• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇಶದ 9 ರೈಲ್ವೆ ನಿಲ್ದಾಣಗಳಲ್ಲಿ 2670 ಕೋವಿಡ್‌ ಕೇರ್ ಹಾಸಿಗೆಗಳ ಸಿದ್ಧತೆ

|
Google Oneindia Kannada News

ನವದೆಹಲಿ, ಏಪ್ರಿಲ್ 27: ದೇಶದಲ್ಲಿ ನಿತ್ಯ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ, ದಿನವೂ 3 ಲಕ್ಷಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿವೆ.

ಇರುವ ಆಸ್ಪತ್ರೆಗಳ ಹಾಸಿಗೆಗಳು ಸಾಲುತ್ತಿಲ್ಲ, ಹೊಸಹೊಸ ಕೋವಿಡ್ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಇದರ ಮಧ್ಯೆಯೇ ಭಾರತೀಯ ರೈಲ್ವೆಯು ಸಹಾಯಕ್ಕೆ ನಿಂತಿದೆ.
9 ನಿಲ್ದಾಣಗಳಲ್ಲಿ 2670 ಕೋವಿಡ್ ಕೇರ್ ಹಾಸಿಗೆಗಳನ್ನು ನಿರ್ಮಿಸುವುದಾಗಿ ಭಾರತೀಯ ರೈಲ್ವೆ ತಿಳಿಸಿದೆ.

ಏಪ್ರಿಲ್ 26; ಭಾರತದಲ್ಲಿ ಮೂರೂವರೆ ಲಕ್ಷ ಮೀರಿದ ಕೊರೊನಾ ಪ್ರಕರಣಏಪ್ರಿಲ್ 26; ಭಾರತದಲ್ಲಿ ಮೂರೂವರೆ ಲಕ್ಷ ಮೀರಿದ ಕೊರೊನಾ ಪ್ರಕರಣ

ದೆಹಲಿ, ಉತ್ತರ ಪ್ರದೇಶ, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದ ರೈಲ್ವೆ ನಿಲ್ದಾಣಗಳಲ್ಲಿ ಸಿದ್ಧತೆ ನಡೆಸಲಾಗುತ್ತಿದೆ. ರಾಜ್ಯ ಸರ್ಕಾರಗಳು 1200 ಹಾಸಿಗೆಗಳಿರುವ 75 ಬೋಗಿಗಳನ್ನು ಕೋವಿಡ್ ಕೇರ್ ಕೇಂದ್ರವಾಗಿ ಅಭಿವೃದ್ಧಿಪಡಿಸಬೇಕು ಎಂದು ಮನವಿ ಮಾಡಿವೆ.

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3,52,991 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಒಂದೇ ದಿನ 2812 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 2,19,272 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯ ಹೆಲ್ತ್‌ ಬುಲೆಟಿನ್ ಬಿಡುಗಡೆ ಮಾಡಿದೆ. ಕಳೆದ 24 ಗಂಟೆಗಳಲ್ಲಿ ದಾಖಲಾದ ಈ ಪ್ರಕರಣಗಳೊಂದಿಗೆ ದೇಶದಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 1,73,13,163ಕ್ಕೆ ಏರಿಕೆಯಾಗಿದೆ.

ದೇಶದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 28,13,658 ಆಗಿದೆ. ಭಾರತ; 24 ಗಂಟೆಯಲ್ಲಿ 3,49,691 ಹೊಸ ಕೋವಿಡ್ ಪ್ರಕರಣ ದಾಖಲು ದೇಶದಲ್ಲಿ ಇದುವರೆಗೂ ಕೊರೊನಾ ಸೋಂಕಿನಿಂದ 1,43,04,382 ಮಂದಿ ಗುಣಮುಖರಾಗಿದ್ದಾರೆ. 1,95,123 ಮಂದಿ ಮೃತಪಟ್ಟಿದ್ದಾರೆ. ಜನವರಿ 16ರಿಂದ ಏಪ್ರಿಲ್ 25ರವರೆಗೆ 14,19,11,223 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ.

English summary
Stepping up in the times of a crisis like always, the Indian Railways has deployed 2,670 Covid Care beds at nine railway stations across Delhi, Uttar Pradesh, Madhya Pradesh, and Maharashtra, an official statement said on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X