ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂ.1 ರಿಂದ ರೈಲ್ವೆ ಪ್ರಯಾಣ ದರ ತುಸು ದುಬಾರಿ

By Mahesh
|
Google Oneindia Kannada News

ನವದೆಹಲಿ, ಮೇ.31: ರಾಜಧಾನಿ ಹಾಗೂ ಶತಾಬ್ದಿ ರೈಲುಗಳ ಟಿಕೆಟ್ ಗಳು ಪೇಪರ್ ಲೆಸ್ ಆಗುವ ಶುಭ ಸುದ್ದಿ ಬಂದ ಬೆನ್ನಲ್ಲೆ ರೈಲ್ವೆ ಪ್ರಯಾಣ ದರ ಏರಿಕೆಯಾಗುವ ಕಹಿ ಸುದ್ದಿ ಬಂದಿದೆ.

ರಾಜಧಾನಿ ಹಾಗೂ ಶತಾಬ್ದಿ ಎಕ್ಸ್ ಪ್ರೆಸ್ ಪ್ರಯಾಣಿಕರು ಟಿಕೆಟ್ ಪ್ರಿಂಟ್ ಕಾಪಿ ಹಿಡಿದು ಓಡಾಡುವ ಸಮಸ್ಯೆಗೆ ಮುಕ್ತಿ ಹಾಡಲಾಗಿದ್ದು, ಈ ಎರಡು ಜನಪ್ರಿಯ ರೈಲುಗಳ ಪ್ರಯಾಣಿಕರು ಮೊಬೈಲ್ ಟಿಕೆಟಿಂಘ್ ವ್ಯವಸ್ಥೆ ಬಳಸಬಹುದು.

ಪ್ರಾಯೋಗಿಕವಾಗಿ ಈ ವ್ಯವಸ್ಥೆಯನ್ನು ಚೆನ್ನೈನ ಎಗ್ಮೋರ್ ಹಾಗೂ ತಾಂಬರಂ ಸ್ಟೇಷನ್ ಗಳಲ್ಲಿ ಜಾರಿಗೊಳಿಸಲಾಗಿದೆ. ಭಾರತೀಯ ರೈಲ್ವೆ ವಾರ್ಷಿಕವಾಗಿ 600 ಟನ್ ಗಳಷ್ಟು ಕಾಗದವನ್ನು ಟಿಕೆಟ್ ಹಾಗೂ ರಿಸರ್ವೇಷನ್ ಚಾರ್ಟ್ ಗಾಗಿ ಬಳಸುತ್ತಿದೆ.[ಜೂ.1ರಿಂದ ಹೋಟೆಲ್, ಮೊಬೈಲ್, ಟ್ರಾವೆಲ್ ದುಬಾರಿ]

Indian Railways to hike First Class and AC passenger fares

ಪ್ರಯಾಣ ದರ ಏರಿಕೆ: ಜೂ.1ರಿಂದ ದೇಶದೆಲ್ಲೆಡೆ ಸೇವಾ ತೆರಿಗೆ ಹೆಚ್ಚಳವಾಗುತ್ತಿರುವ ವಿಷಯ ಈಗಾಗಲೇ ಗ್ರಾಹಕರಿಗೆ ಹೊರೆಯಾಗುತ್ತಿದೆ. ರೈಲ್ವೆ ಇಲಾಖೆ ಕೂಡಾ ಮೊದಲ ದರ್ಜೆ ಮತ್ತು ಎಸಿ ಪ್ರಯಾಣ ದರದಲ್ಲಿ ಜೂನ್ 1ರಿಂದ ಜಾರಿಗೆ ಬರುವಂತೆ ಶೇ0.5 ರಷ್ಟು ಏರಿಕೆ ಮಾಡಲು ಮುಂದಾಗಿದೆ.

ಸದ್ಯಕ್ಕೆ ಎಸಿ ಕ್ಲಾಸ್, ಫಸ್ಟ್ ಕ್ಲಾಸ್ ಗಳಲ್ಲಿ ಶೇ 3.7ರಷ್ಟು ಸೇವಾ ತೆರಿಗೆಯನ್ನು ವಿಧಿಸಲಾಗುತ್ತಿತ್ತು. ಜೂನ್ 1ರಿಂದ ಶೇ 4.2ರಷ್ಟು ಏರಿಕೆಯಾಗಲಿದೆ. ಹೊಸ ಪ್ರಯಾಣ ದರವು ಜೂನ್ 1 ಮತ್ತು ಮುಂದಿನ ದಿನಗಳಲ್ಲಿ ಕಾಯ್ದಿರಿಸಿದ ಟಿಕೆಟ್​ಗಳಿಗೆ ಅನ್ವಯವಾಗಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಈಗ ಎಸಿ ಪ್ರಯಾಣ ದರ 1,000 ರು ಇದ್ದರೆ, 10 ರು ಸೇವಾ ತೆರಿಗೆ ರೂಪದಲ್ಲಿ ಹೆಚ್ಚಿಗೆ ನೀಡಬೇಕಾಗುತ್ತದೆ. 2014ರ ಜೂನ್​ನಲ್ಲಿ ರೈಲ್ವೆ ಇಲಾಖೆಯು ಸರಕು ಸಾಗಾಟ ದರದಲ್ಲಿ 14.2% ಮತ್ತು ಪ್ರಯಾಣಿಕ ರೈಲು ದರದಲ್ಲಿ 6.5% ಏರಿಕೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರಯಾಣ ದರಗಳ ಏರಿಕೆ ಎಸಿ ಹಾಗೂ ಮೊದಲ ದರ್ಜೆಗಳಿಗಷ್ಟೇ ಅನ್ವಯಿಸಲಿದ್ದು, ರೈಲಿನ ಮೂಲಕ ಸಾಗಿಸಲಾಗುವ ಎಲ್ಲ ವಸ್ತುಗಳಿಗೆ ಸೇವಾ ತೆರಿಗೆ ವಿಧಿಸಲಾಗುವುದು. ಈ ಏರಿಕೆ ಅಲ್ಪವಾಗಿದ್ದು, ಕೇಂದ್ರದ ಸಾಮಾನ್ಯ ಬಜೆಟ್ ನಲ್ಲಿ ನೀಡಿದ ಆದೇಶದಂತೆ ಬೆಲೆ ಏರಿಕೆ ಅನ್ವಯವಾಗುತ್ತಿದೆ ಎಂದು ರೈಲ್ವೆ ಇಲಾಖೆ ಪ್ರಕಟಿಸಿದೆ.

English summary
Indian Railways to hike First Class and AC passenger fares. Fares for First Class and AC classes in passenger trains besides freight charges will go up by 0.5 per cent from June 1 as new service tax will come into effect.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X