ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಾಲರ್ ಎದುರು ಕುಸಿತ ಕಂಡ ರೂಪಾಯಿ, ಇಂಧನ ಬೆಲೆ ಹೆಚ್ಚಳ ಸಾಧ್ಯತೆ

By Manjunatha
|
Google Oneindia Kannada News

ನವ ದೆಹಲಿ, ಜೂನ್ 27: ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಕಂಡಿದ್ದು, ಬುಧವಾರ ಬೆಳಿಗ್ಗೆ ಮಾರುಕಟ್ಟೆ ಪ್ರಾರಂಭವಾದಾಗ 19 ಪೈಸೆ ಕುಸಿದಿದೆ. 19 ತಿಂಗಳಿನಲ್ಲಿಯೇ ಕಂಡ ಅತಿ ದೊಡ್ಡ ಕುಸಿತ ಇದಾಗಿದೆ.

ನಿನ್ನೆ ಸಂಜೆ ಮಾರುಕಟ್ಟೆ ಮುಕ್ತಾಯವಾದಾಗ ಡಾಲರ್ ಎದುರು ರೂಪಾಯಿ ಬೆಲೆಯು 68.24 ರೂಪಾಯಿ ಇತ್ತು. ಬುದವಾರ ಬೆಳಿಗ್ಗೆ ಮಾರುಕಟ್ಟೆ ಪ್ರಾರಂಭವಾದಾಗ 68.43 ಇದೆ. ಆ ಮೂಲಕ 19 ತಿಂಗಳಿನಲ್ಲೇ ಅತಿ ದೊಡ್ಡ ಮೌಲ್ಯ ಕುಸಿತ ಉಂಟಾಯಿತು. ಡಿಸೆಂಬರ್ 2016ರಲ್ಲಿ ರೂಪಾಯಿ ಮೌಲ್ಯವು ಡಾಲರ್ ಎದುರು ಇಷ್ಟೇ ಪ್ರಮಾಣದಲ್ಲಿ ಕುಸಿದಿತ್ತು.

ರಾಜ್ಯ ಚುನಾವಣೆ ಫಲಿತಾಂಶ: ರೂಪಾಯಿ ಮೌಲ್ಯ ಕುಸಿತರಾಜ್ಯ ಚುನಾವಣೆ ಫಲಿತಾಂಶ: ರೂಪಾಯಿ ಮೌಲ್ಯ ಕುಸಿತ

ಇರಾನ್‌ ಜೊತೆಗೆ ಯಾವುದೇ ತೈಲ ವ್ಯವಹಾರಿಕ ಸಂಬಂಧವನ್ನು ಮುಂದುವರೆಸುವುದಿಲ್ಲವೆಂದು ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳು ಘೋಷಿಸಿರುವ ಕಾರಣ ಈ ಏರುಪೇರು ಕಂಡು ಬಂದಿದೆ ಎನ್ನಲಾಗಿದೆ.

Indian Rupee fall down in front of Dollar

ಡಾಲರ್ ಎದುರು ರೂಪಾಯಿಯು ಇನ್ನು 35 ಪೈಸೆ ಕುಸಿದಲ್ಲಿ ಅಂದರೆ ಡಾಲರ್ ಒಂದಕ್ಕೆ 68.85 ರೂಪಾಯಿ ಆದಲ್ಲಿ ಅದು ಸಾರ್ವಕಾಲಿಕ ಮೌಲ್ಯ ಕುಸಿತ ಎನಿಸಿಕೊಳ್ಳಲಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿರುವ ಪರಿಣಾಮ ಈಗಲೇ ಹೆಚ್ಚಿರುವ ಇಂಧನ ಬೆಲೆ ಇನ್ನಷ್ಟು ಹೆಚ್ಚು ಭೀತಿ ಇದೆ.

English summary
Indian rupee down in front of dollar on Tuesday and Wednesday. 19-month low against the US dollar as traders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X