ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯರು ಕೊರೊನಾ ಲಸಿಕೆಗೆ ಎಷ್ಟು ಸನಿಹದಲ್ಲಿದ್ದಾರೆ? ಇಲ್ಲಿದೆ ಮಾಹಿತಿ

|
Google Oneindia Kannada News

ಸ್ವೀಡಿಷ್-ಬ್ರಿಟಿಷ್ ಕಂಪನಿ ಆಸ್ಟ್ರಾಜೆನೆಕಾ ಹಾಗೂ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯವು ಭಾರತದಲ್ಲಿ ಕೊರೊನಾ ವೈರಸ್ ಲಸಿಕೆ, ವಿತರಣೆ, ಲಭ್ಯತೆ ಕುರಿತು ಕೆಲವೊಂದು ಮಾಹಿತಿಯನ್ನು ಬಿಡುಗಡೆ ಮಾಡಿವೆ. ಸೆರಂ ಸಂಸ್ಥೆ ಹೇಳಿಕೊಂಡಿರುವಂತೆ ಆಸ್ಚ್ರಾ ಜೆನಿಕಾ ಸಂಸ್ಥೆಯ ಕೊವಿಡ್ ಲಸಿಕೆಯ ಶೇಖರಣೆ ಮತ್ತು ಸರಬರಾಜು ಸುಲಭದ್ದಾಗಿದೆ.

ಸಾಮಾನ್ಯ ರೆಫ್ರಿಜರೇಟರ್‌ನಲ್ಲಿ ಇರುವಷ್ಟು ಶೀತಲ ವಾತಾವರಣದೊಂದಿಗೆ ಈ ಲಸಿಕೆಯ ಪೂರೈಕೆ ಮಾಡುವುದು ಸಾಧ್ಯವಿದೆ. ಇತರೆ ಲಸಿಕೆಗಳನ್ನು ಸಂಗ್ರಹಿಸಲು ಹೆಚ್ಚು ಶೀತಲ ವಾತಾವರಣದ ಅಗತ್ಯವಿರುತ್ತದೆ ಎಂದು ಹೇಳಲಾಗಿದೆ. ಲಸಿಕೆ ಪೂರೈಕೆಯಲ್ಲಿ ಭಾರತವೇ ಮೊದಲ ಆದ್ಯತೆಯಾಗಿರಲಿದೆ. ಈಗಾಗಲೇ ಲಸಿಕೆಯ 4 ಕೋಟಿ ಡೋಸ್‌ಗಳನ್ನು ಸಿದ್ಧಪಡಿಸಲಾಗಿದೆ. ಜನವರಿ ವೇಳೆಗೆ ನಾವು 10 ಕೋಟಿ ಡೋಸ್‌ಗಳಷ್ಟು ಲಸಿಕೆ ತಯಾರಿಸಿರುತ್ತೇವೆ.

ಆರ್‌ಟಿ-ಪಿಸಿಆರ್ ಪರೀಕ್ಷೆ: ಯಾವ ರಾಜ್ಯದಲ್ಲಿ ಎಷ್ಟು ಶುಲ್ಕ?ಆರ್‌ಟಿ-ಪಿಸಿಆರ್ ಪರೀಕ್ಷೆ: ಯಾವ ರಾಜ್ಯದಲ್ಲಿ ಎಷ್ಟು ಶುಲ್ಕ?

' ಸೆರಂ ಸಂಸ್ಥೆಯಲ್ಲಿ ತಯಾರಿಸಲಾಗುವ ಶೇ 90ರಷ್ಟು ಪ್ರಮಾಣದ ಲಸಿಕೆಯನ್ನು ಭಾರತ ಸರ್ಕಾರಕ್ಕೆ ಮಾರಾಟ ಮಾಡುವ ನಿರೀಕ್ಷೆ ಇದೆ. ಪ್ರತಿ ಡೋಸ್‌ ಲಸಿಕೆಯನ್ನು ಸರ್ಕಾರಕ್ಕೆ 250 ರೂಪಾಯಿಗೆ (3 ಡಾಲರ್) ಮಾರಾಟ ಮಾಡಲಾಗುತ್ತದೆ. ಖಾಸಗಿ ಮಾರುಕಟ್ಟಗೆ ಈ ದರ ಪ್ರತೀ ಡೋಸ್ ಗೆ 1000 ರೂಗಳಾಗಿರುತ್ತದೆ ಎಂದು ಹೇಳಿದ್ದಾರೆ.

'ಸಂಸ್ಥೆಯಲ್ಲಿ ತಯಾರಿಸಲಾಗುವ ಲಸಿಕೆಯ ಒಟ್ಟು ಪ್ರಮಾಣದಲ್ಲಿ ಶೇ 90ರಷ್ಟು ಡೋಸ್‌ಗಳು ಭಾರತ ಸರ್ಕಾರಕ್ಕೆ ಹೋಗಲಿವೆ ಹಾಗೂ ಬಹುಶಃ ಶೇ 10ರಷ್ಟು ಡೋಸ್‌ಗಳು ಖಾಸಗಿ ಮಾರುಕಟ್ಟೆಗೆ ಮಾರಾಟವಾಗಲಿದೆ. ಖಾಸಗಿಯಾಗಿ ಪ್ರತಿ ಡೋಸ್‌ಗೆ ರೂ 1,000ಕ್ಕೆ ಮಾರಾಟ ಮಾಡವಾಗಲಿದೆ.

