• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರಯಾಣಿಕರ ರೈಲು ಸಂಚಾರ ಆರಂಭ, ಟಿಕೆಟ್ ಬುಕ್ ಹೇಗೆ?

|

ನವದೆಹಲಿ, ಮೇ 11: ಕೊರೊನಾವೈರಸ್ ಸೋಂಕು ಹರಡದಂತೆ ಮೂರನೇ ಅವಧಿಯ ಲಾಕ್ಡೌನ್ ಜಾರಿಯಲ್ಲಿದೆ. ಈ ನಡುವೆ ಹಂತ ಹಂತವಾಗಿ ಪ್ರಯಾಣಿಕರ ರೈಲುಗಳ ಸಂಚಾರಕ್ಕೆ ಭಾರತೀಯ ರೈಲ್ವೆ ಮುಂದಾಗಿದೆ. ಮೇ 12 ರಿಂದ ಒಂದಷ್ಟು ರೈಲುಗಳು ಸಂಚಾರ ಆರಂಭಿಸಲಿವೆ.

   ಈ ಇಬ್ಬರೂ ಸಚಿವರಿಗೆ ಕೊರೊನಾ ಭಯವೇ ಇಲ್ಲ..ಇದ್ದಿದ್ರೆ ಹೀಗೆ ಮಾಡ್ತಿರ್ಲಿಲ್ಲ | Ramanagara

   ಸುಮಾರು 15 ರಾಜಧಾನಿ ಮಾರ್ಗಗಳಲ್ಲಿ ಎಲ್ಲಾ ಹವಾನಿಯಂತ್ರಿತ ಪ್ಯಾಸೆಂಜರ್ ರೈಲುಗಳು ಮೇ 12ರಿಂದ ಸಂಚಾರ ಆರಂಭಿಸಲಿವೆ. ಪ್ರಯಾಣ ದರವನ್ನು ಸೂಪರ್ ಫಾಸ್ಟ್ ರೈಲಿನ ದರದಂತೆ ನಿಗದಿ ಮಾಡಲಾಗಿದೆ.

   ವಲಸೆ ಕಾರ್ಮಿಕರಿಗೆ ಸಿಹಿ ಸುದ್ದಿ; ಶ್ರಮಿಕ್ ರೈಲಿನ ಮಾರ್ಗಸೂಚಿ ಬದಲಾವಣೆ

   ನವದೆಹಲಿಯಿಂದ ದಿಬ್ರುಘರ್, ಅಗರ್ತಲಾ, ಹೌರಾ, ಪಾಟ್ನಾ, ಬಿಲಾಸ್ ಪುರ್, ರಾಂಚಿ, ಭುವನೇಶ್ವರ್, ಸಿಕಂದರಾಬಾದ್, ಬೆಂಗಳೂರು, ಚೆನ್ನೈ, ತಿರುವನಂತಪುರಂ, ಮಡಗಾಂವ್, ಮುಂಬೈ ಸೆಂಟ್ರಲ್, ಅಹಮದಾಬಾದ್ ಹಾಗೂ ಜಮ್ಮು ತಾವಿ ನಿಲ್ದಾಣಗಳಿಗೆ ವಿಶೇಷ ರೈಲುಗಳು ಸಂಚರಿಸಲಿವೆ.

   ಶ್ರಮಿಕ ರೈಲುಗಳ ಪ್ರತಿ ಕೋಚ್ ಗಳಲ್ಲಿ ಕೇವಲ 54 ಪ್ರಯಾಣಿಕರಿಗೆ ಅನುಮತಿ ನೀಡಲಾಗಿತ್ತು. ಈ ಪ್ಯಾಸೆಂಜರ್ ರೈಲಿನಲ್ಲಿ 72 ಮಂದಿ ಪ್ರಯಾಣಿಸಬಹುದಾಗಿದೆ. ದರದಲ್ಲೂ ಯಾವುದೇ ಬದಲಾವಣೆ ಇಲ್ಲ. ಟಿಕೆಟ್ ಬುಕ್ಕಿಂಗ್ ಮಾಡಲು IRCTC ವೆಬ್ ತಾಣಕ್ಕೆ ಭೇಟಿ ನೀಡಿ, ಎಂದಿನ ಕ್ರಮದಂತೆ ಟಿಕೆಟ್ ಬುಕ್ ಮಾಡಿ..

