ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆ.21 ರಿಂದ 20 ಜೋಡಿ ಕ್ಲೋನ್ ರೈಲುಗಳ ಸಂಚಾರ; ಮಾರ್ಗಗಳು

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 16 : ಕೆಲವು ಮಾರ್ಗದ ರೈಲುಗಳಿಗೆ ಭಾರಿ ಬೇಡಿಕೆ ಇರುವ ಹಿನ್ನಲೆಯಲ್ಲಿ ಭಾರತೀಯ ರೈಲ್ವೆ 20 ಜೋಡಿ ಕ್ಲೋನ್ ರೈಲುಗಳನ್ನು ಓಡಿಸಲಿದೆ. ಸೆ.21ರಿಂದ ಕೆಲವು ಮಾರ್ಗದಲ್ಲಿ ಮಾತ್ರ ಈ ರೈಲುಗಳು ಸಂಚಾರ ನಡೆಸಲಿವೆ.

ಭಾರತೀಯ ರೈಲ್ವೆ ಈ ಕುರಿತು ಘೋಷಣೆ ಮಾಡಿದೆ. ಈಗಾಗಲೇ ಸಂಚಾರ ನಡೆಸುತ್ತಿರುವ ವಿಶೇಷ ರೈಲುಗಳು, ಶ್ರಮಿಕ್ ರೈಲುಗಳಿಗೆ ಪರ್ಯಾಯವಾಗಿ ಈ ಕ್ಲೋನ್ ರೈಲುಗಳು ಸಂಚರಿಸಲಿವೆ. ಕರ್ನಾಟಕದಿಂದಲೂ ಕೆಲವು ಕ್ಲೋನ್ ರೈಲುಗಳು ಸಂಚಾರ ನಡೆಸಲಿವೆ.

ಧಾರವಾಡದ 130 ವರ್ಷ ಹಳೆ ಗಡಿಯಾರ ರಿಪೇರಿ ಮಾಡಿದ ರೈಲ್ವೆಧಾರವಾಡದ 130 ವರ್ಷ ಹಳೆ ಗಡಿಯಾರ ರಿಪೇರಿ ಮಾಡಿದ ರೈಲ್ವೆ

ಸೆ. 12ರಿಂದ ಭಾರತೀಯ ರೈಲ್ವೆ 40 ಜೋಡಿ ರೈಲುಗಳ ಸಂಚಾರ ಆರಂಭಿಸಿದೆ. ಆದರೆ, ಕೆಲವು ಮಾರ್ಗದ ರೈಲುಗಳಿಗೆ ಭಾರಿ ಬೇಡಿಕೆ ಇರುವ ಹಿನ್ನಲೆಯಲ್ಲಿ ಸೆಪ್ಟೆಂಬರ್ 21ರಿಂದ 20 ಜೋಡಿ ಕ್ಲೋನ್‌ಗಳನ್ನು ಓಡಿಸಲಾಗುತ್ತದೆ.

ಕರ್ನಾಟಕದಲ್ಲೂ ಓಡಲಿದೆ ಕಿಸಾನ್ ರೈಲು; ವೇಳಾಪಟ್ಟಿ ಕರ್ನಾಟಕದಲ್ಲೂ ಓಡಲಿದೆ ಕಿಸಾನ್ ರೈಲು; ವೇಳಾಪಟ್ಟಿ

ಈ ಕ್ಲೋನ್ ರೈಲುಗಳು ಅಧಿಸೂಚಿತ ಸಮಯದಲ್ಲಿ ಮಾತ್ರ ಸಂಚಾರ ನಡೆಸಲಿವೆ. ನಿಲುಗಡೆ ಸಹ ಸೀಮಿತವಾಗಿರುತ್ತದೆ. ಸಂಪೂರ್ಣವಾಗಿ ಕಾಯ್ದಿರಿಸಿದ ರೈಲುಗಳು ಇವುಗಳಾಗಿವೆ ಎಂದು ಪ್ರಕಟಣೆಯಲ್ಲಿ ರೈಲ್ವೆ ಹೇಳಿದೆ.