ತುರ್ತು ಸಂದರ್ಭಗಳಲ್ಲಿ ಲಸಿಕೆ ಬಳಕೆಗೆ ಡಿಸೆಂಬರ್‌ನಲ್ಲಿ ಔಷಧ ಗುಣಮುಟ್ಟ ನಿಯಂತ್ರಣ ಸಂಸ್ಥೆಯಿಂದ ಅನುಮತಿ ದೊರೆತರೆ, ಜನವರಿಯಲ್ಲಿ ಲಸಿಕೆಯ ಡೋಸ್‌ಗಳನ್ನು ಬಿಡುಗಡೆ ಮಾಡಬಹುದಾಗಿದೆ' ಎಂದು ಪೂನಾವಾಲ ಹೇಳಿದ್ದಾರೆ.

ಆಕ್ಸ್‌ಫರ್ಡ್ ಲಸಿಕೆ ಪರಿಣಾಮಕಾರಿ

ಆಕ್ಸ್‌ಫರ್ಡ್ ಲಸಿಕೆ ಪರಿಣಾಮಕಾರಿ

ಆಕ್ಸ್‌ಫರ್ಡ್ ಕೊರೊನಾ ಲಸಿಕೆ ಶೇ.90ರಷ್ಟು ಪರಿಣಾಮಕಾರಿ ಎಂದು ಸೆರಂ ಇನ್‌ಸ್ಟಿಟ್ಯೂಟ್ ಹೇಳಿದೆ.ಜೊತೆಗೆ ಲಸಿಕೆಯಿಂದ ಯಾವುದೇ ಅಡ್ಡಪರಿಣಾಮಗಳೂ ಕಂಡು ಬಂದಿಲ್ಲ ಎಂದು ಕಂಪನಿ ತಿಳಿಸಿದೆ. ಮೊದಲಿಗೆ ಒಂದು ಡೋಸ್‌ ನೀಡಿ ನಂತರ ಒಂದು ತಿಂಗಳ ಬಳಿಕ ಅರ್ಧ ಡೋಸ್‌ ನೀಡಿದಾಗ ಕೊರೊನಾ ವೈರಸ್‌ ತಡೆಗಟ್ಟುವಲ್ಲಿ ಲಸಿಕೆಯು ಶೇ. 90ರಷ್ಟು ಯಶಸ್ವಿಯಾಗಿದೆ.

ಲಸಿಕೆಯ ಮಾನವರ ಮೇಲಿನ ಪರೀಕ್ಷೆಯ ಮಧ್ಯಂತರ ದತ್ತಾಂಶಗಳನ್ನು ಸಂಸ್ಥೆಯ ಸೋಮವಾರ ಬಿಡುಗಡೆ ಮಾಡಿದೆ. ಬ್ರಿಟನ್‌ ಮತ್ತು ಬ್ರೆಜಿನ್‌ನಲ್ಲಿ ನಡೆದ ಅಂತಿಮ ಪರೀಕ್ಷೆಯಲ್ಲಿ ಇದು ಋಜುವಾತಾಗಿದೆ ಎಂದು ಸಂಸ್ಥೆ ತಿಳಿಸಿದೆ. ಜೊತೆಗೆ ಸುರಕ್ಷತೆಗೆ ಸಂಬಂಧಿಸಿದಂತೆ ಯಾವುದೇ ಗಂಭೀರ ಪರಿಣಾಮಗಳೂ ಕಾಣಿಸಿಕೊಂಡಿಲ್ಲ ಎಂದು ಹೇಳಿದೆ.

ಕೊವಿಶೀಲ್ಡ್ ಕುರಿತ ಮಾಹಿತಿ

ಕೊವಿಶೀಲ್ಡ್ ಕುರಿತ ಮಾಹಿತಿ

ವರದಿ ಪ್ರಕಾರ ಆಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ಯೂನಿವರ್ಸಿಟಿಯ ಕೊವಿಶೀಲ್ಡ್ ದೇಹದಲ್ಲಿ ಪ್ರೊಟೆಕ್ಟಿವ್ ಪ್ರತಿಕಾಯಗಳನ್ನು ಹಾಗೂ ಟಿ ಸೆಲ್ಸ್‌ಗಳನ್ನು ಸೃಷ್ಟಿಸುತ್ತದೆ. ಇದು ದೇಹಕ್ಕೆ ಕೊರೊನಾ ವೈರಸ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಭಾರತದಲ್ಲಿ 1,600 ಭಾಗವಹಿಸುವವರ ಮೇಲೆ ಕೊನೆಯ ಹಂತದ ಮಾನವ ಪ್ರಯೋಗಗಳನ್ನು ನಡೆಸಲಾಗಿದೆ.