   IRCTC ವೆಬ್ ಸೈಟ್ ನಲ್ಲಿ ಮಾತ್ರ

   IRCTC ವೆಬ್ ಸೈಟ್ ನಲ್ಲಿ ಮಾತ್ರ

   * ಮೇ 11 ರ ಸಂಜೆ 4 ಗಂಟೆಯಿಂದ ಆನ್ ಲೈನ್ ನಲ್ಲಿ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. IRCTC ವೆಬ್ ಸೈಟ್ ನಲ್ಲಿ ಮಾತ್ರ ಮುಂಗಡ ಟಿಕೆಟ್ ಬುಕ್ಕಿಂಗ್ ಲಭ್ಯವಿದೆ.

   * ರೈಲು ನಿಲ್ದಾಣಗಳಲ್ಲಿರುವ ಟಿಕೆಟ್ ಕೌಂಟರ್ ಬಂದ್ ಆಗಿರಲಿದೆ. ಪ್ಲಾಟ್ ಫಾರ್ಮ್ ಟಿಕೆಟ್ ಕೂಡಾ ನೀಡಲಾಗುವುದಿಲ್ಲ.

   IRCTC: ಒಂದೇ ಐಡಿ ಬಳಸಿ 12 ಟಿಕೆಟ್ ಬುಕ್ ಮಾಡುವುದು ಹೇಗೆ?

   ನಿಬಂಧನೆಗಳನ್ನು ತಪ್ಪದೇ ಪಾಲಿಸಬೇಕು

   ನಿಬಂಧನೆಗಳನ್ನು ತಪ್ಪದೇ ಪಾಲಿಸಬೇಕು

   * ಏಜೆಂಟ್( IRCTC ಹಾಗೂ ರೈಲ್ವೆ) ಬಳಸಿ ಟಿಕೆಟ್ ಬುಕ್ಕಿಂಗ್ ಸಾಧ್ಯವಿಲ್ಲ

   * ಟಿಕೆಟ್ ಗಳಲ್ಲಿರುವ ಏನು ಮಾಡಬೇಕು ಏನು ಮಾಡಬಾರದು(Do and Don'ts) ನಿಬಂಧನೆಗಳನ್ನು ಪಾಲಿಸಬೇಕು, ಉದಾಹರಣೆಗೆ ರೈಲು ಹೊರಡುವುದಕ್ಕೂ ಒಂದು ಗಂಟೆ ಮುಂಚಿತವಾಗಿ ನಿಲ್ದಾಣದಲ್ಲಿರಬೇಕು.

   ಕರ್ನಾಟಕ; ಒಂದೇ ದಿನ ಹೊರಟ 6 ಶ್ರಮಿಕ್ ರೈಲು, ವಲಸಿಗರು ತವರಿಗೆ

   ಮಾಸ್ಕ್ ಧರಿಸುವುದು ಎಲ್ಲರಿಗೂ ಕಡ್ಡಾಯ

   ಮಾಸ್ಕ್ ಧರಿಸುವುದು ಎಲ್ಲರಿಗೂ ಕಡ್ಡಾಯ

   ಸ್ಮಾರ್ಟ್ ಫೋನ್ ಹೊಂದಿರುವ ಪ್ರಯಾಣಿಕರು ತಮ್ಮ ಮೊಬೈಲ್ ನಲ್ಲಿ ಆರೋಗ್ಯ ಸೇತು ಅಪ್ಲಿಕೇಷನ್ ಹೊಂದಿರಬೇಕು. ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.

   ರೋಗ ಲಕ್ಷಣ (asymptomatic) ಕಾಣಿಸದ ಪ್ರಯಾಣಿಕರಿಗೆ ಮಾತ್ರ ರೈಲು ಪ್ರವೇಶಿಸಲು ಅವಕಾಶವಿರುತ್ತದೆ. ಸ್ಕ್ರೀನಿಂಗ್ ವೇಳೆ ಅನುಮಾನ ಬಂದರೆ ತಕ್ಷಣವೆ ಹೆಚ್ಚಿನ ತಪಾಸಣೆಗೆ ಕಳಿಸಲಾಗುತ್ತದೆ.

