ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆ: ಇದೇ ಮೊದಲ ಬಾರಿಗೆ ರಹಸ್ಯ ಹೊರಬಿಟ್ಟ ದೇವೇಗೌಡ

|
Google Oneindia Kannada News

ಭಾರತದಿಂದ ಪೋಖ್ರಾನ್ - 2 ನ್ಯೂಕ್ಲಿಯರ್ ಟೆಸ್ಟ್ ಎಂದಾಗ ನೆನಪಿಗೆ ಬರುವುದು ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಮತ್ತು ಅಂದು ರಕ್ಷಣಾ ಸಚಿವರಿಗೆ ವೈಜ್ಞಾನಿಕ ಸಲಹೆಗಾರರಾಗಿದ್ದ ಮಾಜಿ ರಾಷ್ಟ್ರಪತಿ ದಿ. ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಇವರುಗಳ ಹೆಸರು.

ವಾಜಪೇಯಿಯವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ತಂದುಕೊಟ್ಟ ವಿದ್ಯಮಾನ ಅದಾಗಿತ್ತು, ಜೊತೆಗೆ, ಸಾಕಷ್ಟು ಒತ್ತಡವನ್ನೂ ಎದುರಿಸಬೇಕಾಯಿತು. ಭಾರತ ನ್ಯೂಕ್ಲಿಯರ್ ಟೆಸ್ಟ್ ಮಾಡಿದ ಕೆಲವೇ ದಿನಗಳಲ್ಲಿ ಪಾಕಿಸ್ತಾನ ಕೂಡಾ ಟೆಸ್ಟ್ ಮಾಡಿ, ತಾನೇನು ಕಮ್ಮಿಯಿಲ್ಲ ಎಂದು ವಿಶ್ವಕ್ಕೆ ಸಾರಿತು.

ರಾಜಾಸ್ಥಾನದ, ಜೈಸಲ್ಮರ್ ಜಿಲ್ಲೆಯಲ್ಲಿರುವ, ಪೋಖ್ರಾನ್‌ನಲ್ಲಿರುವ ಥಾರ್ ಮರುಭೂಮಿಯ ಒಂದು ಮೂಲೆಯಲ್ಲಿ, ಭಾರತದ ಮೊದಲ ಭೂಗತ ಅಣ್ವಸ್ತ್ರ ಸ್ಫೋಟ ಪರೀಕ್ಷೆ ನಡೆಸಿತ್ತು. ಆಪರೇಶನ್ ಶಕ್ತಿ ಹೆಸರಿನಲ್ಲಿ ಮೇ 11, 1998ರಲ್ಲಿ ಈ ಪರೀಕ್ಷೆಯನ್ನು ನಡೆಸಲಾಗಿತ್ತು ಮತ್ತು ಆ ವೇಳೆ ಪ್ರಧಾನಿಯಾಗಿ ವಾಜಪೇಯಿಯವರು ಇದ್ದರು.

ವಿಚಾರಕ್ಕೆ ಬರುವುದಾದರೆ, ವಾಜಪೇಯಿ ಸರಕಾರಕ್ಕೂ ಮುನ್ನ ಮಣ್ಣಿನಮಗ ಎಚ್.ಡಿ.ದೇವೇಗೌಡ ಅವರು ಪ್ರಧಾನಿಯಾಗಿದ್ದಾಗಲೇ, ಅಣ್ವಸ್ತ್ರ ಪರೀಕ್ಷೆಗೆ ಅನುಮತಿ ನೀಡಬೇಕೆಂದು ವಿಜ್ಞಾನಿಗಳು ಗೌಡ್ರಲ್ಲಿ ಮನವಿ ಮಾಡಿದ್ದರು. ಆದರೆ, ಮೂರು ವಿಚಾರಕ್ಕಾಗಿ ಗೌಡ್ರು ಅಂದು ಅನುಮತಿಯನ್ನು ನೀಡಿರಲಿಲ್ಲ. ಸಂದರ್ಶನವೊಂದರಲ್ಲಿ ಇದೇ ಮೊದಲ ಬಾರಿಗೆ ಗೌಡ್ರು, ಆ ವಿಚಾರದ ಬಗ್ಗೆ ಮಾತನಾಡಿದ್ದಾರೆ.

