ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

Droupadi Murmu Swearing-in LIVE: ದ್ರೌಪದಿ ಮುರ್ಮು ಪದಗ್ರಹಣ

|
Google Oneindia Kannada News

ನವದೆಹಲಿ, ಜುಲೈ 25: ಭಾರತದ 15ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ದ್ರೌಪದಿ ಮುರ್ಮು ಸೋಮವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರು ಮುರ್ಮು ಅವರಿಗೆ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯ ಪ್ರಮಾಣ ವಚನ ಬೋಧಿಸಿದರು.

ಸೋಮವಾರದಿಂದ ಮುಂಗಾರು ಅಧಿವೇಶನ- ಮಂಡನೆಯಾಗಲಿರುವ ಮಸೂದೆಗಳ ಪಟ್ಟಿಸೋಮವಾರದಿಂದ ಮುಂಗಾರು ಅಧಿವೇಶನ- ಮಂಡನೆಯಾಗಲಿರುವ ಮಸೂದೆಗಳ ಪಟ್ಟಿ

ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ 21 ಗನ್ ಸೆಲ್ಯೂಟ್ ನಡೆಯಿತು. ನಂತರ ಮುರ್ಮು ಅವರು ಭಾರತದ 15 ನೇ ರಾಷ್ಟ್ರಪತಿಯಾಗಿ ಸೆಂಟ್ರಲ್ ಹಾಲ್‌ನಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಮತ್ತು ಇತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

https://kannada.oneindia.com/news/india/parliament-monsoon-session-live-updates-in-kannada-rajya-sabha-lok-sabha-news-261988.html

ರಾಷ್ಟ್ರಪತಿ ಪ್ರಮಾಣವಚನ ಸ್ವೀಕಾರ ಮತ್ತು ಸಂಸತ್ ಭವನದಲ್ಲಿ ದ್ರೌಪದಿ ಮುರ್ಮು ಮೊದಲ ಬಾಷಣದ ಕುರಿತು ಕ್ಷಣಕ್ಷಣದ ಅಪ್‌ಡೇಟ್‌ಗಾಗಿ ಮುಂದೆ ಓದಿ.

Newest FirstOldest First
7:03 PM, 25 Jul

ಅಗತ್ಯ ಆಹಾರ ಸರಕುಗಳ ಮೇಲಿನ ಜಿಎಸ್‌ಟಿ, ಹೆಚ್ಚಿನ ಹಣದುಬ್ಬರ ಮತ್ತು ಬೆಲೆ ಏರಿಕೆ ಕುರಿತು ಚರ್ಚೆಗೆ ಒತ್ತಾಯಿಸಿ ವಿಪಕ್ಷ ನಾಯಕರು ಅಧಿವೇಶನದ ಬಾವಿಗಿಳಿದು ಪ್ರತಿಭಟಿಸಿದರು. ಅಧಿವೇಶನ ಆರಂಭದ 6 ನೇ ದಿನವೂ ಘೋಷಣೆಗಳಿಂದ ಕಲಾಪಕ್ಕೆ ಅಡ್ಡಿಪಡಿಸಿದ 4 ಕಾಂಗ್ರೆಸ್ ಸಂಸದರನ್ನು ಲೋಕಸಭೆಯಿಂದ ಅಮಾನತುಗೊಳಿಸಲಾಗಿದೆ.
1:01 PM, 25 Jul

ಭಾರತದ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ರಾಷ್ಟ್ರಪತಿ ಭವನದಿಂದ ಜನಪಥ್ ರಸ್ತೆಯ ತಮ್ಮ ಹೊಸ ನಿವಾಸಕ್ಕೆ ಭೇಟಿ ನೀಡಿದರು.
11:55 AM, 25 Jul

ರಾಷ್ಟ್ರಪತಿ ಭವನದಲ್ಲಿ ದ್ರೌಪದಿ ಮುರ್ಮುರಿಗೆ ಮೂರು ಸೇನೆಗಳಿಂದ ಗೌರವ ಅರ್ಪಣೆ.
11:54 AM, 25 Jul

ರಾಷ್ಟ್ರಪತಿ ಭವನಕ್ಕೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ.
11:19 AM, 25 Jul

ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮುರಿಗೆ ವಿಧ್ಯುಕ್ತ ಗೌರವ ವಂದನೆ ಸ್ವೀಕರಿಸಿದರು. ಅವರ ಜೊತೆ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕೂಡ ಇದ್ದರು.
10:42 AM, 25 Jul

ವರ್ಷಗಟ್ಟಲೆ ಅಭಿವೃದ್ಧಿ ಕಾಣದ ಜನರು-ಬಡವರು, ದಲಿತರು, ಹಿಂದುಳಿದವರು, ಗಿರಿಜನರು- ನನ್ನನ್ನು ತಮ್ಮ ಪ್ರತಿಬಿಂಬವಾಗಿ ನೋಡುತ್ತಾರೆ ಎಂಬ ತೃಪ್ತಿ ನನಗಿದೆ. ನನ್ನ ನಾಮನಿರ್ದೇಶನದ ಹಿಂದೆ ಬಡವರ ಆಶೀರ್ವಾದವಿದೆ, ಇದು ಕೋಟಿಗಟ್ಟಲೆ ಮಹಿಳೆಯರ ಕನಸು ಮತ್ತು ಸಾಮರ್ಥ್ಯದ ಪ್ರತಿಬಿಂಬವಾಗಿದೆ ಎಂದು ಮುರ್ಮು ಹೇಳಿದ್ದಾರೆ.
10:41 AM, 25 Jul

ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಆಗಿರುವುದು ನನ್ನ ವೈಯಕ್ತಿಕ ಸಾಧನೆಯಲ್ಲ, ಇದು ಭಾರತದ ಪ್ರತಿಯೊಬ್ಬ ಬಡವರ ಸಾಧನೆ. ನನ್ನ ನಾಮನಿರ್ದೇಶನವು ಭಾರತದಲ್ಲಿನ ಬಡವರು ಕನಸುಗಳನ್ನು ಮಾತ್ರವಲ್ಲದೆ ಆ ಕನಸುಗಳನ್ನು ನನಸಾಗಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
Advertisement
10:40 AM, 25 Jul

ಸ್ವತಂತ್ರ ಭಾರತದಲ್ಲಿ ಜನಿಸಿದ ದೇಶದ ಮೊದಲ ರಾಷ್ಟ್ರಪತಿ ನಾನು. ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಸ್ವತಂತ್ರ ಭಾರತದ ನಾಗರಿಕರೊಂದಿಗೆ ಹೊಂದಿದ್ದ ನಿರೀಕ್ಷೆಗಳನ್ನು ಪೂರೈಸಲು ನಮ್ಮ ಪ್ರಯತ್ನಗಳನ್ನು ವೇಗಗೊಳಿಸಬೇಕಾಗಿದೆ ಎಂದು ಮುರ್ಮು ಹೇಳಿದರು.
10:39 AM, 25 Jul

"ಎಲ್ಲಾ ಭಾರತೀಯರ ನಿರೀಕ್ಷೆಗಳು, ಆಕಾಂಕ್ಷೆಗಳು ಮತ್ತು ಹಕ್ಕುಗಳ ಸಂಕೇತವಾಗಿದೆ. ಸಂಸತ್ತಿನಲ್ಲಿ ನಿಂತು ನಾನು ನಿಮ್ಮೆಲ್ಲರಿಗೂ ವಿನಮ್ರವಾಗಿ ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಈ ಹೊಸ ಜವಾಬ್ದಾರಿಯನ್ನು ನಿರ್ವಹಿಸಲು ನಿಮ್ಮ ನಂಬಿಕೆ ಮತ್ತು ಬೆಂಬಲ ನನಗೆ ಪ್ರಮುಖ ಶಕ್ತಿಯಾಗಿದೆ," ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ತಿಳಿಸಿದ್ದಾರೆ.
10:38 AM, 25 Jul

ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಭರ್ಜರಿ ಚಪ್ಪಾಳಿ ಗಿಟ್ಟಿಸಿಕೊಂಡ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು.
10:33 AM, 25 Jul

ದೇಶದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಪ್ರಮಾಣವಚನ ಸ್ವೀಕಾರ.
1:39 PM, 22 Jul

ಹಣದುಬ್ಬರ ಸಮಸ್ಯೆಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಸದಸ್ಯರ ಗದ್ದಲದ ನಡುವೆ ರಾಜ್ಯಸಭೆಯನ್ನು ಮಧ್ಯಾಹ್ನ 2.30 ಕ್ಕೆ ಮುಂದೂಡಲಾಯಿತು.
Advertisement
1:38 PM, 22 Jul

ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಧಿಕ್ಕಾರ ಘೋಷಣೆಗಳ ಮದ್ಯೆ ಲೋಕಸಭೆ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ.
11:48 PM, 21 Jul

ಭಾರತದ ರಾಷ್ಟ್ರಪತಿಗಳ ಪಟ್ಟಿ:ಡಾ. ರಾಜೇಂದ್ರ ಪ್ರಸಾದ್ -ದ್ರೌಪದಿ ಮುರ್ಮು

ಅಂದಿನಿಂದ ಇಂದಿನ ತನಕ ಭಾರತದ ರಾಷ್ಟ್ರಪತಿ ಆಯ್ಕೆಗೆ ಚುನಾವಣೆ ಮೂಲಕವೇ ನಡೆದಿದೆ. ಡಾ. ರಾಜೇಂದ್ರ ಪ್ರಸಾದ್ ಅವರು ಕೂಡಾ ಚುನಾವಣೆ ಎದುರಿಸಿ 507,400 ಮತಗಳನ್ನು ಗಳಿಸಿ ಜಯಭೇರಿ ಬಾರಿಸಿದ್ದರು. ನೀಲಂ ಸಂಜೀವ್ ರೆಡ್ಡಿ ಅವರು ಮಾತ್ರ ಅವಿರೋಧವಾಗಿ ಆಯ್ಕೆಯಾಗಿದ್ದರು. ಭಾರತದ 15ನೇ ರಾಷ್ಟ್ರಪತಿಗಳಾಗಿ ದ್ರೌಪದಿ ಮುರ್ಮು ಇಂದು ಆಯ್ಕೆಯಾಗಿದ್ದಾರೆ. ಇಲ್ಲಿ ತನಕ ಆಯ್ಕೆಯಾಗಿರುವ ರಾಷ್ಟ್ರಪತಿಗಳ ಪಟ್ಟಿ ಇಲ್ಲಿದೆ...
11:43 PM, 21 Jul

ಗೌರವಾನ್ವಿತ ರಾಷ್ಟ್ರಪತಿಯಾಗಿ ಆಯ್ಕೆಯಾದ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಅಭಿನಂದಿಸಲು ಬಯಸುತ್ತೇನೆ. ನಮ್ಮ ಸಂವಿಧಾನದ ಆದರ್ಶಗಳನ್ನು ರಕ್ಷಿಸಲು ರಾಷ್ಟ್ರದ ಮುಖ್ಯಸ್ಥರಾಗಿ ದೇಶವು ನಿಮ್ಮನ್ನು ಪ್ರಾಮಾಣಿಕವಾಗಿ ಎದುರು ನೋಡುತ್ತದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.
11:35 PM, 21 Jul

ವಿರೋಧ ಪಕ್ಷದ ಸದಸ್ಯರಿಂದ ಅಡ್ಡ ಮತದಾನದ ಮೂಲಕ ದ್ರೌಪದಿ ಮುರ್ಮು ಅವರ ಸಂಖ್ಯೆ ಹೆಚ್ಚಾಗಿದೆ. ಪ್ರತಿಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ಅವರಿಗೆ ತಮ್ಮ ಪಕ್ಷಗಳ ಹೇಳಿಕೆಯ ಬೆಂಬಲವನ್ನು ಧಿಕ್ಕರಿಸಿ ಅಧ್ಯಕ್ಷರಾಗಿ ಚುನಾಯಿತರಾದ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಲು ರಾಜ್ಯಾದ್ಯಂತದ ವಿಧಾನಸಭೆಗಳಿಂದ ಸಾಕಷ್ಟು ಸಂಖ್ಯೆಯ ಶಾಸಕರು ಅಡ್ಡ ಮತದಾನ ಮಾಡಿದರು ಎಂದು ಮೂಲಗಳು ಗುರುವಾರ ತಿಳಿಸಿವೆ.
11:26 PM, 21 Jul

Draupadi Murmu: ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಬಗ್ಗೆ ಒಂದು ಪರಿಚಯ

