• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಂದಿನ ವಾರದಿಂದ 90 ವಿಶೇಷ ರೈಲುಗಳ ಸಂಚಾರ

|

ನವದೆಹಲಿ, ಜುಲೈ 05 : ಸಾಮಾನ್ಯ ವೇಳಾಪಟ್ಟಿಯ ರೈಲುಗಳನ್ನು ಆಗಸ್ಟ್ 12ರ ತನಕ ಓಡಿಸುವುದಿಲ್ಲ ಎಂದು ಭಾರತೀಯ ರೈಲ್ವೆ ಹೇಳಿದೆ. ಪ್ರಸ್ತುತ ವಿವಿಧ ಮಾರ್ಗದಲ್ಲಿ 230 ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ. ಇನ್ನೂ 90 ರೈಲುಗಳನ್ನು ಓಡಿಸಲು ರೈಲ್ವೆ ಚಿಂತನೆ ನಡೆಸುತ್ತಿದೆ.

ಯಾವ-ಯಾವ ಮಾರ್ಗದಲ್ಲಿ ರೈಲು ಓಡಿಸಬೇಕು ಎಂದು ಈಗಾಗಲೇ ವರದಿ ತಯಾರು ಮಾಡಲಾಗಿದೆ. ಕೇಂದ್ರ ಗೃಹ ಇಲಾಖೆಗೆ ಅದನ್ನು ಒಪ್ಪಿಗೆಗಾಗಿ ಕಳುಹಿಸಲಾಗಿದೆ. ಒಪ್ಪಿಗೆ ಸಿಕ್ಕಿದರೆ ಮುಂದಿನ ವಾರದಲ್ಲಿಯೇ ಸಂಚಾರ ಆರಂಭವಾಗಲಿದೆ.

ಕರ್ನಾಟಕದಿಂದ 12 ಖಾಸಗಿ ರೈಲು ಸಂಚಾರ; ಮಾರ್ಗಗಳು

ಐಆರ್‌ಸಿಟಿಸಿ ಮೂಲಕ ಈ ರೈಲುಗಳಿಗೆ ಪ್ರಯಾಣದ 120 ದಿನದ ಮುಂಚಿತವಾಗಿ ಟಿಕೆಟ್ ಬುಕ್ ಮಾಡಬಹುದು ಎಂದು ರೈಲ್ವೆ ಇಲಾಖೆ ಹೇಳಿದೆ. ತತ್ಕಾಲ್ ಕೋಟಾದಲ್ಲಿ ಟಿಕೆಟ್ ಬುಕ್ ಮಾಡುವವರಿಗಾಗಿ ಕೆಲವು ಸೀಟುಗಳನ್ನು ಕಾಯ್ದಿರಿಸಲಾಗುತ್ತದೆ.

ರೈಲು ಸಂಚಾರದ ಬಗ್ಗೆ ಮಹತ್ವದ ಆದೇಶ ಪ್ರಕಟ

ಕೇಂದ್ರ ಗೃಹ ಇಲಾಖೆ, ಆರೋಗ್ಯ ಸಚಿವಾಲಯ ನೀಡಿರುವ ಮಾರ್ಗಸೂಚಿಗಳ ಅನ್ವಯವೇ ಈ ರೈಲುಗಳನ್ನು ಓಡಿಸಲಾಗುತ್ತದೆ. ಮಾರ್ಚ್‌ನಲ್ಲಿ ಲಾಕ್ ಡೌನ್ ಘೋಷಣೆಯಾದ ಬಳಿಕ ದೇಶದಲ್ಲಿ ರೈಲುಗಳ ಸಂಚಾರ ಸಂಪೂರ್ಣ ರದ್ದುಗೊಂಡಿತ್ತು.

ನೈಋತ್ಯ ರೈಲ್ವೆ 38 ಪ್ಯಾಸೆಂಜರ್ ರೈಲು ಎಕ್ಸ್‌ಪ್ರೆಸ್‌ ಆಗಿ ಬದಲಾವಣೆ

ಮೇ 12ರಿಂದ 30 ರಾಜಧಾನಿ ಎಕ್ಸ್‌ಪ್ರೆಸ್, ಜೂನ್‌ 1ರಿಂದ 200 ರೈಲುಗಳ ಸಂಚಾರವನ್ನು ಭಾರತೀಯ ರೈಲ್ವೆ ಆರಂಭಿಸಿದೆ. ಸಾಮಾನ್ಯ ವೇಳಾಪಟ್ಟಿಯ ರೈಲುಗಳು ಆಗಸ್ಟ್ 12ರ ತನಕ ದೇಶದಲ್ಲಿ ಸಂಚಾರ ನಡೆಸುವುದಿಲ್ಲ ಎಂದು ರೈಲ್ವೆ ಇಲಾಖೆ ಈಗಾಗಲೇ ಸ್ಪಷ್ಟಪಡಿಸಿದೆ.

English summary
Indian Railways will run 90 special trains from next week. Currently, 230 special trains are plying on various routes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X