ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Vande Bharat Express: ದೆಹಲಿ ಜೈಪುರ ಸಂಪರ್ಕಿಸುವ ರಾಜಸ್ಥಾನದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್, ವಿವರಗಳು

|
Google Oneindia Kannada News

ಜೈಪುರ, ಜನವರಿ, 19: ರಾಜಸ್ಥಾನದಲ್ಲಿ ಶೀಘ್ರದಲ್ಲೇ ವಂದೇ ಭಾರತ್ ಎಕ್ಸ್‌ಪ್ರೆಸ್‌ ಸೇವೆ ಆರಂಭವಾಗಲಿದೆ. ವರದಿಗಳ ಪ್ರಕಾರ ಭಾರತೀಯ ರೈಲ್ವೇ ಶೀಘ್ರದಲ್ಲೇ ನವದೆಹಲಿ ಮತ್ತು ಜೈಪುರವನ್ನು ಸಂಪರ್ಕಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಯನ್ನು ಪ್ರಾರಂಭಿಸುತ್ತದೆ.

ಈ ಹೊಸ ವಂದೇ ಭಾರತ್ ರೈಲು ಸೇವೆಯಿಂದಾಗಿ ನವದೆಹಲಿ - ಜೈಪುರ ಮಾರ್ಗದಲ್ಲಿ ಕಾರ್ಯನಿರ್ವಹಿಸುವ ಇತರ ಎಕ್ಸ್‌ಪ್ರೆಸ್ ರೈಲುಗಳು ತೆಗೆದುಕೊಳ್ಳುವ ಪ್ರಸ್ತುತ ನಾಲ್ಕು ಗಂಟೆಗಳ ಸಮಯ ಅರ್ಧಕ್ಕೆ ಇಳಿಯುವ ಸಾಧ್ಯತೆಯಿದೆ.

Breaking; 3 ರಾಜ್ಯಗಳಿಗೆ ಮಧ್ಯಾಹ್ನ ಚುನಾವಣಾ ದಿನಾಂಕ ಘೋಷಣೆBreaking; 3 ರಾಜ್ಯಗಳಿಗೆ ಮಧ್ಯಾಹ್ನ ಚುನಾವಣಾ ದಿನಾಂಕ ಘೋಷಣೆ

ಇತರ ಎಕ್ಸ್‌ಪ್ರೆಸ್ ರೈಲುಗಳು ಎರಡು ನಗರಗಳನ್ನು ಸಂಪರ್ಕಿಸಲು ನಾಲ್ಕು ಗಂಟೆಗಳ ಸಮಯ ತೆಗೆದುಕೊಳ್ಳುತ್ತಿದ್ದು, ಇದರಿಂದಾಗಿ ಎರಡು ಗಂಟೆಗಳಿಗಿಂತ ಕಡಿಮೆ ಸಮಯಕ್ಕೆ ತಲುಪಬಹುದಾಗಿದೆ.

Indian Railways to operate 1st Vande Bharat Express in Rajasthan. Details

ಪ್ರಸ್ತುತ, ದೇಶದ ವಿವಿಧ ಮಾರ್ಗಗಳಲ್ಲಿ ಒಟ್ಟು ಎಂಟು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಕಾರ್ಯನಿರ್ವಹಿಸುತ್ತಿವೆ. ಇತ್ತೀಚೆಗೆ ಪ್ರಧಾನಿ ವರ್ಚುವಲ್ ಆಗಿ ಚಾಲನೆ ನೀಡಿದ ಸಿಕಂದರಾಬಾದ್ - ವಿಶಾಖಪಟ್ಟಣಂ ವಂದೇ ಭಾರತ್ ಎಕ್ಸ್‌ಪ್ರೆಸ್ ಎರಡು ತೆಲುಗು ಮಾತನಾಡುವ ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳನ್ನು ಸಂಪರ್ಕಿಸುತ್ತದೆ.

