ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಡ್‌ನ್ಯೂಸ್‌:ಇನ್ಮುಂದೆ ಪ್ಲಾಟ್‌ಫಾರ್ಮ್ ಟಿಕೆಟ್ ಇದ್ದರೆ ಸಾಕು ರೈಲು ಹತ್ತಬಹುದು!

|
Google Oneindia Kannada News

ನವದೆಹಲಿ, ಜೂನ್ 17: ಇನ್ನುಮುಂದೆ ಕೇವಲ ಪ್ಲಾಟ್‌ಫಾರ್ಮ್ ಟಿಕೆಟ್ ಇದ್ದರೆ ಸಾಕು ರೈಲು ಹತ್ತಬಹುದು, ಹೌದು ಮುಂಗಡವಾಗಿ ಟಿಕ್ ಕಾಯ್ದಿರಿಸದೆ ಇದ್ದರೂ, ಟಿಕೆಟ್ ಪಡೆದುಕೊಳ್ಳದೆ ಇದ್ದರೂ ಕೂಡ ರೈಲು ಹತ್ತಬಹುದಾಗಿದೆ.

ಯುಟಿಸಿ ಆಪ್‌ ಮೂಲಕ ಇಲ್ಲವೇ ಸ್ಟೇಷನ್‌ ಗಳಲ್ಲಿರುವ ವೆಂಡಿಂಗ್‌ ಮೆಷಿನ್‌ ಗಳ ಮೂಲಕ ಪ್ಲಾಟ್‌ಫಾಮ್‌ ಟಿಕೆಟ್‌ ಪಡೆದುಕೊಂಡರೆ ಸಾಕು. ಅದರೊಂದಿಗೆ ರೈಲು ಹತ್ತಬಹುದು. ರೈಲು ಹತ್ತಿದ ನಂತರ ಅದನ್ನು ಟಿಟಿಇಗೆ ತೋರಿಸಿ ಟಿಕೆಟ್‌ ಪಡೆದುಕೊಳ್ಳಬಹುದು. ಅಷ್ಟೇ ಅಲ್ಲ ಸೀಟುಗಳು ಲಭ್ಯವಿದ್ದರೆ ರಿಸರ್ವೇಷನ್ ಮಾಡಿಸಿಕೊಂಡು ಟಿಕೆಟ್ ಹೊಂದಬಹುದು.

Indian Railways

ಕೇವಲ ಪ್ಲಾಟ್‌ಫಾರ್ಮ್ ಟಿಕೆಟ್‌ ಇದ್ದರೆ ಸಾಕು. ರೈಲು ಹತ್ತಿದ ನಂತರ ಪ್ಲಾಟ್‌ಫಾರ್ಮ್ ಟಿಕೆಟ್‌ ಅನ್ನು ಟಿಟಿಇಗೆ ತೋರಿಸಿ, ಟಿಕೆಟ್‌ ಖರೀದಿಸಿದರೆ ಸಾಕು. ಕೊನೆಯ ನಿಮಿಷಗಳಲ್ಲಿ ಗಡಿ ಬಿಡಿಯಿಂದ ರೈಲ್ವೆ ನಿಲ್ದಾಣಗಳಿಗೆ ತಲುಪಿ ಹೈರಾಣವಾಗುವುದನ್ನು ತಪ್ಪಿಸಲು ಭಾರತೀಯ ರೈಲ್ವೆ ಈ ಸೌಲಭ್ಯವನ್ನು ಪ್ರಯಾಣಿಕರಿಗೆ ಕಲ್ಪಿಸಿದೆ.

ರೈಲಿಗೆ ಬೆಂಕಿ ತಗುಲಿದಾಗ ಏನು ಮಾಡಬೇಕು?: ಭಾರತೀಯ ರೈಲ್ವೆ ಸಿಬ್ಬಂದಿಗಳಿಗೆ ಹೊಸ ಮಾರ್ಗಸೂಚಿರೈಲಿಗೆ ಬೆಂಕಿ ತಗುಲಿದಾಗ ಏನು ಮಾಡಬೇಕು?: ಭಾರತೀಯ ರೈಲ್ವೆ ಸಿಬ್ಬಂದಿಗಳಿಗೆ ಹೊಸ ಮಾರ್ಗಸೂಚಿ

ಮುಂಗಡ ಟಿಕೆಟ್‌ ಕಾಯ್ದಿರಿಸದೆ ಸ್ಟೇಷನ್‌ ಗೆ ಬರುವ ಪ್ರಯಾಣಿಕರು ಅಲ್ಲಿನ ಟಿಕೆಟ್‌ ಕೌಂಟರ್‌ಗಳ ಮುಂದೆ ಕ್ಯೂ ನಿಲ್ಲುವ ಅಗತ್ಯವಿಲ್ಲ. ರೈಲಿನಲ್ಲಿ ಪ್ರಯಾಣಿಸಬೇಕಿದ್ದರೆ ತಿಂಗಳು ಅಥವಾ ವಾರದ ಮೊದಲೇ ಟಿಕೆಟ್ ಕಾಯ್ದಿರಿಸಲಾಗುತ್ತದೆ, ಎರಡು ರೀತಿಯಲ್ಲಿ ಟಿಕೆಟ್ ಖರೀದಿಸಿ ರೈಲಿನಲ್ಲಿ ಪ್ರಯಾಣಿಸಬಹುದು.

ಒಂದು ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಸಬಹುದಾಗಿದೆ, ಒಂದೊಮ್ಮೆ ಏಕಾಏಕಿ ಯಾವುದೋ ಕಾರ್ಯದ ನಿಮಿತ್ತ ನೀವು ಹೊರಗೆ ಹೋಗಬೇಕಿದ್ದರೆ ಅಂತಹ ಸಮಯದಲ್ಲಿ ತತ್ಕಾಲ್ ಮೂಲಕ ಟಿಕೆಟ್ ಖರೀದಿಸಬಹುದು.

ಆದರೆ ಇದೀಗ ಇದ್ಯಾವುದೇ ತಲೆ ಬಿಸಿ ಇಲ್ಲದ ಕೇವಲ ಪ್ಲಾಟ್‌ಫಾರ್ಮ್ ಟಿಕೆಟ್‌ ಇದ್ದರೆ ರೈಲು ಹತ್ತಬಹುದು, ಯಾವುದೇ ಕ್ಯೂನಲ್ಲಿ ನಿಲ್ಲುವ ಅನಿವಾರ್ಯತೆ ಎದುರಾಗುವುದಿಲ್ಲ ಬಳಿಕ ಟಿಕೆಟ್ ಪಡೆಯಬಹುದಾಗಿದೆ.

English summary
If you do not have a reservation and have boarded the train with only a platform ticket, then there is no need to panic. You can get tickets very easily by going to the ticket checker.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X