• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಶ್ರಮಿಕ್ ವಿಶೇಷ ರೈಲು' ವಿವಾದ ಎಬ್ಬಿಸಿದ್ದು ಏಕೆ?

|

ಬೆಂಗಳೂರು, ಮೇ 04 : ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ಪ್ರಯಾಣಿಕ ರೈಲು ಸಂಚಾರ ಸ್ಥಗಿತವಾಗಿದೆ. ಭಾರತೀಯ ರೈಲ್ವೆ ವಲಸೆ ಕಾರ್ಮಿಕರನ್ನು ಕರೆದುಕೊಂಡು ಹೋಗಲು 'ಶ್ರಮಿಕ್ ವಿಶೇಷ ರೈಲು' ಓಡಿಸುತ್ತಿದೆ.

   No One Is Greater Than Nature : Kodimutt Shree | Karnataka | Oneindia Kannada

   ಶ್ರಮಿಕ್ ರೈಲಿನ ದರದ ವಿಚಾರ ದೇಶದಲ್ಲಿ ಚರ್ಚೆಗೆ ಕಾರಣವಾಗಿದೆ. "ಕಾರ್ಮಿಕರ ಹಣವನ್ನು ನಾವು ನೀಡುತ್ತೇವೆ" ಎಂದು ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೋಮವಾರ ಘೋಷಣೆ ಮಾಡಿದರು.

   ಬೆಂಗಳೂರಿನಿಂದ ವಲಸೆ ಕಾರ್ಮಿಕರನ್ನು ಹೊತ್ತುಹೊರಟ ಶ್ರಮಿಕ ರೈಲು

   ರಾಜ್ಯಗಳು ವಲಸೆ ಕಾರ್ಮಿಕರನ್ನು ಕಳುಹಿಸಲು ರೈಲಿನ ವ್ಯವಸ್ಥೆ ಬೇಕು ಎಂದು ಮನವಿ ಮಾಡಿದರೆ ಮಾತ್ರ ರೈಲ್ವೆ ಇಲಾಖೆ ರೈಲನ್ನು ಕಳಿಸಲಿದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಶ್ರಮಿಕ ರೈಲುಗಳ ಸಂಚಾರ ಆರಂಭವಾಗಿದೆ.

   ಪಿಪಿಇ ಕಿಟ್ ಉತ್ಪಾದನೆ ಆರಂಭಿಸಿದ ನೈಋತ್ಯ ರೈಲ್ವೆ

   ಭಾರತೀಯ ರೈಲ್ವೆ ಸಾಮಾಜಿಕ ಅಂತರವನ್ನು ಕಾಪಾಡಲು ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆಗೆ ಮಿತಿ ಹೇರಿದೆ. ಅಲ್ಲದೇ ಕೆಲವು ಬೋಗಿಗಳನ್ನು ಖಾಲಿಯಾಗಿ ಇಟ್ಟಿದೆ. ಇದರಿಂದ ನಷ್ಟವಾಗುತ್ತಿದ್ದರೂ ಸಹ ರೈಲುಗಳನ್ನು ಓಡಿಸುತ್ತಿದೆ.

   400 ವಿಶೇಷ ರೈಲನ್ನು ಓಡಿಸಲಿದೆ ಭಾರತೀಯ ರೈಲ್ವೆ

   ರೈಲುಗಳು ನಿಗದಿತ ನಿಲ್ದಾಣವನ್ನು ತಲುಪಿದ ಬಳಿಕ ಖಾಳಿಯಾಗಿ ವಾಪಸ್ ಆಗುತ್ತಿವೆ. ಲಾಕ್ ಡೌನ್ ಪರಿಣಾಮ ಅದರಲ್ಲಿ ಯಾರೂ ವಾಪಸ್ ಬರುತ್ತಿಲ್ಲ. ಇದರಿಂದಲೂ ರೈಲ್ವೆಗೆ ನಷ್ಟವಾಗುತ್ತಿದೆ. ಆದರೆ, ಕಾರ್ಮಿಕರಿಗೆ ವಿಧಿಸುತ್ತಿರುವ ದರದ ಬಗ್ಗೆಯೇ ಎಲ್ಲರೂ ಮಾತನಾಡುತ್ತಿದ್ದಾರೆ.

   ಶ್ರಮಿಕ್ ವಿಶೇಷ ರೈಲಿನಲ್ಲಿ ವಲಸೆ ಕಾರ್ಮಿಕರಿಗೆ ರೈಲ್ವೆ ವತಿಯಿಂದ ಆಹಾರ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಆದರೆ, ವಿರೋಧ ಪಕ್ಷಗಳು ದರವನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಟೀಕಿಸುತ್ತಿವೆ. ಸಾಮಾಜಿಕ ಜಾಲತಾಣದಲ್ಲಿಯೂ ಈ ಬಗ್ಗೆ ಚರಚೆ ನಡೆಯುತ್ತಿದೆ.

   ರಾಜ್ಯಗಳು ಶ್ರಮಿಕ್ ರೈಲಿಗಾಗಿ ಬೇಡಿಕೆ ಇಟ್ಟರೆ ಅದರ ಪ್ರಯಾಣದ ಅವಧಿ 12 ಗಂಟೆಗಳಿಗಿಂತ ಕಡಿಮೆ ಇರಬಾರದು. ಕಾರ್ಮಿಕರಿಗೆ ಒಂದು ಹೊತ್ತಿನ ಊಟವನ್ನು ರಾಜ್ಯ ಸರ್ಕಾರದ ಪರವಾಗಿಯೇ ನೀಡಬೇಕು ಮುಂತಾದ ಷರತ್ತುಗಳಿವೆ.

   ಭಾರತೀಯ ರೈಲ್ವೆ ಶ್ರಮಿಕ್ ರೈಲಿನ ಸಂಚಾರದ ಕುರಿತು ಮಾರ್ಗಸೂಚಿಯೊಂದನ್ನು ಪ್ರಕಟಿಸಿದೆ. ವಿವಿಧ ರಾಜ್ಯಗಳಿಂದ ರೈಲುಗಳು ಸಂಚಾರ ಆರಂಭಿಸಿದ್ದು, ಮೊದಲ ರೈಲು ಒಡಿಶಾ ತಲುಪಿದೆ.

   ವಿದೇಶದಲ್ಲಿ ಸಿಲುಕಿರುವವರನ್ನು ಉಚಿತವಾಗಿ ಕರೆದುಕೊಂಡು ಬರುವಾಗ, ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ನೂರಾರು ಕೋಟಿ ದೇಣಿಯನ್ನು ಭಾರತೀಯ ರೈಲ್ವೆ ನೀಡುವಾಗ ಬಡ ಕಾರ್ಮಿಕರನ್ನು ತಮ್ಮ ತವರಿಗೆ ತಲುಪಿಸಲು ಏಕೆ ಹಣ ಕೇಳಬೇಕು? ಎಂಬುದು ಪ್ರಶ್ನೆಯಾಗಿದೆ.

   English summary
   Indian Railways is running Shramik special trains keeping berths empty in each coach to maintain social distancing. Free food and bottled water is being given to migrants by railways. But train service sparked controversy.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X