ನ್ಯೂಕ್ಲಿಯರ್ ಟೆಸ್ಟ್ ಮಾಡಲು ವಿಜ್ಞಾನಿಗಳು ಎಲ್ಲಾ ಪೂರ್ವ ತಯಾರಿಯನ್ನು ನಡೆಸಿದ್ದರು

ನ್ಯೂಕ್ಲಿಯರ್ ಟೆಸ್ಟ್ ಮಾಡಲು ವಿಜ್ಞಾನಿಗಳು ಎಲ್ಲಾ ಪೂರ್ವ ತಯಾರಿಯನ್ನು ನಡೆಸಿದ್ದರು

1997ರ ಆರಂಭದ ತಿಂಗಳು, ಭಾನುವಾರ, ನ್ಯೂಕ್ಲಿಯರ್ ಟೆಸ್ಟ್ ಮಾಡಲು ವಿಜ್ಞಾನಿಗಳು ಎಲ್ಲಾ ಪೂರ್ವ ತಯಾರಿಯನ್ನು ನಡೆಸಿದ್ದರು. ಅನುಮತಿ ಕೋರಿ ಪ್ರಧಾನಿಯಾಗಿದ್ದ ಎಚ್.ಡಿ.ದೇವೇಗೌಡ್ರ ಬಳಿ ವಿಜ್ಞಾನಿಗಳ ತಂಡ ಆಗಮಿಸಿತ್ತು. ಆ ವೇಳೆ, ಪರೀಕ್ಷೆ ನಡೆಸಿ, ಆದರೆ ಒಂದು ವರ್ಷ ಕಾಯಿರಿ. ನನಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬಹಳ ಒತ್ತಡವಿದೆ ಎಂದು ಗೌಡ್ರು, ವಿಜ್ಞಾನಿಗಳ ತಂಡಕ್ಕೆ ಹೇಳಿ ಅವರನ್ನು ಕಳುಹಿಸಿದ್ದರು.

ಆತ್ಮಚರಿತ್ರೆ 'ಫುರೋಸ್ ಇನ್ ಎ ಫೀಲ್ಡ್'

ಆತ್ಮಚರಿತ್ರೆ 'ಫುರೋಸ್ ಇನ್ ಎ ಫೀಲ್ಡ್'

ತಮ್ಮ ಆತ್ಮಚರಿತ್ರೆ 'ಫುರೋಸ್ ಇನ್ ಎ ಫೀಲ್ಡ್' ನಲ್ಲಿ ಅಂದು ಅಣ್ವಸ್ತ್ರ ಪರೀಕ್ಷೆಗೆ ಅನುಮತಿ ನೀಡಲು ಸಾಧ್ಯವಾಗದೇ ಇದ್ದಿದ್ದಕ್ಕೆ ಕಾರಣವನ್ನು ಗೌಡ್ರು ನೀಡಿದ್ದಾರೆ. ಸಿಟಿಬಿಟಿಗೆ (Comprehensive Test Ban Treaty) ಸಹಿ ಹಾಕಲು ಅಮೆರಿಕದಿಂದ ಭಾರೀ ಒತ್ತಡ ನನ್ನ ಮೇಲಿತ್ತು ಎನ್ನುವುದನ್ನು ಗೌಡ್ರು ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಗೌಡ್ರು ಪ್ರಧಾನಿ ಸ್ಥಾನದಿಂದ ಪದತ್ಯಾಗ ಮಾಡಿದ ನಂತರ, ಐ.ಕೆ.ಗುಜ್ರಾಲ್, ಅದಾದ ನಂತರ ವಾಜಪೇಯಿಯವರು ಪ್ರಧಾನಿಯಾದರು. ವಾಜಪೇಯಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ತಿಂಗಳಲ್ಲಿ ಪೋಖ್ರಾನ್ - 2 ಅಣ್ವಸ್ತ್ರ ಪ್ರಯೋಗ ನಡೆಸಲಾಯಿತು.

