ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡೇ ತಿಂಗಳಲ್ಲಿ 42 ಕೋಟಿ ದಂಡ ವಸೂಲಿ ಮಾಡಿದ ಕೇಂದ್ರ ರೈಲ್ವೆ

By Nayana
|
Google Oneindia Kannada News

ಬೆಂಗಳೂರು, ಜೂನ್ 8: ಭಾರತೀಯ ರೈಲ್ವೆ ಇಲಾಖೆಯು ಏಪ್ರಿಲ್ ಮತ್ತು ಮೇ ಎರಡು ತಿಂಗಳಲ್ಲಿ ಪ್ರಯಾಣಿಕರಿಂದ ದಂಡದ ರೂಪದಲ್ಲಿ 42.15 ಕೋಟಿ ರೂ. ಆದಾಯವನ್ನು ಗಳಿಸಿದೆ.

ಏಪ್ರಿಲ್ , ಮೇ ತಿಂಗಳ ಅವಧಿಯಲ್ಲಿ 7.59 ಲಕ್ಷ ಟಿಕೆಟ್ ರಹಿತ ಪ್ರಯಾಣ , ಅನಿಯಮಿತ ಪ್ರಯಾಣ ಮತ್ತು ಕಾಯ್ದಿರಿಸದ ಲಗೇಜ್ ಪ್ರಕರಣಗಳು ಪತ್ತೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 7.25 ಲಕ್ಷ ಪ್ರಕರಣವನ್ನು ಪತ್ತೆ ಮಾಡಲಾಗಿತ್ತು. ಆದರೆ ಈ ಬಾರಿ ಶೇ.4.70ರಷ್ಟು ಪ್ರಕರಣಗಳು ಹೆಚ್ಚಳವಾಗಿದೆ ಎಂದು ಕೇಂದ್ರ ರೈಲ್ವೆ ತಿಳಿಸಿದೆ.

ರೈಲು ತಡವಾದರೆ ಅಧಿಕಾರಿಗಳ ಬಡ್ತಿಗೆ ತಡೆರೈಲು ತಡವಾದರೆ ಅಧಿಕಾರಿಗಳ ಬಡ್ತಿಗೆ ತಡೆ

ಟಿಕೆಟ್ ರಹಿತ ಪ್ರಯಾಣ ಮತ್ತು ಅನಿಯಮಿತ ಪ್ರಯಾಣಿಕರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ, ಅದಕ್ಕೆ ಕಡಿವಾಣ ಹಾಕಲು ದಂಡವನ್ನು ಸಂಗ್ರಹಿಸಲಾಗುತ್ತಿದೆ. ಈ ಪ್ರಕರಣಗಳಿಂದಾಗಿ ದಂಡದ ರೂಪದಲ್ಲಿ ವಸೂಲಿಯಾದ ಹಣವು 42.15 ಕೋಟಿ ರೂಪಾಯಿಯಾಗಿದೆ. ಇದೇ ಅವಧಿಯಲ್ಲಿ 2017ರಲ್ಲಿ 41.22 ಕೋಟಿ ರೂ. ಗಳಿಸಲಾಗಿತ್ತು. ಈ ಬಾರಿ ಶೇ. 2.25ರಷ್ಟು ಹೆಚ್ಚುವರಿ ದಂಡ ವಸೂಲಿಯಾಗಿದೆ.

Indian railway imposes highest penalty ever!

ಇದಲ್ಲದೆ, ಸುಮಾರು 1,517 ಕಾಯ್ದಿರಿಸಿದ ಟಿಕೆಟ್​ಗಳ ವರ್ಗಾವಣೆ ಪ್ರಕರಣಗಳು ಪತ್ತೆಯಾಗಿದ್ದು, ಇದರಿಂದ 12.77 ಲಕ್ಷ ರೂ. ದಂಡವನ್ನು ಸಂಗ್ರಹಿಸಲಾಗಿದೆ. ಟಿಕೆಟ್‌ ರಹಿತ ಪ್ರಯಾಣ ಮತ್ತು ಅನಿಯಮಿತ ಪ್ರಯಾಣಿಕರಿಂದ ದಂಡದ ರೂಪದಲ್ಲಿ ಭಾರತೀಯ ರೈಲ್ವೆ ದಾಖಲೆ ಪ್ರಮಾಣದ ದಂಡವನ್ನು ಸಂಗ್ರಹಿಸಿದೆ.

English summary
In the last two months, India railway had imposed ever highest amount of penalty on ticket less traveling and over weight luggage transportation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X