ಬೆಂಗಳೂರಲ್ಲಿ ರೈಲ್ವೆ ಫ್ಲಾಟ್‌ ಫಾರಂ ಟಿಕೆಟ್ 50 ರೂ.ಗೆ ಏರಿಕೆ ಬೆಂಗಳೂರಲ್ಲಿ ರೈಲ್ವೆ ಫ್ಲಾಟ್‌ ಫಾರಂ ಟಿಕೆಟ್ 50 ರೂ.ಗೆ ಏರಿಕೆ

ಕ್ಲೋನ್ ರೈಲಿನ ದರ ಎಷ್ಟು?

ಕ್ಲೋನ್ ರೈಲಿನ ದರ ಎಷ್ಟು?

19 ಕ್ಲೋನ್ ರೈಲುಗಳ ದರ ಹಮ್‌ಸಾಫರ್ ಎಕ್ಸ್‌ಪ್ರೆಸ್ ದರಕ್ಕೆ ಸಮನಾಗಿರುತ್ತದೆ. ಲಖನೌ ಮತ್ತು ದೆಹಲಿ ನಡುವಿನ ಕ್ಲೋನ್ ರೈಲಿನ ದರ ಜನಶತಾಬ್ದಿ ರೈಲಿನ ದರಕ್ಕೆ ಸಮಾನಾಗಿರುತ್ತದೆ ಎಂದು ಭಾರತೀಯ ರೈಲ್ವೆ ಹೇಳಿದೆ.

10 ದಿನಗಳ ಮುಂಗಡ ಟಿಕೆಟ್

10 ದಿನಗಳ ಮುಂಗಡ ಟಿಕೆಟ್

ಕ್ಲೋನ್ ರೈಲುಗಳಿಗೆ ಮುಂಗಡ ಟಿಕೆಟ್ ಬುಕ್ಕಿಂಗ್ ಕಾಯ್ದಿರಿಸುವ ಅವಧಿ 10 ದಿನಗಳು. ಪ್ರಸ್ತುತ ಸಂಚಾರ ನಡೆಸುತ್ತಿರುವ 310 ವಿಶೇಷ ರೈಲುಗಳಿಗೆ ಹೆಚ್ಚುವರಿಯಾಗಿ ಈ ರೈಲುಗಳು ಸಂಚಾರ ನಡೆಸಲಿವೆ. ರಾಜ್ಯಗಳ ಸಲಹೆಗಳನ್ನು ಪರಿಗಣಿಸಿ ಮಾರ್ಗಗಳನ್ನು ಅಂತಿಮಗೊಳಿಸಲಾಗಿದೆ.

ಕರ್ನಾಟಕದಲ್ಲಿಯೂ ಓಡಲಿದೆ

ಕರ್ನಾಟಕದಲ್ಲಿಯೂ ಓಡಲಿದೆ

20 ಜೋಡಿ ರೈಲುಗಳ ಪೈಕಿ ಕೆಲವು ರೈಲುಗಳು ಕರ್ನಾಟಕದಿಂದಲೂ ಸಂಚಾರ ನಡೆಸಲಿವೆ. ಬೆಂಗಳೂರು-ದಾನಾಪುರ್ ನಡುವೆ ವಾರಕ್ಕೊಮ್ಮೆ, ಯಶವಂತಪುರ-ನಿಜಾಮುದ್ದೀನ್ ನಡುವೆ ವಾರಕ್ಕೆ ಎರಡು ಬಾರಿ ಕ್ಲೋನ್ ರೈಲು ಸಂಚಾರ ನಡೆಸಲಿದೆ.

ರೈಲುಗಳ ವೇಳಾಪಟ್ಟಿ

ಭಾರತೀಯ ರೈಲ್ವೆ ಕ್ಲೋನ್ ರೈಲುಗಳು ಸಂಚಾರ ನಡೆಸುವ ಮಾರ್ಗ, ವಾರಕ್ಕೆ ಎಷ್ಟು ದಿನ?, ನಿಲ್ದಾಣಗಳ ಮಾಹಿತಿಯನ್ನು ಪ್ರಕಟಿಸಿದೆ.

English summary
Considering the huge demand for travel on specific routes ministry of railways has decided to run 20 pairs of Clone Special trains from September 21, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X