಕ ಸಲಹಾ ಗುಂಪು (ಎನ್‌ಟಿಎಜಿಐ) ಬ್ರಿಟನ್‌ನ ರಿಯಲ್-ಲೈಫ್ ಎವಿಡೆನ್ಸ್ ಆಧಾರದಲ್ಲಿ ಲಸಿಕೆ ಡೋಸ್ ನಡುವಿನ ಅಂತರವನ್ನು ಹೆಚ್ಚಿಸುವುದಕ್ಕೆ ಶಿಫಾರಸು ಮಾಡಿತ್ತು ಎಂದು ಆರೋಗ್ಯ ಸಚಿವಾಲಯ ಹೇಳಿತ್ತು.

English summary
The Indian government doubled the gap between the two doses of the AstraZeneca COVID-19 vaccine without the agreement of the scientific group that it said recommended the increase, three members of the advisory body told Reuters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X