ಬುಡಕಟ್ಟು ಸಮುದಾಯದ ದ್ರೌಪದಿ ಮುರ್ಮು ಭಾರತದ ನೂತನ ರಾಷ್ಟ್ರಪತಿ ಸ್ಥಾನ ಅಲಂಕರಿಸಿದ್ಧಾರೆ. ಇಂದು ನಡೆದ ಚುನಾವಣೆಯಲ್ಲಿ ದ್ರೌಪದಿ ಮುರ್ಮು ನಿರೀಕ್ಷಿತ ಗೆಲುವು ಸಾಧಿಸಿದ್ದಾರೆ.
11:13 PM, 21 Jul

ದೇಶದ ನೂತನ ರಾಷ್ಟ್ರಪತಿಗಳಾಗಿ ಆಯ್ಕೆಯಾಗಿರುವಂತಹ ದ್ರೌಪದಿ ಮುರ್ಮು ಅವರಿಗೆ ಅಭಿನಂದನೆಗಳು. ತಮ್ಮ ಕಾಲಾವಧಿಯಲ್ಲಿ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ಉಳಿಸಿ, ಬೆಳೆಸುವ ಕೆಲಸವಾಗಲಿ ಎಂದು ಹಾರೈಸುತ್ತೇನೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
9:08 PM, 21 Jul

ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಗೃಹ ಸಚಿವ ಅಮಿತ್‌ ಶಾ ಅಭಿನಂದನೆ ಸಲ್ಲಿಸಿದರು.
9:06 PM, 21 Jul

ಭಾರತೀಯ ಪ್ರಜಾಪ್ರಭುತ್ವಕ್ಕೆ ಇಂದು ಗಮನಾರ್ಹ ದಿನ. 15 ನೇ ರಾಷ್ಟ್ರಪತಿಯಾಗಿ ಶ್ರೀಮತಿ ದ್ರೌಪದಿ ಮುರ್ಮು ಅವರ ಆಯ್ಕೆಯು ಅಧಿಕೃತ ಮತ್ತು ಅಂತರ್ಗತ ಭಾರತದ ಹೇಳಿಕೆಯಾಗಿದೆ.ಇದು ನಮ್ಮ ಲಕ್ಷಾಂತರ ನಾಗರಿಕರಿಗೆ ಸ್ಫೂರ್ತಿಯಾಗಲಿದೆ. ನವ ಭಾರತ ಕೇವಲ ಆಶಯವಲ್ಲ. ಇದು ರಿಯಾಲಿಟಿ ಆಗುತ್ತಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್‌ ತಿಳಿಸಿದ್ದಾರೆ
9:00 PM, 21 Jul

ಮುರ್ಮುಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅಭಿನಂದನೆ
8:59 PM, 21 Jul

ಬುಡಕಟ್ಟು ಜನಾಂಗದ ಮಹಿಳೆಯಾದ ನನ್ನ ಸಹೋದರಿ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವುದು ನನಗೆ ಅತೀವ ಸಂತಸ ತಂದಿದೆ. ಅವಳು ಬಾಲ್ಯದಿಂದಲೂ ತುಂಬಾ ಕಷ್ಟಪಟ್ಟಿದ್ದಾಳೆ. ಇದು ಎಲ್ಲರಿಗೂ ಸ್ಫೂರ್ತಿ ಎಂದು ನೂತನ ಅಧ್ಯಕ್ಷೆ ದ್ರೌಪದಿ ಮುರ್ಮು ಅವರ ಸಹೋದರ ತಾರಿಣಿಸೇನ್ ತುಡು ಹೇಳಿದ್ದಾರೆ.
8:55 PM, 21 Jul

ಭಾರತದ ರಾಷ್ಟ್ರಪತಿಯಾಗಿ ಆಯ್ಕೆಯಾದ ದ್ರೌಪದಿಮುರ್ಮು ಅವರನ್ನು ಅಭಿನಂದಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುರ್ಮು ಅವರ ಪರವಾಗಿ ಮತ ಚಲಾಯಿಸಿದ್ದಕ್ಕಾಗಿ ಎನ್‌ಡಿಎ ಮಿತ್ರಪಕ್ಷಗಳು, ಇತರ ರಾಜಕೀಯ ಪಕ್ಷಗಳು ಮತ್ತು ಸ್ವತಂತ್ರ ಪ್ರತಿನಿಧಿಗಳಿಗೆ ಧನ್ಯವಾದಗಳು. ಅವರ ಅಧಿಕಾರಾವಧಿಯು ದೇಶವನ್ನು ಇನ್ನಷ್ಟು ಹೆಮ್ಮೆಪಡಿಸುತ್ತದೆ ಎಂದು ನನಗೆ ಖಾತ್ರಿಯಿದೆ ಎಂದು ಅವರು ಹೇಳಿದರು.
8:51 PM, 21 Jul

