ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ರೈಲ್ವೆ ಬೆಡ್‌ಶೀಟ್ ಖರೀದಿಸಿ, ಸುಖ ನಿದ್ರೆ ಮಾಡಿ

|
Google Oneindia Kannada News

ನವದೆಹಲಿ, ಡಿಸೆಂಬರ್, 10 : ರೈಲ್ವೆ ಪ್ರಯಾಣಿಕರಿಗೊಂದು ಶುಭ ಸುದ್ದಿ ಇದೆ. ರೈಲ್ವೆ ಪ್ರಯಾಣಕ್ಕೆ ಹೊರಟಿದ್ದೀರಿ, ಗಡಿ ಬಿಡಿಯಲ್ಲಿ ಬೆಡ್ ಶೀಟ್ ತರುವುದನ್ನು ಮರೆತಿರುತ್ತೀರಿ. ಆದರೆ ಇನ್ನು ಮುಂದೆ ಈ ಬಗ್ಗೆ ಯೋಚನೆ ಮಾಡಬೇಕಿಲ್ಲ. ರೈಲ್ವೆ ಇಲಾಖೆ ಇದಕ್ಕೂ ವ್ಯವಸ್ಥೆ ಮಾಡಿದೆ.

ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೋರೇಶನ್ (ಐಆರ್ ಸಿಟಿಸಿ) ಸದ್ಯವೇ 'ಟೇಕ್ ಅವೆ ಇ-ಬೆಡ್ ರೋಲ್' ಸೌಲಭ್ಯವನ್ನು ಪರಿಚಯಿಸಲು ಮುಂದಾಗಿದೆ. ಈ ಬೆಡ್ ರೋಲ್ ಗಳನ್ನು ಆನ್ ಲೈನ್ ಮುಖಾಂತರವೇ ಬುಕ್ ಮಾಡಿಕೊಳ್ಳಬಹುದು. 140 ರು. ನೀಡುವ ಮೂಲಕ ಪ್ರಯಾಣಿಕ ಈ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಿದೆ.[30 ಸೆಕೆಂಡ್ ನಲ್ಲಿ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಹೇಗೆ?]

Indian Railways IRCTC to introduce takeaway e-bedroll facility

ಏನಿದು ಬೆಡ್ ರೋಲ್?
ಬೆಡ್ ರೋಲ್ ಎರಡು ಬೆಡ್ ಶೀಡಟ್ ಮತ್ತು ಒಂದು ಪಿಲ್ಲೋ ವನ್ನು ಒಳಗೊಂಡಿರುತ್ತದೆ. 110 ರು.ಗೆ ಒಂದು ಬ್ಲಾಂಕೆಟ್ ಲಭ್ಯವಾಗುತ್ತದೆ. 250 ರು. ನೀಡಿದರೆ ಇವೆಲ್ಲವನ್ನು ಪ್ರತ್ಯೇಕವಾಗಿ ಖರೀದಿ ಮಾಡಲು ಸಾಧ್ಯವಿದೆ.[ರೈಲು ಹೊರಡುವ ಅರ್ಧ ತಾಸು ಮುನ್ನ ಬುಕ್ಕಿಂಗ್ ಸಾಧ್ಯ]

ನವದೆಹಲಿ, ಹಜರತ್ ನಿಜಾಮುದ್ದೀನ್, ಛತ್ರಪತಿ ಶಿವಾಜಿ ಟರ್ಮಿನಲ್, ಮುಂಬೈ ಸೆಂಟ್ರಲ್ ನಿಲ್ದಾಣಗಳಲ್ಲಿ ಪ್ರಾಯೋಗಿಕವಾಗಿ ಈ ಸೌಲಭ್ಯವನ್ನು ನೀಡಲು ನಿರ್ಧಾರ ಮಾಡಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಐಆರ್ ಸಿಟಿಸಿ ಚೇರ್ ಮನ್ ಎಕೆ ಮನೋಚಾ, ಬೆಡ್ ರೋಲ್ ಪಡೆದುಕೊಂಡ ಪ್ರಯಾಣಿಕ ನಂತರ ಅದನ್ನು ಮನೆಗೆ ಕೊಂಡೊಯ್ಯಬಹುದು. ಸದ್ಯ ಹವಾನಿಯಂತ್ರಿತ ಬೋಗಿಗಳಿಗೆ ಮಾತ್ರ ಬೆಡ್ ರೋಲ್ ನೀಡಲಾಗುತ್ತಿದ್ದು, ಸ್ಳಿಪರ್ ಕ್ಲಾಸ್ ಗೂ ವಿಸ್ತರಣೆ ಮಾಡಲಾಗುವುದು ಎಂದು ತಿಳಿಸಿದರು.

ಯೋಜನೆಗೆ ಜನ ಉತ್ತಮ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬ ವಿಶ್ವಾಶವಿದೆ. ಮುಂದಿನ ದಿನಗಳಲ್ಲಿ ದೇಶದ ಎಲ್ಲ ಪ್ರಮುಖ ನಿಲ್ದಾಣಗಳಿಗೂ ಯೋಜನೆ ವಿಸ್ತರಿಸಲಿದ್ದೇವೆ ಎಂದು ಮನೋಚಾ ತಿಳಿಸಿದರು.

English summary
The Indian Railway Catering and Tourism Corporation (IRCTC) will soon introduce a takeaway e-bedroll facility for passengers. Under this, bedrolls can be booked online and from food plazas/fast food units at stations set up by the corporation. Passengers could avail this facility by paying Rs 140 for two bed sheets and a pillow, Rs 110 for a blanket.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X