ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಯಾಣಿಕ ರೈಲುಗಳ ಸೇವೆ ಅನಿರ್ಧಿಷ್ಟಾವಧಿಗೆ ರದ್ದು!

|
Google Oneindia Kannada News

ನವದೆಹಲಿ, ಆ 11: ಪ್ರಯಾಣಿಕ ರೈಲುಗಳ ಸೇವೆ ಆರಂಭಿಸುವ, ರದ್ದುಗೊಳಿಸುವ ಕುರಿತು ಹೊಸ ಸುತ್ತೋಲೆಯನ್ನು ಭಾರತೀಯ ರೈಲ್ವೆ ಹೊರಡಿಸಿದೆ. ಆಗಸ್ಟ್ 12ರ ತನಕ ಎಲ್ಲಾ ಪ್ಯಾಸೆಂಜರ್ ರೈಲುಗಳ ಸೇವೆಯನ್ನು ರದ್ದುಗೊಳಿಸಲಾಗಿತ್ತು. ಈಗ ರೈಲು ಸೇವೆಯನ್ನು ಅನಿರ್ಧಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿದೆ.

ಎಕ್ಸ್‌ಪ್ರೆಸ್/ ಪ್ಯಾಸೆಂಜರ್/ ಸಬ್ ಅರ್ಬನ್ ರೈಲುಗಳ ಸಂಚಾರವನ್ನು ಸೆಪ್ಟೆಂಬರ್ 30ರ ತನಕ ರದ್ದುಗೊಳಿಸಲಾಗಿದೆ ಎಂಬುದು ಸುದ್ದಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. ಇದಕ್ಕೆ ಸ್ಪಷ್ಟನೆ ನೀಡುವ ರೂಪದಲ್ಲಿ ಭಾರತೀಯ ರೈಲ್ವೆ ಇಂದು ಪ್ಯಾಸೆಂಜರ್ ರೈಲು ಸ್ಥಗಿತಗೊಂಡಿರುವುದನ್ನು ಖಚಿತಪಡಿಸಿದೆ.

IRCTC ರೈಲ್ವೆ ಟಿಕೆಟ್ ಬುಕ್ಕಿಂಗ್, ಈ ಸೂಚನೆ ತಪ್ಪದೇ ಓದಿIRCTC ರೈಲ್ವೆ ಟಿಕೆಟ್ ಬುಕ್ಕಿಂಗ್, ಈ ಸೂಚನೆ ತಪ್ಪದೇ ಓದಿ

ಆದರೆ ಮೇ 11ರಂದು ಹೊರಡಿಸಿರುವ ಆದೇಶದಂತೆ ಕೆಲವು ಪ್ಯಾಸೆಂಜರ್, ವಿಶೇಷ ರೈಲುಗಳು ಸಂಚಾರ ನಡೆಸಲಿವೆ. ಮುಂಬೈ ನಗರದಲ್ಲಿ ಅಗತ್ಯ ಸೇವೆಗಳನ್ನು ಒದಗಿಸಲು ಹಲವು ವಿಶೇಷ ರೈಲುಗಳು, ಲೋಕಲ್ ರೈಲು ಸಂಚಾರ ನಡೆಸಲಿವೆ ಎಂದು ರೈಲ್ವೆ ಬೋರ್ಡ್ ಸ್ಪಷ್ಟಪಡಿಸಿದೆ. ಆದರೆ, ಸಬ್ ಅರ್ಬನ್, ಮೆಟ್ರೋ ರೈಲು ಸಂಚಾರದ ಬಗ್ಗೆ ಇನ್ನೂ ಸ್ಪಷ್ಟ ಆದೇಶ ಹೊರ ಬಂದಿಲ್ಲವಾದ್ದರಿಂದ ಈ ರೈಲುಗಳ ಸಂಚಾರ ಕೂಡಾ ಸ್ಥಗಿತವಾಗಿರಲಿದೆ. ಮೇ 1 ರಿಂದ ಜುಲೈ 9ರ ಅವಧಿಯಲ್ಲಿ 4,165 ಶ್ರಮಿಕ ರೈಲುಗಳು ಸಂಚರಿಸಿದ್ದು, 63 ಲಕ್ಷಕ್ಕೂ ಅಧಿಕ ಮಂದಿ ಪ್ರಯಾಣಿಕರು ದೇಶದ ವಿವಿಧೆಡೆ ಸಂಚರಿದ್ದಾರೆ ಎಂದು ರೈಲ್ವೆ ಬೋರ್ಡ್ ಚೇರ್ಮನ್ ವಿಕೆ ಯಾದವ್ ಹೇಳಿದ್ದಾರೆ.

Indian Railways suspends all regular passenger services indefinitely

ಕೊರೊನಾವೈರಸ್ ಸಾಂಕ್ರಾಮಿಕ ರೋಗದ ನಂತರ ರೈಲು ಪ್ರಯಾಣದಲ್ಲಿ ಕುಸಿತದ ಪರಿಣಾಮ ಪ್ರಯಾಣಿಕರ ರೈಲು ವಿಭಾಗದಲ್ಲಿ 30,000 ರಿಂದ 35,000 ಕೋಟಿ ರೂಪಾಯಿ ನಷ್ಟವಾಗಬಹುದು ಎಂದು ಅಂದಾಜಿಸಲಾಗಿದೆ. ಭಾರತೀಯ ರೈಲ್ವೆ ಕೇವಲ 230 ವಿಶೇಷ ರೈಲುಗಳನ್ನು ಮಾತ್ರ ನಿರ್ವಹಿಸುತ್ತಿದೆ. ಮಾರ್ಚ್ 25 ರಿಂದ ಪ್ಯಾಸೆಂಜರ್ ರೈಲು ಸಂಚಾರ ಸ್ಥಗಿತವಾಗಿದ್ದು, ಈ ರೈಲುಗಳ ಬುಕ್ಕಿಂಗ್ ಏಪ್ರಿಲ್ 15ಕ್ಕೆ ಬಂದ್ ಆಗಿದೆ. ಜೂನ್ 1 ರಿಂದ 30 ರಾಜಧಾನಿ ಎಸಿ ರೈಲು ಸೇರಿದಂತೆ 200 ರೈಲುಗಳು ಸಂಚಾರ ಆರಂಭಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

10 ಹೊಸ ಮಾರ್ಗದಲ್ಲಿ ರೈಲು ಓಡಿಸಲಿದೆ ನೈಋತ್ಯ ರೈಲ್ವೆ10 ಹೊಸ ಮಾರ್ಗದಲ್ಲಿ ರೈಲು ಓಡಿಸಲಿದೆ ನೈಋತ್ಯ ರೈಲ್ವೆ

ಭಾರತೀಯ ರೈಲ್ವೇಸ್ 2020-21ರಲ್ಲಿ ಸರಕು ಸಾಗಣೆಯಿಂದ 1.47 ಲಕ್ಷ ರುಪಾಯಿ, ಪ್ರಯಾಣಿಕರ ರೈಲ್ವೆ ಆದಾಯವು, 61,000 ಕೋಟಿಗೆ ಏರಿಕೆಯಾಗಲಿದೆ ಎಂದು ಬಜೆಟ್ ಅಂದಾಜಿನ ಪ್ರಕಾರ ಅಂದಾಜಿಸಲಾಗಿದೆ.

English summary
Indian Railways on Tuesday clarified that all regular passenger trains, which were earlier suspended till 12 August will remain suspended indefinitely
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X