ಮುರ್ಮುಗೆ ನೇಪಾಳದ ಪ್ರಧಾನಿ ಅಭಿನಂದನೆ

ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅವರು ಭಾರತದ ರಾಷ್ಟ್ರಪತಿಯಾಗಿ ಆಯ್ಕೆಯಾದ ದ್ರೌಪದಿಮುರ್ಮು ಅವರನ್ನು ಅಭಿನಂದಿಸಿದ್ದಾರೆ. "ಮುಂದಿನ ದಿನಗಳಲ್ಲಿ ನೇಪಾಳ ಮತ್ತು ಭಾರತದ ನಡುವಿನ ಅತ್ಯುತ್ತಮ ದ್ವಿಪಕ್ಷೀಯ ಸಂಬಂಧಗಳು ಹೊಸ ಎತ್ತರವನ್ನು ಕಾಣುತ್ತವೆ ಎಂದು ನನಗೆ ವಿಶ್ವಾಸವಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
8:49 PM, 21 Jul

ದ್ರೌಪದಿ ಮುರ್ಮು ಅಭಿನಂದಿಸಿದ ಜೆ.ಪಿ. ನಡ್ಡಾ
8:39 PM, 21 Jul

ನೂತನ ರಾಷ್ಟ್ರಪತಿಗಳು ಭಾರತದ ಸಂಸದೀಯ ಮೌಲ್ಯಗಳು ಹಾಗೂ ಭವ್ಯ ಪರಂಪರೆಯನ್ನು ಎತ್ತಿಹಿಡಿಯುವರೆಂಬ ನಂಬಿಕೆ ನನಗಿದೆ. ಅವರಿಗೆ ಎಲ್ಲವೂ ಒಳ್ಳೆಯದೇ ಆಗಲಿ ಎಂದು ಹಾರೈಸುತ್ತೇನೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ
8:30 PM, 21 Jul

ದೇಶದ 15ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ಎನ್‌ಡಿಎಯ ದ್ರೌಪದಿ ಮುರ್ಮು ಅವರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಭಿನಂದಿಸಿದ್ದಾರೆ.
8:30 PM, 21 Jul

ಭಾರತದ 15 ನೇ ರಾಷ್ಟ್ರಪತಿಯಾಗಿ ಆಯ್ಕೆಯಾದ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅಭಿನಂದಿಸಿದ್ದಾರೆ
8:29 PM, 21 Jul

ಭಾರತದ ಇತಿಹಾಸ: ಮೋದಿ

1.3 ಶತಕೋಟಿ ಭಾರತೀಯರು ಆಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಸಮಯದಲ್ಲಿ ಪೂರ್ವ ಭಾರತದ ದೂರದ ಭಾಗದಲ್ಲಿ ಜನಿಸಿದ ಬುಡಕಟ್ಟು ಸಮುದಾಯದಿಂದ ಬಂದ ಭಾರತದ ಮಗಳು ನಮ್ಮ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಶ್ರೀಮತಿ ದ್ರೌಪದಿ ಮುರ್ಮು ಜಿ ಅವರಿಗೆ ಅಭಿನಂದನೆಗಳು ಎಂದು ಪ್ರಧಾನಿ ಮೋದಿ ಟ್ವಿಟ್‌ ಮಾಡಿದ್ದಾರೆ.
8:26 PM, 21 Jul

ರಾಮ್ ನಾಥ್ ಕೋವಿಂದ್ ಅಭಿನಂದನೆ

ನಿರ್ಗಮಿತ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ದೇಶದ ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾದ ದ್ರೌಪದಿ ಮುರ್ಮು ಅವರನ್ನು ಅಭಿನಂದಿಸಿದ್ದಾರೆ.
READ MORE

English summary
Draupadi Murmu Oath Taking Ceremony as India's President Live Updates, News and Highlights in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X