   ಐಆರ್ ಸಿಟಿಸಿ ವೆಬ್ ಸೇವೆಗೆ ಇನ್ನಷ್ಟು ಸೌಲಭ್ಯಗಳು ಸೇರ್ಪಡೆ

   ತತ್ಕಾಲ್ ಹಾಗು ಪ್ರೀಮಿಯಂ ಟಿಕೆಟ್ ಲಭ್ಯವಿಲ್ಲ

   ತತ್ಕಾಲ್ ಹಾಗು ಪ್ರೀಮಿಯಂ ಟಿಕೆಟ್ ಲಭ್ಯವಿಲ್ಲ

   ಯಾವುದೇ ಮಾರ್ಗದ ರೈಲುಗಳಿಗೆ ತತ್ಕಾಲ್ ಹಾಗು ಪ್ರೀಮಿಯಂ ಟಿಕೆಟ್ ಲಭ್ಯವಿರುವುದಿಲ್ಲ. ಕೆಲವು ನಿಲ್ದಾಣಗಳಲ್ಲಿ ರೈಲು ನಿಲುಗಡೆ ಇರಲಿದೆ. ಪ್ರಯಾಣದ ವೇಳೆ ಪ್ರಯಾಣಿಕರಿಗೆ ಹೊದಿಕೆಯನ್ನು ನೀಡಲಾಗುವುದಿಲ್ಲ. ಎಸಿ ಕೋಚ್ ಗಳಾದರೂ ಉಳಿದ ದಿನಗಳಿಗೆ ಹೋಲಿಸಿದರೆ ಈಗ ತಾಪಮಾನ ಹೆಚ್ಚಾಗಿ ಇಡಲಾಗುತ್ತದೆ. ಎಸಿ ತಾಪಮಾನ ಕುರಿತಂತೆ ಆರೋಗ್ಯ ಇಲಾಖೆ ನೀಡಿರುವ ಸೂಚನೆಗಳನ್ನು ಪಾಲಿಸಲಾಗುತ್ತದೆ.

   ಟಿಕೆಟ್ ಬುಕ್ಕಿಂಗ್ ವಿಧಾನ

   ಟಿಕೆಟ್ ಬುಕ್ಕಿಂಗ್ ವಿಧಾನ

   * ಐಆರ್‌ಸಿಟಿಸಿ ವೆಬ್‌ಸೈಟ್( www.irctc.co.in) ಗೆ ಭೇಟಿ ನಿಮ್ಮ ಖಾತೆ ಇದ್ದರೆ ಲಾಗಿನ್ ಆಗಿ

   * ಹೊಸ ಖಾತೆ ರಚಿಸಬೇಕಾದರೆ ಸೈನ್ ಅಪ್ ಕ್ಲಿಕ್ ಮಾಡಿ ಹೊಸ ಖಾತೆ ರಚಿಸಿ.

   * ಲಾಗಿನ್ ಐಡಿ ಹಾಗೂ ಪಾಸ್ ವರ್ಡ್ ನಮೂದಿಸಿ ಲಾಗಿನ್ ಆಗಿ.

   * ಆಧಾರ್ ಹಾಗೂ ಐಆರ್ ಸಿಟಿಸಿ ಖಾತೆ ಲಿಂಕ್ ಆಗಿರುವುದನ್ನು ದೃಢಪಡಿಸಿ.

   * ನಿಮ್ಮ ಪ್ರಯಾಣದ ವಿವರ ದಾಖಲಿಸಿ ಎಲ್ಲಿಂದ ಎಲ್ಲಿಗೆ ಎಂದು ಹಾಕಿ, ಟ್ರೈನ್ ಪತ್ತೆ ಹಚ್ಚಿ, ಟಿಕೆಟ್ ಬುಕ್ ಮಾಡಿ

   * ನಿಮ್ಮ ಇಮೇಲ್, ಮೊಬೈಲ್ ಫೋನ್ ಲಿಂಕ್ ಆಗಿದ್ದರೆ ಒಟಿಪಿ ಮೂಲಕ ನಿಮ್ಮ ಟಿಕೆಟ್ ಸುರಕ್ಷಿತವಾಗಲಿದೆ.

   * ಗಮನಿಸಿ, ತತ್ಕಾಲ್, ಏಜೆಂಟ್ ಟಿಕೆಟ್ ಬುಕ್ಕಿಂಗ್ ಈ ರೈಲು ಮಾರ್ಗಕ್ಕೆ ಅನ್ವಯವಾಗುವುದಿಲ್ಲ.

   English summary
   The Indian Railways is planning to gradually restart passenger train operations from May 12.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X