ಲಸಿಕೆ ಪರಿಣಾಮಕತ್ವ, ಹೋಲಿಕೆ ಹೇಗೆ?

ಲಸಿಕೆ ಪರಿಣಾಮಕತ್ವ, ಹೋಲಿಕೆ ಹೇಗೆ?

ಪಿಫೈಜರ್, ಆಸ್ಟ್ರಾಜೆನೆಕಾ ಕುರಿತು ಸಾಕಷ್ಟು ಅಧ್ಯಯನಗಳ ವರದಿ ಹೊರಬಿದ್ದಿದೆ. ಪಿಫೈಜರ್ ನಮ್ಮ ಕೊರೊನಾ ಲಸಿಕೆ ಶೇ.95ರಷ್ಟು ಪರಿಣಾಮಕಾರಿ ಎಂದು ಹೇಳುತ್ತದೆ., ಒಂದು ಡೋಸ್‌ಗೆ 1400 ರೂ,. ವೆಚ್ಚವಾಗುತ್ತದೆ ಎಂದು ತಿಳಿಸಲಾಗಿದೆ. ಇನ್ನು ಮಾಡೆರ್ನಾ ಲಸಿಕೆಯು ಶೇ.94.5ರಷ್ಟು ಸುರಕ್ಷಿತ ಎಂದು ಹೇಳಲಾಗಿದ್ದು, ಸುಮಾರು 2500 ಸಾವಿರ ರೂ.ನಷ್ಟು ವೆಚ್ಚ ತಗುಲಲಿದೆ. ಇನ್ನು ಕೊವಿಶೀಲ್ಡ್ 600-800 ರೂ.,ಗಳಲ್ಲಿ ಲಭ್ಯವಾಗಲಿದೆ ಎಂದು ಆದರ್ ಪೂನಾವಾಲಾ ತಿಳಿಸಿದ್ದಾರೆ.

ತಜ್ಞರ ಬಳಿ ಇರುವ ಈ ಪ್ರಶ್ನೆಗಳಿಗೆ ಇನ್ನೂ ಉತ್ತರವಿಲ್ಲ

ತಜ್ಞರ ಬಳಿ ಇರುವ ಈ ಪ್ರಶ್ನೆಗಳಿಗೆ ಇನ್ನೂ ಉತ್ತರವಿಲ್ಲ

ಹಾಗಾದರೆ ಈ ಎಲ್ಲಾ ಕೊರೊನಾ ಲಸಿಕೆಗಳು ಎಷ್ಟು ದಿನಗಳ ಕಾಲ ರೋಗಿಗಳ ದೇಹದಲ್ಲಿ ರೋಗ ನಿರೋಧಕ ಶಕ್ತಿ ಇರುವಂತೆ ಮಾಡುತ್ತದೆ ಎಂಬುದಕ್ಕೆ ಯಾರಿಂದಲೂ ಉತ್ತರ ದೊರೆತಿಲ್ಲ. ನಾವು ಭದ್ರತೆ ಕುರಿತು ಸ್ವಲ್ಪ ಮಾಹಿತಿಯನ್ನು ಹೊಂದಿರಬೇಕಾಗುತ್ತದೆ.

ಭಾರತೀಯರು ಯಾವಾಗ ಕೊರೊನಾ ಲಸಿಕೆ ಪಡೆಯಬಹುದು?

ಭಾರತೀಯರು ಯಾವಾಗ ಕೊರೊನಾ ಲಸಿಕೆ ಪಡೆಯಬಹುದು?

ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾವು 4 ಕೋಟಿಯಷ್ಟು ಕೊವಿಶೀಲ್ಡ್ ಲಸಿಕೆಯನ್ನು ತಯಾರಿಸಿದೆ. ಹಾಗೆಯೇ ಇದನ್ನು ಮೊದಲ ಹಂತದಲ್ಲಿ ಹಿರಿಯ ನಾಗರಿಕರು, ಕೊರೊನಾ ವಾರಿಯರ್‌ಗಳಿಗೆ ನೀಡಲಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಇದು ಏಪ್ರಿಲ್ ವೇಳೆಗೆ ಲಭ್ಯವಿರಲಿದೆ. ಒಂದೊಮ್ಮೆ AZD1222 ಲಸಿಕೆಗೆ ಒಪ್ಪಿಗೆ ದೊರೆತರೆ ಡಿಸೆಂಬರ್ ವೇಳೆಗೆ ಭಾರತದಲ್ಲಿ ತುರ್ತು ಸಂದರ್ಭದಲ್ಲಿ ಬಳಕೆ ಮಾಡಲು ಅನುಮತಿ ಸಿಗಲಿದೆ.

Recommended Video

CBIನಿಂದು ಡಿಕೆಶಿಯವರ ಬೆನ್ನು ಬಿದ್ದಿರುವುದು ರಾಜಕೀಯ ಪ್ರೇರಿತ | Oneindia Kannada

English summary
Swedish-British company AstraZeneca and the University of Oxford released information Monday on the efficacy their coronavirus vaccine, AZD1222. In India, a version of this vaccine (Covishield) is currently under testing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X