ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆ ಇಲಾಖೆಯಿಂದ ಪ್ರಮುಖ ನಿರ್ಧಾರ: ವಿವಿಧ ವಿಭಾಗಗಳ ವಿಲೀನ

|
Google Oneindia Kannada News

ನವದೆಹಲಿ, ಡಿಸೆಂಬರ್ 24: ವಿವಿಧ ಇಲಾಖೆಗಳ ನಡುವಿನ ಗುದ್ದಾಟ ಮತ್ತು ಅಸಹಕಾರದ ಸಮಸ್ಯೆಗಳನ್ನು ಗಮನಿಸಿರುವ ಭಾರತೀಯ ರೈಲ್ವೆ ತನ್ನ ಎಲ್ಲ ವಿಭಾಗಗಳನ್ನೂ ಒಂದೇ ಸೂರಿನಡಿ ವಿಲೀನಗೊಳಿಸುವ ಮತ್ತು ಸುಧಾರಣೆ ಮಾಡುವ ನಿರ್ಧಾರವನ್ನು ಕೊನೆಗೂ ತೆಗೆದುಕೊಂಡಿದೆ. ವಿಭಾಗಗಳ ಈ ವಿಲೀನ ಪ್ರಕ್ರಿಯೆಯಿಂದ ಆರೋಗ್ಯ ಮತ್ತು ಭದ್ರತಾ ವಿಭಾಗಗಳನ್ನು ಹೊರತಾಗಿಸಿದೆ.

ಭಾರತೀಯ ರೈಲ್ವೆಯು ಈ ನಿರ್ಧಾರದಿಂದ 'ಭಾರತೀಯ ರೈಲ್ವೆ ಸೇವೆ' ಎಂಬ ಏಕೈಕ ವಿಭಾಗವನ್ನು ಹೊಂದಲಿದೆ. ಇದುವರೆಗೂ ಎಂಜಿನಿಯರಿಂಗ್, ಸಂಚಾರ, ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಿಕಲ್ ಸೇರಿದಂತೆ ಎಂಟು ವಿವಿಧ ಸೇವಾ ವಿಭಾಗಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿವೆ.

ದಂಗೆಕೋರರಿಂದ ಪರಿಹಾರ ವಸೂಲಿಗೆ ರೈಲ್ವೆ ಇಲಾಖೆಯ ಕಾನೂನು ಹೋರಾಟದಂಗೆಕೋರರಿಂದ ಪರಿಹಾರ ವಸೂಲಿಗೆ ರೈಲ್ವೆ ಇಲಾಖೆಯ ಕಾನೂನು ಹೋರಾಟ

ಈ ಹೊಸ ವಿಲೀನ ನಿರ್ಧಾರದೊಳಗೆ ರೈಲ್ವೆ ರಕ್ಷಣಾ ದಳ ಮತ್ತು ವೈದ್ಯಕೀಯ ಸೇವಾ ಇಲಾಖೆಗಳಲ್ಲಿ ಯಾವುದೇ ಬದಲಾವಣೆಗಳು ಆಗುವುದಿಲ್ಲ. ಈ ನಿರ್ಧಾರವನ್ನು ಕೇಂದ್ರ ಸಂಪುಟದ ಅನುಮೋದನೆಗೆ ಕಳುಹಿಸಲಾಗಿದೆ.

Indian Railways Decided To Merge All Departments Into One

ರೈಲ್ವೆ ಬಜೆಟ್‌ಅನ್ನು ಕೇಂದ್ರ ಬಜೆಟ್ ಜತೆ ವಿಲೀನಗೊಳಿಸಿದ ಬಳಿಕ, ವಿವಿಧ ವಿಭಾಗಗಳ ವಿಲೀನವು ರೈಲ್ವೆ ಇಲಾಖೆಯಲ್ಲಿನ ಬ್ರಿಟಿಷರ ಕಾಲದ ಪದ್ಧತಿಯಿಂದ ಬಹು ದೊಡ್ಡ ಬದಾವಣೆಯ ಪ್ರಕ್ರಿಯೆಯಾಗಿದೆ.

