ಹೆಚ್ಚಿದ ಬೇಡಿಕೆ! ಜೂನ್ನಲ್ಲಿ 660 ಹೆಚ್ಚುವರಿ ರೈಲುಗಳ ಸಂಚಾರ
ನವದೆಹಲಿ, ಜೂನ್ 20: ದೇಶದೆಲ್ಲೆಡೆ ಕೊರೊನಾ ಸೋಂಕು ತಗ್ಗುತ್ತಿರುವ ನಡುವೆಯೇ, ಭಾರತೀಯ ರೈಲ್ವೆಯು ಸಾರ್ವಜನಿಕರಿಗೆ ಪ್ರಯಾಣಿಕ ಸೌಲಭ್ಯ ಒದಗಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ದೇಶದ ವಿವಿಧ ಭಾಗಗಳಿಗೆ ಹೆಚ್ಚಿನ ಸಂಖ್ಯೆಯ ವಿಶೇಷ ರೈಲುಗಳನ್ನು ಓಡಿಸಲು ಕ್ರಮ ಕೈಗೊಳ್ಳುತ್ತಿದೆ. ವಲಸೆ ಕಾರ್ಮಿಕರು ಮತ್ತು ರೈಲು ಪ್ರಯಾಣಕ್ಕೆ ಕಾಯುತ್ತಿರುವವರ ಪಟ್ಟಿ ಏರಿಕೆ ಕಾಣುತ್ತಿರುವುದರಿಂದ, ಭಾರತೀಯ ರೈಲ್ವೆಯು ರೈಲುಗಳ ಸಂಚಾರ ಸಂಖ್ಯೆಯನ್ನು ಹೆಚ್ಚಿಸುತ್ತಿದೆ.
ಕೋವಿಡ್-19 2ನೇ ಅಲೆ ಕಾಣಿಸಿಕೊಳ್ಳುವ ಮುನ್ನ ದೇಶಾದ್ಯಂತ ದಿನನಿತ್ಯ ಸರಾಸರಿ 1768 ಮೇಲ್/ಎಕ್ಸ್ಪ್ರೆಸ್ ರೈಲುಗಳು ಸಂಚರಿಸುತ್ತಿದ್ದವು. ಜೂನ್ 18ಕ್ಕೆ ಅನ್ವಯವಾಗುವಂತೆ, ದಿನನಿತ್ಯ ಸುಮಾರು 983 ಮೇಲ್/ಎಕ್ಸ್ಪ್ರೆಸ್ ರೈಲುಗಳು ಕಾರ್ಯಾಚರಣೆ ನಡೆಸುತ್ತಿವೆ. ಕೋವಿಡ್-ಪೂರ್ವದ ಮಟ್ಟಕ್ಕೆ ಹೋಲಿಸಿದರೆ ಶೇಕಡ 56ರಷ್ಟು ಪ್ರಮಾಣ ಇದಾಗಿದೆ. ಆದರೆ ಇದೀಗ ಬೇಡಿಕೆಗೆ ಅನುಗುಣವಾಗಿ ರೈಲುಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲಾಗುತ್ತಿದೆ.
ಬೆಂಗಳೂರು-ಮೈಸೂರು ಪ್ರಯಾಣಿಕರಿಗೆ ಶುಭ ಸುದ್ದಿ, ರೈಲು ಸೇವೆ ಪುನರಾರಂಭ
01.06.2021ಕ್ಕೆ ಅನ್ವಯವಾಗುವಂತೆ, ಸುಮಾರು 800 ಮೇಲ್/ಎಕ್ಸ್ಪ್ರೆಸ್ ರೈಲುಗಳು ಕಾರ್ಯಾಚರಣೆಯಲ್ಲಿವೆ. 01.06.2021ರಿಂದ 18.06.2021ರ ವರೆಗೆ ಹೆಚ್ಚುವರಿ 660 ಮೇಲ್/ಎಕ್ಸ್ಪ್ರೆಸ್ ರೈಲುಗಳ ಕಾರ್ಯಾಚರಣೆಗೆ ಅನುಮೋದನೆ ನೀಡಲಾಗಿದೆ.
ಸ್ಥಳೀಯ ಪರಿಸ್ಥಿತಿ, ಟಿಕೆಟ್ಗಳ ಬೇಡಿಕೆ ಮತ್ತು ಈ ಪ್ರದೇಶದಲ್ಲಿನ ಕೋವಿಡ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ರೈಲುಗಳನ್ನು ಶ್ರೇಣೀಕೃತ ರೀತಿಯಲ್ಲಿ ಮರುಸ್ಥಾಪಿಸಲು ವಲಯ ರೈಲ್ವೆಗೆ ಸೂಚಿಸಲಾಗಿದೆ ಎಂಬುದು ಗಮನಾರ್ಹ ವಿಷಯವಾಗಿದೆ. ವಲಯವಾರು ರೈಲುಗಳ ವಿವರ ಇಲ್ಲಿದೆ..
ಹಲವು ರೈಲುಗಳ ಸಂಚಾರ ಆರಂಭಿಸಲಿದೆ ನೈಋತ್ಯ ರೈಲ್ವೆ, ಪಟ್ಟಿ
ಜೂನ್ನಲ್ಲಿ ಹೆಚ್ಚುವರಿ ರೈಲುಗಳ ಸಂಚಾರ | |||||
---|---|---|---|---|---|
ಕ್ರಮ ಸಂಖ್ಯೆ | ರೈಲ್ವೆ | ಮೇಲ್/ ಎಕ್ಸ್ಪ್ರೆಸ್ ರೈಲು | ರಜೆ, ವಿಶೇಷ ರೈಲು | ಒಟ್ಟು | |
01 | ಕೇಂದ್ರೀಯ ರೈಲ್ವೆ | 24 | 2 | 26 | |
02 | ಕೇಂದ್ರೀಯ ರೈಲ್ವೆ | 10 | 8 | 18 | |
03 | ಕೆ.ಎಸ್.ಈಶ್ವರಪ್ಪ | ಪೂರ್ವ ರೈಲ್ವೆ | 64 | 4 | 68 |
04 | ಉತ್ತರ ಕೇಂದ್ರೀಯ ರೈಲ್ವೆ | 16 | 0 | 16 | |
05 | ಈಶಾನ್ಯ ರೈಲ್ವೆ | 32 | 6 | 38 | |
06 | ಈಶಾನ್ಯ ಪ್ರಾಂತೀಯ ರೈಲ್ವೆ | 28 | 0 | 28 | |
07 | ಉತ್ತರ ರೈಲ್ವೆ | 158 | 0 | 158 | |
08 | ವಾಯುವ್ಯ ರೈಲ್ವೆ | 32 | 2 | 34 | |
09 | ದಕ್ಷಿಣ ಕೇಂದ್ರೀಯ ರೈಲ್ವೆ | 20 | 64 | 84 | |
10 | ಆಗ್ನೇಯ ಕೇಂದ್ರೀಯ ರೈಲ್ವೆ | 16 | 0 | 16 | |
11 | ಆಗ್ನೇಯ ರೈಲ್ವೆ | 44 | 16 | 60 | |
12 | ದಕ್ಷಿಣ ರೈಲ್ವೆ | 66 | 4 | 70 | |
13 | ಪಶ್ಚಿಮ ಕೇಂದ್ರೀಯ ರೈಲ್ವೆ | 28 | 0 | 28 | |
14 | ಪಶ್ಚಿಮ ರೈಲ್ವೆ | 14 | 2 | 16 |