ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ವಿಜ್ಞಾನಿಗಳಿಂದ ಆ್ಯಂಟಿ ವೈರಲ್ ಫೇಸ್‌ ಮಾಸ್ಕ್ ಸಂಶೋಧನೆ

|
Google Oneindia Kannada News

ನವದೆಹಲಿ, ಫೆಬ್ರವರಿ 4: ಭಾರತೀಯ ವಿಜ್ಞಾನಿಗಳು ಆ್ಯಂಟಿ ವೈರಲ್ ಫೇಸ್‌ ಮಾಸ್ಕ್‌ ಅನ್ನು ಸಂಶೋಧಿಸಿದ್ದಾರೆ.

ಕೊರೊನಾ ಸೋಂಕಿನಿಂದಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕೋವಿಡ್ ರೋಗಕ್ಕೆ ಕಾರಣವಾಗುವ ಸಾರ್ಸ್ ಕೋವ್ 2 ವೈರಸ್ ಹರಡುವಿಕೆಯನ್ನು ಕಡಿಮೆ ಮಾಡಲು ಪರಿಣಾಮಕಾರಿಯಾದ ವಿಧಾನವಾಗಿದೆ. ಸಾರ್ಸ್ ಕೋವ್ 2 ವೈರಸ್‌ನ ಪ್ರಸರಣ ವಿಧಾನವು ಮುಖ್ಯವಾಗಿ ವಾಯುಗಾಮಿಯಾಗಿರುವ ಉಸಿರಾಟದ ಕಣಗಳ ಮೂಲಕ ಆಗುತ್ತದೆ. ಅದನ್ನು ತಡೆಗಟ್ಟುವಲ್ಲಿ ಈ ಮಾಸ್ಕ್ ಪರಿಣಾಮಕಾರಿಯಾಗಿದೆ.

ಉಸಿರಾಟಕ್ಕೆ ಅನುಕೂಲಕರ ಮತ್ತು ತೊಳೆಯಬಹುದಾದ ಮಾಸ್ಕ್ ಇದಾಗಿದ್ದು, ಕೊರೊನಾ ಸೋಂಕು ಮತ್ತು ಹಲವು ಇತರೆ ವೈರಲ್ ಮತ್ತು ಬ್ಯಾಕ್ಟೀರಿಯಾದ ಸೋಂಕುಗಳ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿದೆ.

ಈ ಫೇಸ್ ಮಾಸ್ಕ್‌ ಅನ್ನು ಬಳಸಿಕೊಂಡು ಉತ್ತಮ ಕಾಟನ್ ಬಟ್ಟೆಯ ಮೇಲೆ ಈ ನ್ಯಾರೊ ಲೇಪಿತದ ಏಕರೂಪದ ಪದರವನ್ನು ರಚಿಸಲಾಗಿದೆ. ಈ ನ್ಯಾರೊ ಕೋಟಿಂಗ್ ಬಟ್ಟೆಯು ಬ್ಯಾಕ್ಟೀರಿಯಾದ ವಿರುದ್ಧ ಶೇ.99.9ರಷ್ಟು ಪರಿಣಾಮಕಾರಿಯಾಗಿದೆ.

Corona

ಈ ಪರಿಸ್ಥಿತಿಯಲ್ಲಿ ಕೊರೊನಾ ವೈರಸ್ ರೂಪಾಂತರಗಳ ವೇಗ ಹೆಚ್ಚಾಗುತ್ತಿದೆ, ಹಾಗಾಗಿ, ಕಡಿಮೆ ವೆಚ್ಚದ ಆ್ಯಂಟಿವೈರಲ್ ಮಾಸ್ಕ್ ಅನ್ನು ಅಭಿವೃದ್ಧಿಪಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ.

ಈ ನಿಟ್ಟಿನಲ್ಲಿ, ವಿಜ್ಞಾನಿಗಳು ಸ್ವಯಂ ಸೋಂಕು ನಿವಾರಕ ತಾಮ್ರ ಆಧಾರಿತ ನ್ಯಾನೊಪಾರ್ಟಿಕಲ್ ಲೇಪಿತ ಮಾಸ್ಕ್ ಅನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಪ್ರಾಯೋಜಿತ ನ್ಯಾನ ಮಿಷನ್ ಯೋಜನೆಯಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಈ ಫೇಸ್‌ ಮಾಸ್ಕ್ ಅನ್ನು ಪೌಡರ್ ಮೆಟಲರ್ಜಿ ಮತ್ತು ಮ್ಯೂ ಮೆಟೀರಿಯಲ್ಸ್ ಅಂತಾರಾಷ್ಟ್ರೀಯ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು, ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ಬೆಂಗಳೂರು ಮೂಲದ ಸೆಂಟರ್ ಫಾರ್ ಸೆಲ್ಯುಲರ್ ಮಾಲಿಕ್ಯುಲರ್ ಬಯಾಲಜಿ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ.

Recommended Video

ಯೋಗಿ ಆದಿತ್ಯನಾಥ್ ಕಿವಿ ಓಲೆ ಮತ್ತು ರುದ್ರಾಕ್ಷಿ ಮಾಲೆಯ ಬೆಲೆ ಎಷ್ಟು ಗೊತ್ತಾ? | Oneindia Kannada

ಆ್ಯಂಟಿವೈರಲ್ ಅಥವಾ ಆ್ಯಂಟಿ ಬ್ಯಾಕ್ಟೀರಿಯಲ್ ಗುಣಲಕ್ಷಣಗಳನ್ನು ಪ್ರರ್ಶಿಸದ ದುಬಾರಿ ಮಾಸ್ಕ್‌ಗಳು ಮಾರುಕಟ್ಟೆಯಲ್ಲಿವೆ. ಜನರು ಅವುಗಳನ್ನು ಧರಿಸಿ ಆಸ್ಪತ್ರೆಗಳು, ವಿಮಾನ ನಿಲ್ದಾಣ, ಶಾಪಿಂಗ್ ಮಾಲ್‌ಗಳಿ ಹೋಗುತ್ತಾರೆ.

English summary
A team of Indian scientists have developed a self-disinfecting antiviral mask to fight the coronavirus disease (Covid-19) pandemic, the ministry of science and technology said on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X