ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಸ್ಕ್ ಧರಿಸದೆ ಇದ್ದರೆ 500 ರೂ ದಂಡ: ಭಾರತೀಯ ರೈಲ್ವೆ

|
Google Oneindia Kannada News

ನವದೆಹಲಿ, ಏಪ್ರಿಲ್ 17: ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಭಾರತೀಯ ರೈಲ್ವೆಯು, ನಿಲ್ದಾಣಗಳು ಹಾಗೂ ರೈಲುಗಳಲ್ಲಿ ಮಾಸ್ಕ್ ಧರಿಸುವ ನಿಯಮ ಉಲ್ಲಂಘಿಸುವ ಜನರಿಗೆ 500 ರೂಪಾಯಿ ದಂಡ ವಿಧಿಸುವುದಾಗಿ ಪ್ರಕಟಿಸಿದೆ.

ಅಲ್ಲದೆ, ಉಗುಳುವ ಅಥವಾ ಅದೇ ರೀತಿಯ ಕೃತ್ಯಗಳು ಕಂಡುಬಂದರೆ ತನ್ನ ಆವರಣದ ಸ್ವಚ್ಛತೆಯನ್ನು ಹಾಳುಮಾಡುವ ಚಟುವಟಿಕೆ ಎಂದು ಪರಿಗಣಿಸಿ 500 ರೂಪಾಯಿ ದಂಡ ವಿಧಿಸುವುದಾಗಿಯೂ ಪ್ರಯಾಣಿಕರಿಗೆ ರೈಲ್ವೆ ಎಚ್ಚರಿಕೆ ನೀಡಿದೆ. ಈ ನೂತನ ದಂಡ ನಿಯಮಗಳು ತಕ್ಷಣದಿಂದಲೇ ಜಾರಿಗೆ ಬರುತ್ತಿದ್ದು, ಮುಂದಿನ ಆದೇಶ ಪ್ರಕಟಿಸುವವರೆಗೂ ಆರು ತಿಂಗಳವರೆಗೆ ಚಾಲ್ತಿಯಲ್ಲಿ ಇರಲಿದೆ.

ಕೋವಿಡ್ ಪರೀಕ್ಷೆ ತಪ್ಪಿಸಿಕೊಳ್ಳಲು ಹಾರಿಬಿದ್ದು ಓಡಿದ ಜನಕೋವಿಡ್ ಪರೀಕ್ಷೆ ತಪ್ಪಿಸಿಕೊಳ್ಳಲು ಹಾರಿಬಿದ್ದು ಓಡಿದ ಜನ

ರೈಲುಗಳ ಚಲನೆಯಲ್ಲಿನ ಪ್ರಮಾಣೀಕೃತ ಕಾರ್ಯಾಚರಣೆ ಪ್ರಕ್ರಿಯೆ (ಎಸ್‌ಒಪಿ) ಉಲ್ಲೇಖಿಸಿರುವ ರೈಲ್ವೇಸ್, ರೈಲಿನ ಪ್ರವೇಶ ಮತ್ತು ಪ್ರಯಾಣದ ಅವಧಿಯಲ್ಲಿ ಎಲ್ಲ ಪ್ರಯಾಣಿಕರೂ ಮಾಸ್ಕ್‌ಗಳನ್ನು ಧರಿಸಿರುವುದು ಕಡ್ಡಾಯವಾಗಿರಲಿದೆ ಎಂದು ಸೂಚಿಸಿದೆ.

 Indian Railways To Fine Rs 500 For Not Wearing Face Masks In Stations, Trains

ಕೋವಿಡ್ ಸೋಂಕಿನ ಹೆಚ್ಚಳದ ನಡುವೆ ಭಾರತೀಯ ರೈಲುಗಳ ಸಂಚಾರದ ಸಂಬಂಧ 2020ರ ಮೇ 11ರಂದು ಎಸ್‌ಒಪಿ ಜಾರಿಗೆ ತರಲಾಗಿತ್ತು. ಅದರಲ್ಲಿ ಎಲ್ಲ ಪ್ರಯಾಣಿಕರು ರೈಲು ಪ್ರವೇಶಿಸುವುದರಿಂದ ಪ್ರಯಾಣದುದ್ದಕ್ಕೂ ಹಾಗೂ ನಂತರ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಹೇಳಲಾಗಿತ್ತು. ಮಾಸ್ಕ್ ಧರಿಸದೆ ಇರುವುದು ರೈಲ್ವೆ ಕಾಯ್ದೆಯಡಿ ಅಪರಾಧ ಎಂದು ಅದು ತಿಳಿಸಿದೆ.

English summary
Indian Railways announced that it will impose fine Rs 500 for not wearing face masks in railway stations and trains.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X