ಇದರ ಜತೆಗೆ ರೈಲ್ವೆ ಮಂಡಳಿಯಲ್ಲಿಯೂ ಬದಲಾವಣೆ ತರಲಾಗುತ್ತಿದೆ. ರೈಲ್ವೆ ಮಂಡಳಿಯು ಪ್ರಸ್ತುತ ಸಂಚಾರ, ರೋಲಿಂಗ್ ಸ್ಟಾಕ್, ಟ್ರ್ಯಾಕ್ಷನ್ ಮತ್ತು ಎಂಜಿನಿಯರ್ ಮುಂತಾದವುಗಳಿಗಾಗಿ ಒಟ್ಟು ಎಂಟು ಸದಸ್ಯರನ್ನು ಹೊಂದಿತ್ತು. ಈ ಸದಸ್ಯರ ಸಂಖ್ಯೆಯನ್ನು ಐದಕ್ಕೆ ಇಳಿಸಲಾಗಿದೆ. ಇನ್ನು ಮುಂದೆ ಕಾರ್ಯಾಚರಣೆ, ಬಿಜಿನೆಸ್ ಅಭಿವೃದ್ಧಿ, ಮಾನ ಸಂಪನ್ಮೂಲ, ಮೂಲಸೌಕರ್ಯ ಮತ್ತು ಹಣಕಾಸು ಸದಸ್ಯರನ್ನು ಮಾತ್ರ ಮಂಡಳಿ ಹೊಂದಿರಲಿದೆ.

ಕೋಲಾರ - ವೈಟ್ ಫೀಲ್ಡ್ ಡೆಮು ವಿಶೇಷ ರೈಲು ಆರಂಭಕೋಲಾರ - ವೈಟ್ ಫೀಲ್ಡ್ ಡೆಮು ವಿಶೇಷ ರೈಲು ಆರಂಭ

ರೈಲ್ವೆ ಮಂಡಳಿಯ ಅಧ್ಯಕ್ಷ ಸ್ಥಾನವು ಮುಂದುವರಿಯಲಿದ್ದರೂ, ಇಲಾಖೆಯಿಂದ ಹೊರಗಿರುವ ನಾಗರಿಕ ಸೇವೆ ಅಥವಾ ಮಾರುಕಟ್ಟೆಯ ಪರಿಣತರು ಈ ಸ್ಥಾನದಲ್ಲಿ ಕೂರುವ ಸಾಧ್ಯತೆ ಇದೆ. ಆದರೆ ವಿವಿಧ ವಿಭಾಗಗಳನ್ನು ಒಂದೇ ವೇದಿಕೆಯಡಿ ವಿಲೀನಗೊಳಿಸುವುದರಿಂದ ಇಲಾಖೆಯ ಪರಿಣಾಮಕಾರಿ ಕಾರ್ಯನಿರ್ವಹಣೆಯ ಅವಕಾಶದ ಬಗ್ಗೆ ಅನೇಕರು ಪ್ರಶ್ನೆ ಎತ್ತಿದ್ದಾರೆ.

ಬೆಂಗಳೂರಿಗೆ ಸರಕು ಸಾಗಣೆ; ನೈಋತ್ಯ ರೈಲ್ವೆ ದಿಟ್ಟ ಹೆಜ್ಜೆಬೆಂಗಳೂರಿಗೆ ಸರಕು ಸಾಗಣೆ; ನೈಋತ್ಯ ರೈಲ್ವೆ ದಿಟ್ಟ ಹೆಜ್ಜೆ

ಎರಡು ವಿಭಿನ್ನ ರೀತಿಯ ವಿಭಾಗಗಳನ್ನು ಹೇಗೆ ವಿಲೀನಗೊಳಿಸಲು ಸಾಧ್ಯ? ಇದರಿಂದ ಉದ್ಯೋಗಿಗಳ ಭವಿಷ್ಯಕ್ಕೆ ಸಂಚಕಾರ ಎದುರಾಗಲಿದೆಯೇ? ಎಂಜಿನಿಯರಿಂಗ್, ಮೆಕ್ಯಾನಿಕಲ್, ವಿದ್ಯನ್ಮಾನ ಘಟಕಗಳಲ್ಲಿನ ಸಂಚಾರ, ಅಕೌಂಟ್ಸ್, ಸಿಬ್ಬಂದಿ ಸೇವೆಗಳಿಗೆ ಅನನುಕೂಲವಾಗುವ ಸಾಧ್ಯತೆ ಹೆಚ್ಚು ಎಂಬ ಕಳವಳಗಳು ವ್ಯಕ್ತವಾಗಿವೆ.

English summary
Indian Railways has decided to merge its various departments into one to avoid non cooperation and constant turf war among them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X