• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೈಲು ಪ್ರಯಾಣಿಕರಿಗೆ ಒಂದು ಸೌಲಭ್ಯ ಕಡಿತಗೊಳಿಸಿದ ಇಲಾಖೆ

|

ನವದೆಹಲಿ, ಮಾರ್ಚ್ 30: ಇನ್ನು ಮುಂದೆ ರೈಲ್ವೆ ಪ್ರಯಾಣಿಕರು ರಾತ್ರಿ ಪ್ರಯಾಣದ ವೇಳೆಯಲ್ಲಿ ಇನ್ನು ಮುಂದೆ ರೈಲು ಬೋಗಿಗಳಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ಬಳಸಲು ಸಾಧ್ಯವಾಗುವುದಿಲ್ಲ. ಅಗ್ನಿ ಅನಾಹುತಗಳನ್ನು ತಡೆಯುವ ಸಲುವಾಗಿ ಭಾರತೀಯ ರೈಲ್ವೆ, ಮೊಬೈಲ್ ಚಾರ್ಜಿಂಗ್ ಸೌಲಭ್ಯಗಳ ಮೇಲೆ ನಿರ್ಬಂಧ ವಿಧಿಸಲಿದೆ.

ಉತ್ತರಾಖಂಡದ ಕನ್ಸಾರೊ ಸಮೀಪ ಮಾರ್ಚ್ 13ರಂದು ದೆಹಲಿ-ಡೆಹರಾಡೂನ್ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನ ಒಂದು ಕೋಚ್‌ನಲ್ಲಿ ಹೊತ್ತಿಕೊಂಡ ಬೆಂಕಿ ಬಳಿಕ ಏಳು ಕೋಚ್‌ಗೆ ಆವರಿಸಿತ್ತು. ಈ ಘಟನೆಯ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ಅಲ್ಲದೆ ರೈಲುಗಳಲ್ಲಿ ಧೂಮಪಾನಕ್ಕೆ ಕಡಿವಾಣ ಹಾಕಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಪ್ರಸ್ತುತ ರೈಲ್ವೆ ಕಾಯ್ದೆಯ ಸೆಕ್ಷನ್ 167ರ ಅಡಿ, ರೈಲಿನೊಳಗೆ ಧೂಮಪಾನ ಮಾಡುವವರಿಗೆ ವಿವಿಧ ದಂಡ ರೂಪದ ಶಿಕ್ಷೆಗಳನ್ನು ವಿಧಿಸಲಾಗುತ್ತಿದೆ. ಈ ಅಪರಾಧದ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸುವ ಪ್ರಸ್ತಾವವನ್ನು ಪರಿಗಣಿಸಲಾಗುತ್ತಿದೆ. ಮುಂದೆ ಓದಿ.

ಧೂಮಪಾನಕ್ಕೆ ಕಠಿಣ ಶಿಕ್ಷೆ

ಧೂಮಪಾನಕ್ಕೆ ಕಠಿಣ ಶಿಕ್ಷೆ

ರೈಲಿನ ಒಳಗೆ ಧೂಮಪಾನ ಮಾಡುತ್ತಿರುವುದು ಕಂಡುಬಂದರೆ 100 ರೂ. ದಂಡ ವಿಧಿಸಲಾಗುತ್ತಿದೆ. 'ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ವಿಚ್ ಆಫ್ ಮಾಡುವುದರ ಜತೆಗೆ ರೈಲಿನೊಳಗೆ ಧೂಮಪಾನ ಮಾಡುವವರನ್ನು ಹಿಡಿದು ಅವರಿಗೆ ಭಾರಿ ದಂಡದ ಜತೆಗೆ ಸಾರ್ವಜನಿಕ ಆಸ್ತಿ ಹಾನಿಮಾಡಿದ್ದಕ್ಕಾಗಿ ಬಂಧಿಸುವ ಶಿಕ್ಷೆಯನ್ನೂ ನೀಡಲು ಚಿಂತಿಸಲಾಗುತ್ತಿದೆ' ಎಂದು ಭಾರತೀಯ ರೈಲ್ವೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಂಗಳೂರು ಮೂಲಸೌಕರ್ಯ ಯೋಜನೆಗಳಿಗೆ ಶಾರ್ಟ್ ಬ್ರೇಕ್ಬೆಂಗಳೂರು ಮೂಲಸೌಕರ್ಯ ಯೋಜನೆಗಳಿಗೆ ಶಾರ್ಟ್ ಬ್ರೇಕ್

