ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

166 ವರ್ಷದ ಇತಿಹಾಸದಲ್ಲಿಯೇ ವಿಶಿಷ್ಟ ಸಾಧನೆ ಮಾಡಿದ ಭಾರತೀಯ ರೈಲ್ವೆ

|
Google Oneindia Kannada News

ನವದೆಹಲಿ, ಡಿಸೆಂಬರ್ 26: ಭಾರತೀಯ ರೈಲ್ವೆಯು ತನ್ನ ಕಾರ್ಯಾಚರಣೆ ಆರಂಭಿಸಿದ 166 ವರ್ಷಗಳಲ್ಲಿಯೇ 2019ರಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ಒಂದೂವರೆ ಶತಮಾನಕ್ಕೂ ಹೆಚ್ಚು ಅವಧಿಯಲ್ಲಿ ಮೊದಲ ಬಾರಿಗೆ ಈ ವರ್ಷ ಯಾವುದೇ ಪ್ರಯಾಣಿಕರ ಸಾವು ವರದಿಯಾಗಿಲ್ಲ. ಹೀಗಾಗಿ 2019, ಭಾರತೀಯ ರೈಲ್ವೆಯ ಇತಿಹಾಸದಲ್ಲಿಯೇ ಅತ್ಯಂತ ಸುರಕ್ಷಿತ ವರ್ಷ ಎನಿಸಿದೆ.

ರೈಲು ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿದ ಐಆರ್‌ಸಿಟಿಸಿರೈಲು ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿದ ಐಆರ್‌ಸಿಟಿಸಿ

2018-19ರ ಅವಧಿಯಲ್ಲಿ ಭಾರತೀಯ ರೈಲ್ವೆಯಲ್ಲಿ ಸಂಭವಿಸಿದ ಅಪಘಾತ ಸಂಬಂಧಿತ ಪ್ರಯಾಣಿಕರ ಸಂಖ್ಯೆ ಶೂನ್ಯ!. ಇದು ಮುಖಾಮುಖಿ ಡಿಕ್ಕಿ, ರೈಲಿನಲ್ಲಿ ಬೆಂಕಿ ಆಕಸ್ಮಿಕ, ಲೆವೆಲ್ ಕ್ರಾಸಿಂಗ್ ಅಪಘಾತಗಳು, ಹಳಿ ತಪ್ಪುವಿಕೆಯಂತಹ ಸಾಂದರ್ಭಿಕ ಅಪಘಾತಗಳನ್ನು ಒಳಗೊಂಡಿದೆ. ಈ ರೀತಿಯ ಅಪಘಾತಗಳ ಪ್ರಮಾಣ ಕಳೆದ 38 ವರ್ಷಗಳಲ್ಲಿ ಶೇ 95ರಷ್ಟು ಕಡಿಮೆಯಾಗಿದೆ.

ರೈಲ್ವೆ ಇಲಾಖೆಯಿಂದ ಪ್ರಮುಖ ನಿರ್ಧಾರ: ವಿವಿಧ ವಿಭಾಗಗಳ ವಿಲೀನರೈಲ್ವೆ ಇಲಾಖೆಯಿಂದ ಪ್ರಮುಖ ನಿರ್ಧಾರ: ವಿವಿಧ ವಿಭಾಗಗಳ ವಿಲೀನ

2017-18ನೇ ಸಾಲಿನಲ್ಲಿ ಒಟ್ಟು 73 ರೈಲು ಅಪಘಾತಗಳು ವರದಿಯಾಗಿದ್ದವು. 2018-19ನೇ ಸಾಲಿಗೆ ಅದರ ಪ್ರಮಾಣ 59ಕ್ಕೆ ಇಳಿದಿದೆ. ಶೇಕಡಾವಾರು ಪ್ರಮಾಣದಲ್ಲಿ ಕೂಡ ರೈಲು ಅಪಘಾತದಲ್ಲಿ ಭಾರಿ ಇಳಿಕೆಯಾಗಿದೆ. ಪ್ರತಿ ಲಕ್ಷ ಕಿ.ಮೀ.ಗೆ ಸಂಭವಿಸುತ್ತಿದ್ದ ಅಪಘಾತದ ಪ್ರಮಾಣವು 2018-19ರಲ್ಲಿ ಶೇ 0.06ಕ್ಕೆ ತಗ್ಗಿದೆ.

Indian Railways First Time In 166 Years Reported No deaths In 2019

ರೈಲು ಅಪಘಾತಗಳ ಪ್ರಮಾಣ ಕಳೆದ ಕೆಲವು ದಶಕಗಳಲ್ಲಿ ಗಣನೀಯವಾಗಿ ಇಳಿಕೆಯಾದ ಕೆಲವು ಅಂಕಿ ಅಂಶ ಇಲ್ಲಿದೆ.

* 1960-61ರಲ್ಲಿ 2,131 ರೈಲುಗಳ ಅಪಘಾತ.

* 1970-71ರಲ್ಲಿ 840 ರೈಲು ಅಪಘಾತ

* 1980-81ರಲ್ಲಿ 1,013 ರೈಲು ಅಪಘಾತ

* 1990-91ರಲ್ಲಿ 532 ರೈಲು ಅಪಘಾತ

* 2010-11ರಲ್ಲಿ 141 ರೈಲು ಅಪಘಾತ

* 1990-95ರ ಅವಧಿಯಲ್ಲಿ 500 ರೈಲು ಅಪಘಾತಗಳು ಸಂಭವಿಸಿದ್ದು, ಇದರಲ್ಲಿ 2,400 ಸಾವು ನೋವುಗಳಾಗಿದ್ದವು. 4,300 ಮಂದಿ ಗಾಯಗೊಂಡಿದ್ದವು.

* 2013-18ರ ಅವಧಿಯಲ್ಲಿ ಪ್ರತಿ ವರ್ಷ ರೈಲು ಅಪಘಾತ ಪ್ರಮಾಣ ಸರಾಸರಿ 110ರಷ್ಟಿತ್ತು. ಈ ಅವಧಿಯಲ್ಲಿ 990 ಮಂದಿ ಸತ್ತಿದ್ದರೆ, 1,500 ಮಂದಿ ಗಾಯಗೊಂಡಿದ್ದರು.

English summary
First time in the Indian Railways history no accident deaths were reported in 2018-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X