ರಾಜಗೋಪಾಲ ಚಿದಂಬರಂ, ಅಬ್ದುಲ್ ಕಲಾಂ, ಅಟೋಮಿಕ್ ಎನರ್ಜಿ ಮುಖ್ಯಸ್ಥ

ರಾಜಗೋಪಾಲ ಚಿದಂಬರಂ, ಅಬ್ದುಲ್ ಕಲಾಂ, ಅಟೋಮಿಕ್ ಎನರ್ಜಿ ಮುಖ್ಯಸ್ಥ

ಅಣ್ವಸ್ತ್ರ ಪರೀಕ್ಷೆಗೆ ಸಂಬಂಧಿಸಿದಂತೆ ಗೌಪ್ಯತೆಯನ್ನು ಕಾಪಾಡಿಕೊಂಡು ಬರಲಾಗಿತ್ತು. ಫೆಬ್ರವರಿ 1997ರಲ್ಲಿ ವಿಜ್ಞಾನಿಗಳ ತಂಡ ನ್ಯೂಕ್ಲಿಯರ್ ಟೆಸ್ಟಿಗೆ ಅನುಮತಿ ಕೋರಲು ನನ್ನನ್ನು ಭೇಟಿಯಾಗಿದ್ದರು. ತಂಡದಲ್ಲಿ ರಾಜಗೋಪಾಲ ಚಿದಂಬರಂ, ಅಬ್ದುಲ್ ಕಲಾಂ, ಅಟೋಮಿಕ್ ಎನರ್ಜಿ ಕಮಿಷನ್ ಮುಖ್ಯಸ್ಥರು ಕೂಡಾ ಇದ್ದರು. "ನಿಮಗೆ ಅನುಮತಿ ಕೊಡುತ್ತೇನೆ, ಆದರೆ ಈಗ ಅಲ್ಲ. ನಿಮಗೆ ಆರ್ಥಿಕ ಸಹಾಯವನ್ನೂ ಸರಕಾರದಿಂದ ಮಾಡಲಾಗುವುದು. ಆದರೆ, ಒಂದು ವರ್ಷ ಈ ಪರೀಕ್ಷೆಯನ್ನು ಮುಂದೂಡಿ ಎಂದು ನಾನು ಅವರಲ್ಲಿ ಕೋರಿದ್ದೆ"ಎಂದು ಗೌಡ್ರು ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ಅಣ್ವಸ್ತ್ರ ಪರೀಕ್ಷೆಗೆ ಅನುಮತಿ ನೀಡಲು ಸಾಧ್ಯವಿಲ್ಲ

ಅಣ್ವಸ್ತ್ರ ಪರೀಕ್ಷೆಗೆ ಅನುಮತಿ ನೀಡಲು ಸಾಧ್ಯವಿಲ್ಲ

ತಮ್ಮನ್ನು ಭೇಟಿಯಾಗಲು ಬಂದ ತಂಡಕ್ಕೆ ಅಣ್ವಸ್ತ್ರ ಪರೀಕ್ಷೆಗೆ ಅನುಮತಿ ನೀಡಲು ಸಾಧ್ಯವಿಲ್ಲ ಎನ್ನುವುದಕ್ಕೆ ಗೌಡ್ರು ನೀಡಿದ ಇನ್ನೆರಡು ಕಾರಣವೇನಂದರೆ, ನೆರೆರಾಷ್ಟ್ರಗಳ ಜೊತೆಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಳ್ಳುವುದು ಮತ್ತು ದೇಶದ ಆರ್ಥಿಕ ಪರಿಸ್ಥಿತಿಯನ್ನು ಸರಿದಾರಲು ಇನ್ನಷ್ಟು ಸಮಯಬೇಕಾಗಬಹುದು ಎಂದು. ಪಾಕಿಸ್ತಾನ ಸೇರಿದಂತೆ ಪಕ್ಕದ ದೇಶಗಳ ಜೊತೆಗೆ, ಸಂಬಂಧವನ್ನು ಹಾಳು ಮಾಡಿಕೊಳ್ಳಲು ಸದ್ಯದ ಮಟ್ಟಿಗೆ ಸಾಧ್ಯವಿರಲಿಲ್ಲ ಎನ್ನುವುದನ್ನು ಗೌಡ್ರು, ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ನಮ್ಮ ವಿಜ್ಞಾನಿಗಳ ತಂಡಕ್ಕೆ ಪರೀಕ್ಷೆ ನಡೆಸುವ ಸಾಮರ್ಥ್ಯ

ನಮ್ಮ ವಿಜ್ಞಾನಿಗಳ ತಂಡಕ್ಕೆ ಪರೀಕ್ಷೆ ನಡೆಸುವ ಸಾಮರ್ಥ್ಯ

"ನನ್ನ ನಿರ್ಧಾರದಿಂದ ತಂಡಕ್ಕೆ ನಿರಾಶೆಯಾಯಿತು ಎನ್ನುವುದನ್ನು ನಾನು ಬಲ್ಲೆ. ವಿಶ್ವದಲ್ಲಿ ಭಾರತ ಎಷ್ಟು ಪ್ರಬಲ ರಾಷ್ಟ್ರ ಎನ್ನುವುದನ್ನು ಜಾಹೀರು ಮಾಡಲು ಅಣ್ವಸ್ತ್ರ ಪರೀಕ್ಷೆಯ ಅನಿವಾರ್ಯತೆಯನ್ನು ತಂಡ ನನಗೆ ವಿವರಿಸಿತು. ನಮ್ಮ ವಿಜ್ಞಾನಿಗಳ ತಂಡಕ್ಕೆ ಪರೀಕ್ಷೆ ನಡೆಸುವ ಸಾಮರ್ಥ್ಯವಿರುವುದು ನನಗೆ ಗೊತ್ತಿತ್ತು. ಆದರೆ, ನನ್ನ ಆದ್ಯತೆ ಬೇರೆ ಇದ್ದಿದ್ದರಿಂದ ಅಂದು ಅನಮತಿ ನೀಡಲು ಸಾಧ್ಯವಾಗಲಿಲ್ಲ"ಎಂದು ದೇವೇಗೌಡ್ರು ತಮ್ಮ ಆತ್ಮ ಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ.

English summary
Indian scientists planned nuclear test in 1997. But PM Deve Gowda gave 3 reasons to say no. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X