ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಯಾಣಿಕರ ಗಮನಕ್ಕೆ: ಅನೇಕ ರೈಲುಗಳು ರದ್ದು, ಪರಿಷ್ಕೃತ ವೇಳಾಪಟ್ಟಿ ಇಲ್ಲಿದೆ

|
Google Oneindia Kannada News

ನವದೆಹಲಿ, ಜೂನ್ 07: ಭಾರತೀಯ ರೈಲ್ವೆಯ ಹಲವು ರೈಲುಗಳನ್ನು ರದ್ದುಪಡಿಸಲಾಗಿದ್ದು, ಕೆಲವು ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಪಿಲ್ಖಾನಿ-ಸನೇಹ್ವಾಲ್ ನ ಈಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ (ಡಿಎಫ್ಸಿಸಿಐಎಲ್) ಕಾಮಗಾರಿಗೆ ಎಲೆಕ್ಟ್ರಾನಿಕ್ ಇಂಟರ್ ಲಾಕಿಂಗ್ ಕಾಮಗಾರಿ ನಡೆಯಲಿದೆ.

ಉತ್ತರ ರೈಲ್ವೆ ಈ ಬಗ್ಗೆ ಮಾಹಿತಿ ಪ್ರಕಟಿಸಿದ್ದು, ಅಂಬಾಲ ವಿಭಾಗದ ರೈಲ್ವೆ ಸರ್ಹಿಂದ್ ಸ್ಟೇಷನ್ ನ ಇಂಟರ್ ಲಾಕಿಂಗ್ ಅಲ್ಲದ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ ಹಲವು ರೈಲುಗಳ ವೇಳಾಪಟ್ಟಿ ಬದಲಾಗಿದೆ.

Indian Railways Passengers Alert Many Trains Cancelled, Rescheduled On This Route

ಈ ಕಾಮಗಾರಿ ನಡೆಯಬೇಕಿರುವ ಹಿನ್ನೆಲೆಯಲ್ಲಿ ಜೂ.30 ವರೆಗೂ ರೈಲುಗಳ ವೇಳಾಪಟ್ಟಿಯಲ್ಲಿ ವ್ಯತ್ಯಯವಿರಲಿದೆ. ಈ ಪೈಕಿ ಕೆಲವು ರೈಲು ಮಾರ್ಗಗಳಲ್ಲಿ ರೈಲು ಸಂಚಾರ ಪೂರ್ಣ ಸ್ಥಗಿತಗೊಂಡರೆ ಇನ್ನೂ ಕೆಲವು ಭಾಗಶಃ ರದ್ದಾಗಲಿದೆ. ಮತ್ತೂ ಕೆಲವು ರೈಲುಗಳ ವೇಳಾಪಟ್ಟಿ ವ್ಯತ್ಯಯವಾಗಲಿದೆ.

ಕೋವಿಡ್-19 ಹಿನ್ನೆಲೆಯಲ್ಲಿ ರೈಲುಗಳನ್ನು ಏಪ್ರಿಲ್ ತಿಂಗಳಿನಿಂದ ರದ್ದುಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಎರಡನೇ ಅಲೆಯಲ್ಲಿ 100 ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು.

ಅಂಬಾಲಾ ವಿಭಾಗವು ಜೂನ್ 30ರವರೆಗೆ ವಿವಿಧ ಅವಧಿಗಳ ರೈಲುಗಳನ್ನು ರದ್ದುಗೊಳಿಸಿದೆ, ಮರು ನಿಗದಿಪಡಿಸಲಾಗಿದೆ.ಕೊರೊನಾ ಮೊದಲ ಹಾಗೂ ಎರಡನೇ ಅಲೆಯಲ್ಲಿ ವಿವಿಧ ರಾಜ್ಯಗಳಲ್ಲಿ ಸಿಲುಕಿಕೊಂಡ ವಲಸೆ ಕಾರ್ಮಿಕರನ್ನು ರಾಜ್ಯಕ್ಕೆ ಕರೆತರುವಲ್ಲಿ ರೈಲುಗಳು ಪ್ರಮುಖ ಪಾತ್ರವಹಿಸಿವೆ.

ಎರಡನೇ ಅಲೆಯಲ್ಲಿ ಬಸ್‌ಗಳ ವ್ಯವಸ್ಥೆ ರದ್ದುಗೊಳಿಸಲಾಗಿದ್ದರೂ, ಹಲವೆಡೆ ರೈಲುಗಳ ಸೇವೆ ಎಂದಿನಂತೆ ಇರುವ ಕಾರಣ ಅನಿವಾರ್ಯ ಕಾರಣಗಳಿಂದ ಒಂದೂರಿನಿಂದ ಮತ್ತೊಂದು ಊರಿಗೆ ತೆರಳುವವರಿಗೆ ಅನುಕೂಲವಾಗಲಿದೆ.

English summary
A host of trains run by the Indian Railways will stand cancelled till further orders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X