ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲಿನಲ್ಲಿ ಮಸಾಜ್ ಸೌಲಭ್ಯ, ದೇಶದ ರೈಲ್ವೇ ಇತಿಹಾಸದಲ್ಲೇ ಇದು ಮೊದಲು

|
Google Oneindia Kannada News

ನವದೆಹಲಿ, ಜೂನ್ 8 : ರೈಲಿನಲ್ಲಿ, ಊಟ, ತಿಂಡಿ, ಪಾನೀಯಗಳ ಸೌಲಭ್ಯವನ್ನು ನೀಡುತ್ತಿದ್ದ ರೈಲ್ವೆ ಇಲಾಖೆ ಇದೇ ಮೊದಲ ಬಾರಿಗೆ ಮಸಾಜ್ ಸೌಲಭ್ಯವನ್ನು ಪ್ರಯಾಣಿಕರಿಗೆ ನೀಡಲು ನಿರ್ಧರಿಸಿದೆ.

ಇದು ಭಾರತೀಯ ರೈಲ್ವೆ ಇತಿಹಾಸದಲ್ಲೇ ಮೊದಲ ಹೆಜ್ಜೆಯಾಗಿದೆ. ಅಗತ್ಯವಿರುವ ಪ್ರಯಾಣಿಕರು ಇದರ ಸೇವೆ ಪಡೆದುಕೊಳ್ಳಬಹುದು. ಪಶ್ಚಿಮ ರೈಲ್ವೆ ವಲಯದ ರತ್ಲಾಮ್ ವಿಭಾಗದಿಂದ ರೈಲಿನಲ್ಲಿ ಮಸಾಜ್ ಸೌಲಭ್ಯ ಕಲ್ಪಿಸಬೇಕೆಂಬ ಪ್ರಸ್ತಾವನೆ ಬಂದಿತ್ತು. ರೈಲ್ವೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ರಯಾಣಿಕರಿಗೆ ಮಸಾಜ್ ಸೇವೆ ಒದಗಿಸಲಾಗುತ್ತಿದೆ.

100 ರೈಲುಗಳ ನಿರ್ವಹಿಸುವ ಬೆಂಗಳೂರಿನ ನಿಲ್ದಾಣದಲ್ಲಿ ನೂರಾರು ಸಮಸ್ಯೆ 100 ರೈಲುಗಳ ನಿರ್ವಹಿಸುವ ಬೆಂಗಳೂರಿನ ನಿಲ್ದಾಣದಲ್ಲಿ ನೂರಾರು ಸಮಸ್ಯೆ

ಚಲಿಸುತ್ತಿರುವ ರೈಲುಗಳಲ್ಲಿ ಪ್ರಯಾಣಿಕರ ಸೌಕರ್ಯಕ್ಕಾಗಿ ನಾವು ಮಸಾಜ್ ಸೇವೆ ಒದಗಿಸುತ್ತೇವೆ ಅದು ಆದಾಯವನ್ನು ಮಾತ್ರ ಹೆಚ್ಚಿಸುವುದಲ್ಲ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರನ್ನೂ ಸೆಳೆಯಲಿದೆ ಎಂದು ರೈಲ್ವೆ ಮಂಡಳಿ ಮಾಧ್ಯಮ ಮತ್ತು ಸಂವಹನ ನಿರ್ದೇಶಕ ರಾಜೇಶ್ ಬಾಜ್ ಪೇಯ್ ಹೇಳಿದ್ದಾರೆ.

Indian railway privide massage facility in trains

ಪ್ರಾಥಮಿಕ ಹಂತದಲ್ಲಿ ಈ ಸೌಲಭ್ಯವನ್ನು ಇಂದೋರ್ ನಿಂದ ಹೊರಡುವ 39 ರೈಲುಗಳಲ್ಲಿ ಕಲ್ಪಿಸಲಾಗಿದೆ ಎಂದು ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. ಪಾದಗಳ ಮಸಾಜ್ ಹಾಗೂ ತಲೆ ಮಸಾಜ್ ಗಳ ಸೇವೆಗೆ 100 ರೂ.ದರವನ್ನು ನಿಗದಿಪಡಿಸಲಾಗಿದೆ.

ಇಂತಹಾ ಒಪ್ಪಂದವೊಂದಕ್ಕೆ ಇದೇ ಮೊದಲ ಬಾರಿಗೆ ಸಹಿ ಹಾಕಲಾಗಿದೆ.ಈ ಸೇವೆಯಿಂದ ರೈಲ್ವೆಗೆ ವಾರ್ಷಿಕವಾಗಿ ರೂ 20 ಲಕ್ಷ ಹೆಚ್ಚುವರಿ ಆದಾಯ ಲಭ್ಯವಾಗಲಿದೆ. ಅಲ್ಲದೆ 20,000 ಮಸಾಜ್ ಸೇವಾಕರ್ತರು ರೈಲ್ವೆ ಟಿಕೆಟ್ ಪಡೆದುಕೊಳ್ಲುವುದರಿಂದ ವಾರ್ಷಿಕ 90 ಲಕ್ಷ ರೂ. ಹೆಚ್ಚುವರಿ ಟಿಕೆಟ್ ಮಾರಾಟವಾಗುವ ನಿರೀಕ್ಷೆ ಇದೆ.

English summary
Indian railway privide massage facility in trains,This facility will be made available in 39 trains departing from Indore, a railway official said Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X