ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಮೀಣ ರೈಲು ನಿಲ್ದಾಣಗಳಲ್ಲಿ ವೈಫೈ ಹಾಟ್​ಸ್ಪಾಟ್

ಗ್ರಾಮೀಣ ಪ್ರದೇಶಗಳಿಗೆ ಆನ್​ಲೈನ್ ಸೇವೆ ಒದಗಿಸಿ, ಸರ್ಕಾರಿ ಯೋಜನೆಗಳ ಲಾಭ ತಲುಪಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಮುಂದಾಗಿದೆ. 500ಕ್ಕೂ ಅಧಿಕ ಗ್ರಾಮೀಣ ರೈಲು ನಿಲ್ದಾಣಗಳಲ್ಲಿ ವೈಫೈ ಹಾಟ್ ಸ್ಪಾಟ್ ಕಿಯೋಸ್ಕ್ ಸ್ಥಾಪಿಸುತ್ತಿದೆ

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 26: ಗ್ರಾಮೀಣ ಪ್ರದೇಶಗಳಿಗೆ ಆನ್​ಲೈನ್ ಸೇವೆ ಒದಗಿಸಿ, ಸರ್ಕಾರಿ ಯೋಜನೆಗಳ ಲಾಭ ತಲುಪಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಮುಂದಾಗಿದೆ. 500ಕ್ಕೂ ಅಧಿಕ ಗ್ರಾಮೀಣ ರೈಲು ನಿಲ್ದಾಣಗಳಲ್ಲಿ ವೈಫೈ ಹಾಟ್ ಸ್ಪಾಟ್ ಕಿಯೋಸ್ಕ್ ಸ್ಥಾಪಿಸುತ್ತಿದೆ.

ರೈಲ್​ವೈರ್ ಸಾಥಿ ಎಂಬ ಹೆಸರಿನ ವೈಫೈ ಕಿಯೋಸ್ಕ್ ಪಿಸಿಒ ರೀತಿಯಲ್ಲಿ ಕೆಲಸ ಮಾಡಲಿದ್ದು, ಡಿಜಿಟಿಲ್ ಇಂಡಿಯಾಗೆ ಪೂರಕವಾಗಿ ಜನರಿಗೆ ಇ-ಕಾಮರ್ಸ್, ಆನ್​ಲೈನ್ ಬ್ಯಾಂಕಿಂಗ್, ಶಾಲಾ/ವಿಶ್ವವಿದ್ಯಾಲಯ ಮತ್ತು ವಿಮೆ ಯೋಜನೆಗಳ ಬಗ್ಗೆ ಮಾಹಿತಿ, ರೈಲು ಪ್ರಯಾಣಕ್ಕೆ ಇ-ಟಿಕೆಟ್ ಸೇರಿದಂತೆ ಇನ್ನು ಹಲವು ಸೇವೆಗಳನ್ನು ನೀಡಲಿದೆ.

Indian Railways to install Wi-Fi kiosks at 500 remote stations for e-services

ಅತ್ಯಂತ ಕಡಿಮೆ ಸಂಪರ್ಕವಿರುವ ಸ್ಥಳಗಳಲ್ಲಿ ರೈಲ್ವೆ ಸಾಥಿ ಅಡಿ ಸ್ವಯಂಚಾಲಿತ ಫಾಮ್ರ್ ತುಂಬುವುದು, ಮೊಬೈಲ್ ಹಾಗೂ ಡಿಟಿಎಚ್ ರೀಚಾರ್ಜ್ ಸೇವೆಯೂ ಸಿಗಲಿದೆ. ಇದರಿಂದ ಸಂಪರ್ಕ ಕಲ್ಪಿಸುವುದಲ್ಲದೇ ನಿರುದ್ಯೋಗಿಗಳಿಗೆ ಇದರಿಂದ ಉದ್ಯೋಗ ಅವಕಾಶಗಳು ತೆರೆದುಕೊಳ್ಳಲಿವೆ ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ಮೇ ತಿಂಗಳಿನಿಂದ ಈ ಯೋಜನೆ ಜಾರಿಗೆ ಬರಲಿದ್ದು. ಗೂಗಲ್ ನೆರವಿನಿಂದ 400 ರೈಲು ನಿಲ್ದಾಣಗಳು ವೈಫೈ ಸೌಲಭ್ಯಕ್ಕೆ ಪಡೆಯಲಿದೆ.

English summary
Aiming to provide connectivity in remote areas, Railways will set up Wi-Fi hotspot kiosks at about 500 stations and help people access an array of online services, including various government schemes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X