ರಾತ್ರಿಯಿಂದ ಬೆಳಗಿನವರೆಗೆ

ರಾತ್ರಿಯಿಂದ ಬೆಳಗಿನವರೆಗೆ

'ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು ರೈಲು ಕೋಚ್‌ಗಳಲ್ಲಿನ ಚಾರ್ಜಿಂಗ್ ಪಾಯಿಂಟ್‌ಗಳನ್ನು ರಾತ್ರಿ 11 ರಿಂದ ಬೆಳಿಗ್ಗೆ 5ರವರೆಗೆ ಆರಿಸುವಂತೆ ನಿರ್ಧರಿಸಲಾಗಿದೆ' ಎಂದು ಪಶ್ಚಿಮ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಸಮಿತ್ ಠಾಕೂರ್ ತಿಳಿಸಿದ್ದಾರೆ.

ಚಾರ್ಜಿಂಗ್ ಕುರಿತು ದೂರು

ಚಾರ್ಜಿಂಗ್ ಕುರಿತು ದೂರು

ರಾತ್ರಿ ವೇಳೆ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್‌ಗಳನ್ನು ಚಾರ್ಜ್ ಮಾಡುವ ಕಾರಣದಿಂದ ತಮಗೆ ತೊಂದರೆಯಾಗುತ್ತಿದೆ ಎಂದು ಪ್ರಯಾಣಿಕರಿಂದ ಹಲವು ದೂರುಗಳು ಬಂದಿವೆ. ಪ್ರತಿ ಟ್ರಿಪ್‌ನಲ್ಲಿಯೂ ಎರಡು ಅಥವಾ ಮೂರು ಮೌಖಿಕ ದೂರುಗಳು ಬರುತ್ತಿವೆ ಎಂದು ಭಾರತೀಯ ರೈಲ್ವೆಯ ಟಿಕೆಟ್ ಪರಿಶೀಲನಾ ಸಿಬ್ಬಂದಿ ಹೇಳಿದ್ದಾರೆ.

ಹುಬ್ಬಳ್ಳಿ-ಬೆಂಗಳೂರು ನಡುವೆ ಸೂಪರ್ ಫಾಸ್ಟ್ ರೈಲು ಸಂಚಾರಹುಬ್ಬಳ್ಳಿ-ಬೆಂಗಳೂರು ನಡುವೆ ಸೂಪರ್ ಫಾಸ್ಟ್ ರೈಲು ಸಂಚಾರ

  CD ವಿಚಾರವಾಗಿ ಪ್ರಶ್ನೆ ಮಾಡೋದೇ ತಪ್ಪಾ ! | Mithun Rai | Oneindia Kannada
  ಪ್ರಯಾಣಿಕರ ಆಕ್ಷೇಪ

  ಪ್ರಯಾಣಿಕರ ಆಕ್ಷೇಪ

  'ರಾತ್ರಿ ವೇಳೆ ಚಾರ್ಜಿಂಗ್ ಪಾಯಿಂಟ್‌ಗಳನ್ನು ಆರಿಸಿ ಇಡುವಂತೆ ರೈಲ್ವೆಯು ಎಸಿ ಮೆಕ್ಯಾನಿಕ್ ಸೇರಿದಂತೆ ತನ್ನ ಸಿಬ್ಬಂದಿಗೆ ಸೂಚನೆ ನೀಡಿದೆ. ಅದಲ್ಲದೆ ಅಧಿಕಾರಿಗಳು ರೈಲ್ವೆ ಬೋಗಿಗಳಲ್ಲಿ ದಿಢೀರ್ ತಪಾಸಣೆಗಳನ್ನು ನಡೆಸಲಿದ್ದಾರೆ. ಯಾವುದೇ ಲೋಪಗಳು ಕಂಡುಬಂದರೆ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಿದ್ದಾರೆ' ಎಂದು ತಿಳಿಸಿದ್ದಾರೆ.

  ಆದರೆ ಈ ನಿರ್ಧಾರಕ್ಕೆ ಪ್ರಯಾಣಿಕ ಹಕ್ಕುಗಳ ಹೋರಾಟಗಾರರಿಂದ ಆಕ್ಷೇಪ ವ್ಯಕ್ತವಾಗಿದೆ, ಪ್ರಯಾಣಿಕರಿಗೆ ಸೌಲಭ್ಯಗಳನ್ನು ಹೆಚ್ಚಿಸುವ ಬದಲು ವಿವಿಧ ನೆಪಗಳನ್ನು ಹೇಳಿ ಇರುವ ಸೌಲಭ್ಯಗಳನ್ನೇ ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಲಾಗಿದೆ.

  English summary
  The Indian Railways has decided to restrict the use of charging points in train coaches during night hours.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X