ಇದರ ಜೊತೆಗೆ ನವದೆಹಲಿ - ವಾರಣಾಸಿ, ನವದೆಹಲಿ - ಕತ್ರಾ, ಗಾಂಧಿನಗರ ಕ್ಯಾಪಿಟಲ್ - ಮುಂಬೈ, ನವದೆಹಲಿ - ಅಂಬ ಅಂಡೌರಾ, ಚೆನ್ನೈ - ಮೈಸೂರು, ಬಿಲಾಸ್‌ಪುರ - ನಾಗ್ಪುರ ಮತ್ತು ಹೌರಾ - ಹೊಸ ಜಲ್ಪೈಗುರಿ ಮಾರ್ಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಕಾರ್ಯನಿರ್ವಹಿಸುತ್ತಿವೆ. ವಂದೇ ಭಾರತ್ ರೈಲುಗಳಲ್ಲಿ ಇದುವರೆಗೆ 40 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸಿದ್ದಾರೆ.

Indian Railways to operate 1st Vande Bharat Express in Rajasthan. Details

ರೈಲ್ವೇ ಸಚಿವ ವೈಷ್ಣವ್ "ವಂದೇ ಭಾರತ್ ಅತ್ಯುತ್ತಮ ರೈಲು. ಇದು 52 ಸೆಕೆಂಡುಗಳಲ್ಲಿ 0-100 ಕಿ.ಮೀ ಪ್ರಯಾಣಿಸಬಲ್ಲದು. ಆದರೆ ವಿಶ್ವದ ಇತರ ರೈಲುಗಳು 54 ರಿಂದ 60 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ. ವಂದೇ ಭಾರತ್ ವಿನ್ಯಾಸವು ವಿಮಾನಕ್ಕಿಂತ ಉತ್ತಮವಾಗಿದ್ದು, ಇದು ಅತ್ಯಂತ ಆರಾಮದಾಯಕ ಪ್ರಯಾಣದ ಅನುಭವವನ್ನು ನೀಡುತ್ತದೆ" ಎಂದಿದ್ದಾರೆ.

ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಸ್ಥಳೀಯವಾಗಿ ಸ್ವದೇಶಿ ತಂತ್ರಜ್ಞಾನದೊಂದಿಗೆ ವಿನ್ಯಾಸಗೊಳಿಸಲಾಗಿದ್ದು, ಅತ್ಯಾಧುನಿಕ ಪ್ರಯಾಣಿಕ ಸೌಕರ್ಯಗಳನ್ನು ಹೊಂದಿದೆ. ಇದು ರೈಲು ಪ್ರಯಾಣಿಕರಿಗೆ ವೇಗವಾದ, ಹೆಚ್ಚು ಆರಾಮದಾಯಕ ಮತ್ತು ಹೆಚ್ಚು ಅನುಕೂಲಕರ ಪ್ರಯಾಣದ ಅನುಭವವನ್ನು ನೀಡುತ್ತದೆ ಎಂದು ರೈಲ್ವೇ ಹೇಳಿದೆ.

ವಂದೇ ಭಾರತ್ ಎಕ್ಸ್‌ಪ್ರೆಸ್ 14 ಎಸಿ ಚೇರ್ ಕಾರ್ ಕೋಚ್‌ಗಳು ಮತ್ತು ಎರಡು ಎಕ್ಸಿಕ್ಯೂಟಿವ್ ಎಸಿ ಚೇರ್ ಕಾರ್ ಕೋಚ್‌ಗಳನ್ನು ಹೊಂದಿದ್ದು, 1,128 ಪ್ರಯಾಣಿಕರ ಸಾಮರ್ಥ್ಯವಿದೆ. ಈ ರೈಲು ಎರಡು ನಿಲ್ದಾಣಗಳ ನಡುವೆ ವೇಗವಾಗಿ ಪ್ರಯಾಣಿಸುವ ಸೌಲಭ್ಯವನ್ನು ಒದಗಿಸುತ್ತದೆ.

English summary
Indian Railways to operate first Vande Bharat Express in Rajasthan. Details here. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X