ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸೆಂಬರ್‌ 1ರಿಂದ ಹೊಸ ವೇಳಾಪಟ್ಟಿ; 600 ರೈಲುಗಳು ರದ್ದು

|
Google Oneindia Kannada News

ನವದೆಹಲಿ, ಅಕ್ಟೋಬರ್ 15: ಲಾಕ್ ಡೌನ್ ಅವಧಿಯಲ್ಲಿ ಆದ ನಷ್ಟ ತುಂಬಿಕೊಳ್ಳಲು ಭಾರತೀಯ ರೈಲ್ವೆ ಹೊಸ ವೇಳಾಪಟ್ಟಿ ರಚನೆ ಮಾಡಿದೆ. ಡಿಸೆಂಬರ್ 1ರಿಂದ ಈ ವೇಳಾಪಟ್ಟಿ ಜಾರಿಗೆ ಬರಲಿದೆ.

ಪ್ರತಿ ವರ್ಷ 2 ಸಾವಿರ ಕೋಟಿ ಆದಾಯ ಬರುವಂತೆ ಮಾಡಲು ರೈಲ್ವೆ ಯೋಜನೆ ರೂಪಿಸುತ್ತಿದೆ. ಇದಕ್ಕಾಗಿ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುತ್ತಿದೆ. ಲಾಭವಿಲ್ಲದ ಮಾರ್ಗದಲ್ಲಿ ರೈಲು ಸಂಚಾರ ರದ್ದುಗೊಳಿಸಲಿದೆ.

ಅಕ್ಟೋಬರ್ 17ರಿಂದ ತೇಜಸ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭಅಕ್ಟೋಬರ್ 17ರಿಂದ ತೇಜಸ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭ

ಹೊಸ ವೇಳಾಪಟ್ಟಿಯ ಪ್ರಕಾರ 600 ಪ್ಯಾಸೆಂಜರ್ ರೈಲುಗಳ ಸಂಚಾರ ರದ್ದುಗೊಳ್ಳಲಿದೆ. 10,200 ನಿಲ್ದಾಣಗಳಲ್ಲಿನ ರೈಲು ನಿಲುಗಡೆ ಸ್ಥಗಿತವಾಗಲಿದೆ. 1600 ರಾತ್ರಿ ನಿಲ್ದಾಣಗಳನ್ನು ರದ್ದು ಮಾಡಲಾಗುತ್ತದೆ.

Indian Railways New Time Table Form December 1

ಇದೇ ಮೊದಲ ಬಾರಿಗೆ ಅಧಿಕ ನಷ್ಟದಲ್ಲಿನ ಮಾರ್ಗವನ್ನು ರೈಲ್ವೆ ಇಲಾಖೆ ರದ್ದು ಮಾಡುತ್ತಿದೆ. ಪ್ರತಿ ರೈಲ್ವೆ ವಲಯಗಳಿಗೆ ಸೂಚನೆ ನೀಡಿದ್ದ ಇಲಾಖೆ ಅಲ್ಲಿಂದ ವರದಿ ತರಿಸಿಕೊಂಡಿತ್ತು.

ರೈಲು ಹೊರಡುವ 5 ನಿಮಿಷ ಮುನ್ನವೂ ಟಿಕೆಟ್ ಲಭ್ಯ: ನಿಮಗೆ ತಿಳಿದಿರಬೇಕಾದ ಸಂಗತಿಗಳುರೈಲು ಹೊರಡುವ 5 ನಿಮಿಷ ಮುನ್ನವೂ ಟಿಕೆಟ್ ಲಭ್ಯ: ನಿಮಗೆ ತಿಳಿದಿರಬೇಕಾದ ಸಂಗತಿಗಳು

ಯಾವ ಮಾರ್ಗದ ರೈಲು ರದ್ದು ಮಾಡಬಹುದು, ಯಾವ ನಿಲ್ದಾಣದಲ್ಲಿ ನಿಲುಗಡೆ ಸ್ಥಗಿತಗೊಳಿಸಬಹುದು ಎಂದು ವಲಯಗಳು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿವೆ. ಹೊಸ ರೈಲು ವೇಳಾಪಟ್ಟಿ ಜಾರಿಗೆ ಬಂದ ಕೂಡಲೇ ಇದು ಅನುಷ್ಠಾನಕ್ಕೆ ಬರಲಿದೆ.

ಬೆಂಗಳೂರು-ಭುವನೇಶ್ವರ ವಿಶೇಷ ರೈಲು; ವೇಳಾಪಟ್ಟಿ ಬೆಂಗಳೂರು-ಭುವನೇಶ್ವರ ವಿಶೇಷ ರೈಲು; ವೇಳಾಪಟ್ಟಿ

ಕೋವಿಡ್ ಹರಡದಂತೆ ಲಾಕ್ ಡೌನ್ ಘೋಷಣೆ ಮಾಡಿದ ರೈಲುಗಳ ಸಂಚಾರ ಸ್ಥಗಿತವಾಗಿತ್ತು. ಮೇ ತಿಂಗಳಿನಲ್ಲಿ ಶ್ರಮಿಕ್ ವಿಶೇಷ ರೈಲುಗಳ ಸಂಚಾರವನ್ನು ರೈಲ್ವೆ ಇಲಾಖೆ ಆರಂಭಿಸಿತು.

ಸಾಮಾನ್ಯ ರೈಲುಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಬೇಡಿಕೆ ಇರುವ ಮಾರ್ಗದಲ್ಲಿ ಮಾತ್ರ ವಿಶೇಷ ರೈಲುಗಳನ್ನು ರೈಲ್ವೆ ಓಡಿಸುತ್ತಿದೆ. ಎಲ್ಲಾ ರೈಲುಗಳ ಸಂಚಾರ ಡಿಸೆಂಬರ್‌ನಲ್ಲಿ ಆರಂಭಗೊಳ್ಳುವ ನಿರೀಕ್ಷೆ ಇದೆ.

ಸೆಪ್ಟೆಂಬರ್‌ನಲ್ಲಿ ರೈಲ್ವೆ 80 ವಿಶೇಷ ರೈಲುಗಳನ್ನು ಓಡಿಸಲು ಆರಂಭಿಸಿತು. ತವರು ರಾಜ್ಯಕ್ಕೆ ಹೋಗಿರುವ ವಲಸೆ ಕಾರ್ಮಿಕರು ವಾಪಸ್ ಬರಲು ಅನುಕೂಲವಾಗುವಂತೆ ವಿಶೇಷ ರೈಲು ಸಂಚಾರ ಆರಂಭಿಸಲಾಯಿತು.

ಪ್ರಸ್ತುತ ಭಾರತೀಯ ರೈಲ್ವೆ 310 ವಿಶೇಷ ರೈಲುಗಳು ಮತ್ತು 20 ಜೋಡಿ ಕ್ಲೋನ್ ರೈಲುಗಳ ಸಂಚಾರವನ್ನು ಮಾತ್ರ ನಡೆಸುತ್ತಿವೆ. ಹಬ್ಬಗಳ ಹಿನ್ನಲೆಯಲ್ಲಿ ನವೆಂಬರ್‌ನಲ್ಲಿ 300 ವಿಶೇಷ ರೈಲು ಸಂಚಾರ ನಡೆಸಲಿದೆ.

English summary
Indian railways will run train with new time table from December 1. 600 passenger train and 10,200 stations will cancelled according to new time table.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X