ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆ.1 ಪ್ರಯಾಣಿಕರಿಗೆ ಉಚಿತ ಪ್ರಯಾಣ ವಿಮೆ ಸೌಲಭ್ಯ ಇನ್ನಿಲ್ಲ

By Mahesh
|
Google Oneindia Kannada News

ನವದೆಹಲಿ, ಆಗಸ್ಟ್ 12: ಪ್ರಯಾಣಿಕರಿಗೆ ನೀಡುತ್ತಿದ್ದ ಉಚಿತ ಪ್ರಯಾಣ ವಿಮೆ ಸೌಲಭ್ಯವನ್ನು ಸೆಪ್ಟೆಂಬರ್ 01ರಿಂದ ಸ್ಥಗಿತಗೊಳಿಸಲಾಗುವುದು ಎಂದು ಭಾರತೀಯ ರೈಲ್ವೆ ಇಲಾಖೆ ಪ್ರಕಟಿಸಿದೆ.

ಸೆಪ್ಟೆಂಬರ್ 1ರಿಂದ ಐ ಆರ್ ಸಿ ಟಿ ಸಿ ಉಚಿತ ಪ್ರಯಾಣ ವಿಮೆ ಸೌಲಭ್ಯವನ್ನು ನೀಡದಿರಲು ನಿರ್ಧರಿಸಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ರೈಲ್ವೆ ಇಲಾಖೆಯಿಂದ ಹೊಸ ಸೇವೆ: 20 ನಿಮಿಷ ಮೊದಲು SMS ಅಲರ್ಟ್ರೈಲ್ವೆ ಇಲಾಖೆಯಿಂದ ಹೊಸ ಸೇವೆ: 20 ನಿಮಿಷ ಮೊದಲು SMS ಅಲರ್ಟ್

2017ರ ಡಿಸೆಂಬರ್ ನಲ್ಲಿ ಡಿಜಿಟಲ್ ವ್ಯವಹಾರಕ್ಕೆ ಉತ್ತೇಜನ ನೀಡಲು ರೈಲ್ವೆ ಇಲಾಖೆಯು ಉಚಿತ ಪ್ರಯಾಣ ವಿಮೆ ಆರಂಭಿಸಿತ್ತು.ಆದರೆ, ಈಗ ವೆಬ್ಸೈಟ್ ಹಾಗೂ ಮೊಬೈಲ್ ಆ್ಯಪ್ ಮೂಲಕ ಟಿಕೆಟ್ ಬುಕ್ ಮಾಡುವ ವೇಳೆ ಈ ಆಯ್ಕೆ ಇರುವುದಿಲ್ಲ ಎಂದು ಐಆರ್ ಸಿಟಿಸಿ ಹೆಳಿದೆ.

Indian Railways: No free travel insurance in trains from Sept 1

ಉಚಿತ ಪ್ರಯಾಣ ವಿಮೆಯಲ್ಲಿ ಪ್ರಯಾಣದ ವೇಳೆ ಸಂಭವಿಸುವ ದುರ್ಘಟನೆಯಲ್ಲಿ ಪ್ರಯಾಣಿಕ ಸಾವನ್ನಪ್ಪಿದ್ರೆ 10 ಲಕ್ಷದವರೆಗೆ ವಿಮೆ ಹಣ ಸಿಗ್ತಾಯಿತ್ತು. ಗಾಯಾಳುಗಳಿಗೆ 2 ಲಕ್ಷ ರೂಪಾಯಿ ನೀಡಲಾಗುತ್ತಿತ್ತು. ಆದರೆ, ಇನ್ಮುಂದೆ ಪ್ರಯಾಣ ವಿಮೆ ಇನ್ಮುಂದೆ ಉಚಿತವಾಗಿರುವುದಿಲ್ಲ.

92 ಪೈಸೆ ರೈಲ್ವೆ ವಿಮೆ, ನಾಮಿನಿ ಮಾಡಬೇಕಾದ ಜರೂರು 92 ಪೈಸೆ ರೈಲ್ವೆ ವಿಮೆ, ನಾಮಿನಿ ಮಾಡಬೇಕಾದ ಜರೂರು

ಹಣ ಪಾವತಿ ಮಾಡಿ ಸೌಲಭ್ಯ ಪಡೆದುಕೊಳ್ಳುವ ಬಗ್ಗೆ ಇನ್ನೂ ಮಾಹಿತಿಯಿಲ್ಲ. ಬುಕ್ ಮಾಡುವಾಗ ವಿಮೆ ಸೌಲಭ್ಯ ಬೇಕು ಅಥವಾ ಬೇಡ ಎಂಬ ಆಯ್ಕೆ ಮಾಡಬಹುದು. ಶೀಘ್ರದಲ್ಲೇ ರೈಲ್ವೆ ಇಲಾಖೆ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಿದೆ.

English summary
The Indian Railways will not provide free travel insurance to its passengers starting September 1, an official said on Saturday. A senior Railway Ministry official said that the Indian Railways Catering and Tourism Corporation (IRCTC) has decided to stop free travel insurance starting September 1 and "the option of free insurance will be optional".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X